Asianet Suvarna News Asianet Suvarna News

ಜನರಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದೆ ಗಣೇಶ ಮಹಾಮಂಡಳ: ಉಚಿತವಾಗಿ ಮಣ್ಣಿನ ಗಣಪ ವಿತರಣೆ!

ಸರ್ಕಾರ ಪ್ರತಿ ವರ್ಷವು ಗೌರಿ ಗಣೇಶ ಹಬ್ಬಕ್ಕೆ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತೆ. ಆದ್ರೆ ಜನ ಪಿಓಪಿ ಗಣಪನ ಮೂರ್ತಿಗಳು ನೋಡಲು ಸುಂದರ-ಸದೃಡ ಎನ್ನುವ ಕಾರಣಕ್ಕೆ ಅವುಗಳನ್ನೆ ಪ್ರತಿಷ್ಠಾಪಿಸುತ್ತಾರೆ.

Ganesha Mahamandal is creating environmental awareness among people at Vijayapura gvd
Author
First Published Sep 18, 2023, 10:23 PM IST

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಸೆ.18): ಸರ್ಕಾರ ಪ್ರತಿ ವರ್ಷವು ಗೌರಿ ಗಣೇಶ ಹಬ್ಬಕ್ಕೆ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತೆ. ಆದ್ರೆ ಜನ ಪಿಓಪಿ ಗಣಪನ ಮೂರ್ತಿಗಳು ನೋಡಲು ಸುಂದರ-ಸದೃಡ ಎನ್ನುವ ಕಾರಣಕ್ಕೆ ಅವುಗಳನ್ನೆ ಪ್ರತಿಷ್ಠಾಪಿಸುತ್ತಾರೆ. ಆದರೆ ಗುಮ್ಮಟನಗರಿ ವಿಜಯಪುರದಲ್ಲಿ ಗಣೇಶ ಮಹಾಮಂಡಳ ಜನರಿಗೆ ಉಚಿತವಾಗಿಯೆ ಮಣ್ಣಿನ ಗಣಪಗಳನ್ನ ನೀಡುವ ಮೂಲಕ ಪರಿಸರ ಜಾಗೃತಿ ಮೂಡಿಸುವ ಕೆಲಸ ಮಾಡ್ತಿದೆ..

ಉಚಿತವಾಗಿಯೇ ಸಾವಿರಾರು ಮಣ್ಣಿನ ಗಣಪಗಳ ವಿತರಣೆ: ಬಹುತೇಕ ಕಡೆಗಳಲ್ಲಿ ಗೌರಿಗಣೇಶ ಹಬ್ಬದಲ್ಲಿ ಜನರು ಪಿಓಪಿ ಗಣಪನ ಮೂರ್ತಿಗಳನ್ನೆ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಬಳಿಕ ಅವುಗಳನ್ನ ನದಿ, ಕೆರೆ, ಬಾವಿಗಳಲ್ಲಿ ವಿಸರ್ಜನೆ ಮಾಡ್ತಾರೆ. ಪಿಓಪಿಯಿಂದಾಗಿ ಜಲ ಮಾಲಿನ್ಯಗೊಳ್ಳುತ್ತೆ. ಹೀಗಾಗಿ ಸರ್ಕಾರ ಪ್ರತಿವರ್ಷವು ಜನರಲ್ಲಿ ಮಣ್ಣಿನ ಗಣಪತಿಯನ್ನ ಪ್ರತಿಷ್ಠಾಪಿಸಿ ಎಂದು ಜಾಗೃತಿ ಮೂಡಿಸುತ್ತಲೆ ಇರುತ್ತೆ. ಆದ್ರೆ ಜನರು ಸರ್ಕಾರ ಮಾತು ಆಲಿಸದೆ ಪಿಓಪಿ ಗಣಪನ ಅಂದಚಂದಕ್ಕೆ ಮನಸೋತು ಅವುಗಳನ್ನೆ ಪೂಜಿಸ್ತಾರೆ. ಆದ್ರೀಗ ಗುಮ್ಮಟನಗರಿ ವಿಜಯಪುರದಲ್ಲಿ ಗಣೇಶ ಮಹಾಮಂಡಳದಿಂದ ಜನರಿಗೆ ಉಚಿತವಾಗಿಯೆ ಪರಿಸರ ಸ್ನೇಹಿ ಮಣ್ಣಿನ ಗಣಪಗಳ ಮೂರ್ತಿಗಳನ್ನ ವಿತರಣೆ ಮಾಡಲಾಗ್ತಿದೆ. 

ಗಣೇಶ ಮಂಡಳಗಳಿಂದ ಹೊಸ ಬೇಡಿಕೆ: ಗಣೇಶನಿಗೂ ಫ್ರೀ ಕರೆಂಟ್ ಕೊಡಿ ಎಂದ ಹಿಂದೂ ಸಂಘಟನೆಗಳು!

ಮನೆ-ಮಂಡಳಗಳಿಗು ಉಚಿತ ಮಣ್ಣಿನ ಗಣಪ: ಮನೆ-ಮನೆಯಲ್ಲಿ ಕೂರಿಸಲು 1500 ಪುಟಾಣಿ ಗಣಪಗಳು ಹಾಗೂ ಯುವಕ ಮಂಡಳಗಳಿಗೆ 100 ದೊಡ್ಡ ಪ್ರಮಾಣದ ಗಣಪನ ಮೂರ್ತಿಗಳನ್ನ ವಿತರಣೆ ಮಾಡಲಾಗ್ತಿದೆ.. ಜನರಲ್ಲಿ ಮಣ್ಣಿನ ಗಣೇಶ ಮೂರ್ತಿಗಳು ಅದರಿಂದ ಪರಿಸರಕ್ಕೆ ಆಗುವ ಲಾಭಗಳ ಬಗ್ಗೆ ಜಾಗೃತಿ ಮೂಡಿಸಲು ಗಣೇಶ ಮಹಾಮಂಡಳ ಈ ಕಾರ್ಯಕ್ಕೆ ಮುಂದಾಗಿದೆ. ಗಣೇಶ ವಿತರಣೆ ವೇಳೆಯು ಜನರಲ್ಲಿ ಪಿಓಪಿ ಗಣಪನ ಮೂರ್ತಿಗಳಿಂದ ಪರಿಸರಕ್ಕೆ ಆಗುವ ಹಾನಿಯ ಬಗ್ಗೆಯು ತಿಳುವಳಿಕೆ ಮೂಡಿಸಲಾಗ್ತಿದೆ.

ಈ ಜಾಗೃತಿಗೆ ಕಾರ್ಯಕ್ಕೆ 5 ಲಕ್ಷಕ್ಕು ಅಧಿಕ ಖರ್ಚು: 1500 ಮನೆಗಳಿಗೆ ವಿತರಣೆಯಾಗ್ತಿರೋ ಒಂದು ಪೀಟ್‌ ಎತ್ತರದ ಗಣೇಶ ಮೂರ್ತಿಗೆ 250 ಹಾಗೂ 100 ಮಂಡಳಗಳಿಗೆ ವಿತರಣೆ ಆಗ್ತಿರೋ ಮೂರ್ತಿಗಳು 3ರಿಂದ 4 ಪೀಟ್‌ ನದ್ದಾಗಿದ್ದು ಇವುಗಳ ಬೆಲೆ 2ಸಾವಿರ ಎನ್ನಲಾಗಿದೆ. ಒಟ್ಟು ಮಣ್ಣಿನ ಗಣೇಶ ಮೂರ್ತಿಗಳಿಗೆ 5 ಲಕ್ಷ 75 ಸಾವಿರ ಖರ್ಚಾಗಿದೆ. ಈ ಖರ್ಚನ್ನ ಮಹಾಮಂಡಳವೇ ಭರಿಸುತ್ತಿದೆ.

ಮಣ್ಣಿನ ಗಣಪನ ಕೂರಿಸಲು ಅಪಶಕುನದ ಭಯ: ಮಣ್ಣಿನ ಗಣೇಶಗಳನ್ನ ಪ್ರತಿಷ್ಠಾಪಿಸುವ ವೇಳೆ ಬಿರುಕು ಬಿಟ್ಟಲ್ಲಿ ಅಪಶಕುನ ಎನ್ನುವ ನಂಬಿಕೆ ಜನರಲ್ಲಿದೆ, ಹೀಗಾಗಿ ಪಿಓಪಿ ಗಣಪಗಳ ಕಡೆಗೆ ಹೆಚ್ಚಿನ ಓಲವಿದೆ. ಮಣ್ಣಿನ ಗಣಪಗಳು ಒಣಗಿದ ಮೇಲೆ ಸ್ವಲ್ಪ‌ ಬಿರುಕು ಬಿಟ್ಟಂತೆ ಕಾಣ್ತವೆ ಅನ್ನೋದು ಜನರ ಕಂಪ್ಲೆಂಟು. ಅದ್ರಲ್ಲು ಗಣೇಶನ ಕೂರಿಸಿದಾಗ ಸ್ವಲ್ಪ ಹೆಚ್ಚು ಕಡಿಮೆಯಾದರು ಏನಾದ್ರು ಅಪಶಕುನ ನಡೆದರೆ ಎನ್ನುವ ಭಯವಿರುತ್ತೆ. ಹೀಗಾಗಿ ಮಹಾಮಂಡಳವು ಸಹ ಸದೃಢ ಮಣ್ಣಿನ ಗಣಪಗಳನ್ನ ವಿತರಣೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

ಬಿಜೆಪಿಯಲ್ಲಿ ಲಿಂಗಾಯತರನ್ನು ತುಳಿಯುವ ಬಗ್ಗೆ ಶೆಟ್ಟರ್‌ ಮಾಡಿರುವ ಆರೋಪ ಸುಳ್ಳು: ಕೆ.ಎಸ್‌.ಈಶ್ವರಪ್ಪ

ಮಣ್ಣಿನ ಗಣಪನ ಕೂರಿಸಿದ್ರೆ ಆಟೋ ಚಾರ್ಜ್ ಕಮ್ಮಿ: ಈ ನಡುವೆ ವಿಜಯಪುರದಲ್ಲಿ ಮಣ್ಣಿನ ಗಣೇಶನನ್ನ ಕೂರಿಸುವ ಭಕ್ತರಿಗೆ ಕಡಿಮೆ ದರದಲ್ಲಿ ಆಟೋ ಸಂಚಾರ ಸೇವೆಯನ್ನ ಕೊಡಲಾಗ್ತಿದೆ. ಕೆಲ ಎಲೆಕ್ಟ್ರಿಕ್ ಆಟೋ ಓಡಿಸುವ ಡ್ರೈವರ್‌ಗಳು ಕಡಿಮೆ ದರದ ಸೇವೆಯನ್ನ ಕೊಡ್ತಿದ್ದಾರೆ. ನರೇಂದ್ರ ನಂದಿಕೋಲ್ ಸೇರಿ‌ ಕೆಲವರು ಜನರಲ್ಲಿ ಮಣ್ಣಿನ ಗಣಪನ ಕುರಿತು ಜಾಗೃತಿ ಮೂಡಿಸಲು ಈ ರೀತಿ ಸಹಾಯದಲ್ಲಿ ತೊಡಗಿದ್ದಾರೆ‌. ನಗರದ 5 ಕಿ.ಮೀ ಆಸುಪಾಸಿನಲ್ಲಿ ಯಾಕೆ ಮಣ್ಣಿನ ಗಣಪನನ್ನ ಖರೀದಿ ಮಾಡಿದರು ಕಡಿಮೆ ದರದಲ್ಲಿ ಅವರನ್ನ ಮನೆಗೆ ತಲುಪಿಸುವ ಕಾನ್ಸೆಪ್ಟ್ ಇದಾಗಿದೆ.

Follow Us:
Download App:
  • android
  • ios