Mysuru : ಕುಕ್ಕರಹಳ್ಳಿ ಕರೆ ಸಂರಕ್ಷಣೆಗೆ ಮತ್ತಷ್ಟುಸುರಕ್ಷತಾ ಕ್ರಮ ಅಗತ್ಯ

ನಗರದ ಕುಕ್ಕರಹಳ್ಳಿ ಕೆರೆಗೆ ಯಾವುದೇ ಆತಂಕವಿಲ್ಲದಿದ್ದರೂ, ಸಂರಕ್ಷಣೆಗೆ ಮತ್ತಷ್ಟುಮುಂಜಾಗ್ರತ ಕ್ರಮ ಕೈಗೊಳ್ಳಬೇಕಿದೆ ಎಂದು ಕಾವೇರಿ ನೀರಾವರಿ ನಿಗಮದ ವಿನ್ಯಾಸ ವಿಭಾಗದ ತಂಡದ ಎಂಜಿನಿಯರ್‌ಗಳು ತಿಳಿಸಿದ್ದಾರೆ.

Further  measures are needed to preserve the Kukkarahalli Lake snr

  ಮೈಸೂರು (ನ.04):  ನಗರದ ಕುಕ್ಕರಹಳ್ಳಿ ಕೆರೆಗೆ ಯಾವುದೇ ಆತಂಕವಿಲ್ಲದಿದ್ದರೂ, ಸಂರಕ್ಷಣೆಗೆ ಮತ್ತಷ್ಟುಮುಂಜಾಗ್ರತ ಕ್ರಮ ಕೈಗೊಳ್ಳಬೇಕಿದೆ ಎಂದು ಕಾವೇರಿ ನೀರಾವರಿ ನಿಗಮದ ವಿನ್ಯಾಸ ವಿಭಾಗದ ತಂಡದ ಎಂಜಿನಿಯರ್‌ಗಳು ತಿಳಿಸಿದ್ದಾರೆ.

ಕೆರೆ (lake)  ಏರಿಯಲ್ಲಿನ ನೀರಿನ ಸೋರಿಕೆಯಿಂದ ಯಾವುದೇ ಅಪಾಯವಿಲ್ಲ ಎಂದು ಮತ್ತೊಮ್ಮೆ ತಿಳಿಸಿರುವ ತಂಡವು ಕೆರೆಯ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ರಾಕ್‌ ಟೋ ಮತ್ತು ಹೆಡ್‌ ರೆಗ್ಯುಲೇಟರ್‌ ಅಳವಡಿಸಬೇಕು. ಅ. 29 ರಂದು ಕರ್ನಾಟಕ (Karnataka ) ಎಂಜಿನಿಯರಿಂಗ್‌ ಸಂಶೋಧನಾ ಕೇಂದ್ರದ ತಂಡವು ಭೇಟಿ ನೀಡಿ ಪರಿಶೀಲಿಸಿತ್ತು. ನೀರು ಜಿನುಗಿದ ಜಾಗಗಳಲ್ಲಿ ಮಣ್ಣಿನ ಪರೀಕ್ಷೆ ನಡೆಸಿತ್ತು. ಅದರ ಬೆನ್ನಲೇ, ನಿಗಮದ ವಿನ್ಯಾಸ ವಿಭಾಗದ ತಾಂತ್ರಿಕ ಸಲಹೆಗಾರ ಎಚ್‌.ಕೆ. ಸಂಪತ್‌ಕುಮಾರ್‌ ನೇತೃತ್ವದ ತಂಡ ಸೋಮವಾರ ಕುಕ್ಕರಹಳ್ಳಿ ಕೆರೆಯನ್ನು ಸುತ್ತುಹಾಕಿ ಪರಿಶೀಲಿಸಿತು.

ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳ ತಂಡ ನೀರು ಜಿನುಗುವ ಜಾಗದಲ್ಲಿ ಮತ್ತು ಕೆರೆ ಏರಿಗಳಲ್ಲಿ ರಾಕ್‌ ಟೋ ಮಾಡುವಂತೆ ತಿಳಿಸಿದೆ.

ಜಿನುಗುವ ನೀರು ಬಸಿದು ಹೋಗಲು ಅನುಕೂಲವಾಗುವಂತೆ ಮಾಡುವ ಕಲ್ಲಿನ ರಚನೆಯೇ ರಾಕ್‌ ಟೋ. ಅದನ್ನು ಕಲ್ಲಿನಲ್ಲಿಯೇ ಮಾಡಬೇಕು. ಕಾಂಕ್ರಿಟ್‌ ಬಳಸುವಂತಿಲ್ಲ. ಆದ್ದರಿಂದ ಕೆರೆಯ ಒಳ ಭಾಗದಲ್ಲಿ ಏರಿ ಮೇಲಿನ ಒತ್ತಡವು ಕಡಿಮೆಯಾಗಲಿದೆ.

ಮಳೆ ಬಂದಾಗ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಗೆ ಹೋಗುವಂತೆ ಮಾಡಲು ಈಗಿರುವ ಕೊಂಟನ ಬದಲಾಗಿ ಹೆಡ್‌ ರೆಗ್ಯುಲೇಟರ್‌ ಅನ್ನು ಅಳವಡಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಹೋಗಲು ಅನುಕೂಲವಾಗುತ್ತದೆ.

ಹೀಗೆ ನೀರನ್ನು ಹೊರ ಬಿಟ್ಟಾಗ, ನೀರಿನಿಂದ ದೋಬಿ ಘಾಟ್‌ಗೆ ಯಾವುದೇ ತೊಂದರೆಯಾಗದಂತೆ ನಗರ ಪಾಲಿಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದೆ. ರಾಕ್‌ ಟೋ ಮತ್ತು ಹೆಡ್‌ ರೆಗ್ಯೂಲೇಟರ್‌ ಅನ್ನು ಹೇಗೆ ಮಾಡಬೇಕು ಎಂಬ ಕುರಿತು ವಾರದೊಳಗೆ ವರದಿ ನೀಡುವುದಾಗಿ ಅವರು ತಿಳಿಸಿದ್ದಾರೆ.

ಈ ವೇಳೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ. ಜಯರಾಮಯ್ಯ, ನಿಗಮದ ವಿನ್ಯಾಸ ವಿಭಾಗದ ಎಇಇಗಳಾದ ಎಂ.ಎನ್‌. ಚಂದ್ರಶೇಖರ್‌, ಗೋವರ್ಧನ್‌, ಸೋಮಶೇಖರ್‌, ಮೈಸೂರು ವಿವಿ ಇಇ ಪ್ರತಾಪ್‌, ಎಇಇ ಶಿವಲಿಂಗಪ್ರಸಾದ್‌ ಇದ್ದರು.

ಕೆರೆ ಒತ್ತುವರಿ ಆಗದಂತೆ  ಗಮನ ವಹಿಸಿ

 ಶಿರಾ :  ಶಿರಾ ತಾಲೂಕಿನಾದ್ಯಂತ ಕೆರೆ ಒತ್ತುವರಿ ಆಗದಂತೆ ಅಧಿಕಾರಿಗಳು ಗಮನ ವಹಿಸಿ, ಒತ್ತುವರಿಗೆ ಯಾರಿಗೂ ಅವಕಾಶ ಮಾಡಿ ಕೊಡಬೇಡಿ, ಈಗಾಗಲೇ ಹಳ್ಳಗಳ ಒತ್ತುವರಿಯಿಂದ ಸಾವಿರಾರು ಎಕರೆ ಜಮೀನಗಳ ತೋಟಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗುತ್ತಿದೆ. ಸಣ್ಣ ನೀರಾವರಿ ಇಲಾಖೆ, ಜಿಲ್ಲಾ ಪಂಚಾಯತ್‌ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಿ ಕೆರೆಗಳ ಒತ್ತು ವರಿಯನ್ನು ಎರಡು ತಿಂಗಳೊಳಗೆ ತೆರವುಗೊಳಿಸಬೇಕು ಎಂದು ಶಾಸಕ ಡಾ. ರಾಜೇಶ್‌ ಗೌಡ ತಾಕೀತು ಮಾಡಿದರು.

ನಗರದ (Tumakuru)  ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ 2022-23ನೇ ಸಾಲಿನ ಒಂದನೇ ಮತ್ತು ಎರಡನೇ ತ್ರೈಮಾಸಿಕ ಕೆ ಡಿ ಪಿ (KDP) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿರಾ (Shira)  ಸರ್ಕಾರಿ ಆಸ್ಪತ್ರೆಯಲ್ಲಿ ಸಹಜ ಹೆರಿಗೆಗಿಂತ ಸಿಜೇರಿಯನ್‌ ಹೆಚ್ಚು ಆಗುತ್ತಿವೆ ಎಂದು ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿವೆ. ಸಹಜ ಹೆರಿಗೆಗಳನ್ನೂ ಸಿಜೇರಿಯನ್‌ ಮಾಡಲಾಗುತ್ತಿದೆಯೇ ಎಂದು ಶಾಸಕ ರಾಜೇಶ್‌ ಗೌಡ ವೈದ್ಯರಿಗೆ ಪ್ರಶ್ನಿಸಿದರು. ಶಾಸಕರ ಪ್ರಶ್ನೆಗೆ ಉತ್ತರಿಸಿದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಡಿ.ಎಮ್‌.ಗೌಡ ಶಿರಾ ತಾಲೂಕಿನ ಗಡಿಭಾಗದ ತಾಲೂಕುಗಳಿಂದ ಗಂಭೀರ ಸಮಸ್ಯೆಗಳ ಗರ್ಭಿಣಿ ಸ್ತ್ರೀಯರು ಹೆರಿಗೆಗೆ ಆಗಮಿಸಿರುವುದರಿಂದ ಸಿಜೇರಿಯನ್‌ ಮಾಡಿ ಜೀವ ಉಳಿಸಬೇಕಾದ ಪರಿಸ್ಥಿತಿ ಇದೆ. ಇಡೀ ತುಮಕೂರು ಜಿಲ್ಲೆಯಲ್ಲಿ ನಮ್ಮ ಆಸ್ಪತ್ರೆಯಲ್ಲಿ ಮಾತ್ರ ಸಾಂಪ್ರದಾಯಿಕ ರೀತಿಯಲ್ಲಿ ಸಹಜ ಹೆರಿಗೆ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.

ಶಿರಾ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಪಕ್ಕದ ಆಂಧ್ರಪ್ರದೇಶ ಹಾಗೂ ಪಕ್ಕದ ತಾಲೂಕಿನಿಂದಲೂ ಗರ್ಭಿಣಿಯರು ಚಿಕಿತ್ಸೆಗೆ ಬರುತ್ತಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿ ಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆಗೆ ಸಿಬ್ಬಂದಿ ಅವಶ್ಯಕತೆ ಇದೆ. ಆದ್ದರಿಂದ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿ ಎಂದು ವೈದ್ಯರು ಶಾಸಕರಿಗೆ ಮನವಿ ಮಾಡಿದರು.

ತೋಟಗಾರಿಕೆ ಇಲಾಖೆ ಸರ್ಕಾರಿ ಸೌಲಭ್ಯಗಳನ್ನು ನೇರವಾಗಿ ಫಲಾನುಭವಿಗಳಿಗೆ ನೀಡದೆ ತಮಗೆ ಬೇಕಾದವರಿಗೆ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದು, ಮತ್ತೊಮ್ಮೆ ಆರೋಪ ಕೇಳಿ ಬಂದರೆ ತೋಟಗಾರಿಕೆ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಶಾಸಕರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಮಮತಾ, ನಗರಸಭೆ ಪೌರಾಯುಕ್ತ ಯೋಗಾನಂದ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅನಂತರಾಜು, ತಾಲೂಕು ಪಂಚಾಯಿತಿ ಯೋಜನ ಪ್ರಾಧಿಕಾರದ ಅಧಿಕಾರಿ ರಂಗನಾಥ್‌ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Latest Videos
Follow Us:
Download App:
  • android
  • ios