*  ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿ ಮೊಸಳೆ ಪ್ರತ್ಯಕ್ಷ*  ಚರಂಡಿಯಿಂದ ಹೊರ ಬರುತ್ತಿರುವುದನ್ನು ನೋಡಿ ಹೌಹಾರಿದ ಜನತೆ*  ಮೊಸಳೆ ಹಿಡಿಯುವ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿ

ಸಿರುಗುಪ್ಪ(ಆ.11): ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಹಿಂಬದಿಯಲ್ಲಿರುವ ಶೌಚಾಲಯ ಕಟ್ಟಡದ ಹಿಂದಿರುವ ಕೇವಲ ಒಂದು ಅಡಿ ಅಗಲದ ಚರಂಡಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೂತ್ರ ವಿಸರ್ಜನೆಗೆಂದು ಹೋದ ವ್ಯಕ್ತಿಯು ಮೊಸಳೆ ಚರಂಡಿಯಿಂದ ಹೊರ ಬರುತ್ತಿರುವುದನ್ನು ನೋಡಿ ಹೌಹಾರಿ ಓಡಿ ಬಂದಿ​ದ್ದಾನೆ. 

ದಾಂಡೇಲಿ ಬಳಿ ಗ್ರಾಮಕ್ಕೆ ನುಗ್ಗಿದ ಮೊಸಳೆ: ಕಕ್ಕಾಬಿಕ್ಕಿಯಾದ ಜನತೆ..!

ಬಳಿಕ ಜನರು ಮೊಸಳೆಯನ್ನು ನೋಡಲು ಮತ್ತು ತಮ್ಮ ಮೊಬೈಲ್‌ಗಳಲ್ಲಿ ಚಿತ್ರೀಕರಿಸಲು ಮುಗಿಬಿದ್ದರು. ಮಾಹಿತಿ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಮೊಸಳೆ ಹಿಡಿಯುವ ಕಾರ್ಯಾಚರಣೆ ನಡೆಸಿದರು.