ರಾಜ್ಯ ಸರ್ಕಾರಗಳು ಬ್ರಿಟಿಷರ ಆಡಳಿತ ರೀತಿಯಲ್ಲಿ ಕಾನೂನುಗಳನ್ನು ತರುತ್ತಿವೆ. ಇದರಿಂದಾಗಿ ಮಧ್ಯಮ ಹಾಗೂ ಬಡ ಕುಟುಂಬಗಳು ಬದುಕುವುದೇ ಕಷ್ಟವಾಗಿದೆ: ರಮೇಶ್‌ ಕುಮಾರ್‌ 

ಕೋಲಾರ(ಆ.14): ಸತ್ಯಕ್ಕೆ ಸಾವು ಇಲ್ಲ. ಗಾಂಧೀಜಿಗೆ, ಗಾಂಧಿ ತತ್ವಕ್ಕೆ ಸಾವು ಇಲ್ಲ. ಕಾಂಗ್ರೆಸ್‌ ಸ್ವಲ್ಪ ಗಾಯಗೊಂಡಿದೆ ಅಷ್ಟೇ ವಿನಃ, ಸತ್ತಿಲ್ಲ. ಕಾಂಗ್ರೆಸ್‌ ಪುನಃಶ್ಚೇತನ ಮಾಡುವ ಸಮಯ ಬಂದಿದೆ. ನಿಮ್ಮೆಲ್ಲರ ಆರ್ಶೀವಾದಿಂದ ಪುನಃ ಅಧಿಕಾರಕ್ಕೆ ಬರಲಿದೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸ್ಪೀಕರ್‌, ಶಾಸಕ ಕೆ.ಆರ್‌.ರಮೇಶಕುಮಾರ್‌ ಹೇಳಿದರು ಶ್ರೀನಿವಾಸಪುರ ಪಟ್ಟಣದ ಬಾಲಕಿಯರ ಕಾಲೇಜು ಆವರಣದಲ್ಲಿ ಶನಿವಾರ ಕಾಂಗ್ರೆಸ್‌ ಪಕ್ಷದ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ, ರಾಜ್ಯ ಸರ್ಕಾರಗಳು ಬ್ರಿಟಿಷರ ಆಡಳಿತ ರೀತಿಯಲ್ಲಿ ಕಾನೂನುಗಳನ್ನು ತರುತ್ತಿವೆ. ಇದರಿಂದಾಗಿ ಮಧ್ಯಮ ಹಾಗು ಬಡ ಕುಟುಂಬಗಳು ಬದುಕುವುದೇ ಕಷ್ಟವಾಗಿದೆ ಎಂದರು.

ಬ್ರಿಟಿಷರಿಗೆ ಅಡುಗೆ ಮಾಡುತ್ತಿದ್ದ ಬಿಜೆಪಿಗರು

ಗಾಂಧೀಜಿ ದೇಶದಲ್ಲಿನ ಎಲ್ಲರೂ ಸಹೋದರರಂತೆ ಬಾಳಬೇಕು ಎನ್ನುವ ಕನಸನ್ನು ಕಂಡಿದ್ದರು. ಆದರೆ ಈಗ ನಡೆಯುತ್ತಿರುವದೇ ಬೇರೆ. ಪಂಜಾಬ್‌ನ ಜಲಿಯನ್‌ ವಾಲಾಬಾಗ್‌ನಲ್ಲಿ ಬ್ರಿಟಿಷರ ಗುಂಡಿಗೆ ಸುಮಾರು 3 ಸಾವಿರ ಆಮಾಯಕರು ಬಲಿಯಾದರು. ಈ ಸಮಯದಲ್ಲಿ ಬಿಜೆಪಿಯವರು ಬ್ರಿಟಿಷರಿಗೆ ಅಡುಗೆ ಮಾಡಿ ಹಾಕುತ್ತಿದ್ದವರು ಈಗ ದೊಡ್ಡ ಮನುಷ್ಯರಾಗಿದ್ದಾರೆ ಎಂದು ವ್ಯಂಗ್ಯ ಮಾಡಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ: ಮೋದಿಗೆ ಸಂಸಾರದ ನಿರ್ವಹಣೆ ಗೊತ್ತಿಲ್ಲ, ರಮೇಶ್‌ ಕುಮಾರ್‌

ಮೋದಿಯಂತಹ ವ್ಯಕ್ತಿಯಿಂದ ದೇಶಕ್ಕೆ ಏನು ಪ್ರಯೋಜನ ಎಂದು ಪ್ರಶ್ರಿಸಿದ ಅವರು, ಕಳೆದ 8 ವರ್ಷಗಳಿಂದ ಬಿಜೆಪಿಯಿಂದ ಯಾವುದೇ ಅಭಿವೃದ್ಧಿಯಾಗಲ್ಲ. ಕೊರೋನಾ ಸಮಯದಲ್ಲಿ ದೇಶದ ನಾಗರಿಕರಿಗೆ ದೀಪ ಹಚ್ಚಿ, ಚಪ್ಪಾಳೆ ತಟ್ಟಿ ಎಂದು ಹೇಳುತ್ತಾರೆ. ಇಂತಹವರಿಂದ ದೇಶ ಯಾವರೀತಿಯಲ್ಲಿ ಅಭಿವೃದ್ಧಿಯಾಗಲು ಸಾಧ್ಯ ಎಂದು ಟೀಕಿಸಿದರು.

ಬಿಜೆಪಿ ಶೇ.40 ಕಮಿಷನ್‌ ಸಾಧನೆ

ಎಂಎಲ್‌ಸಿ ಅನಿಲ್‌ಕುಮಾರ್‌ ಮಾತನಾಡಿ, ರಮೇಶ್‌ಕುಮಾರ್‌ರವರು ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ 25 ಸಾವಿರ ಮನೆಗಳನ್ನು , 510 ಸಮುದಾಯ ಭವನಗಳನ್ನ, ಕೋಲಾರದಿಂದ ತಾಡಿಗೊಳ್ಳ ಕ್ರಾಸ್‌ ವರೆಗೂ 176 ಕೋಟಿ ವೆಚ್ಚದಲ್ಲಿ ಡಾಂಬರು ರಸ್ತೆ ಮಾಡಿಸಿದರು. ಆದರೆ ಬಿಜೆಪಿ ಶೇ. 40 ಕಮಿಷನ್‌ ಹಾಗೂ ಬೆಲೆ ಏರಿಕೆಗಳಲ್ಲಿ ಅಭಿವೃದ್ದಿಯಾಗುತ್ತಿದೆ. ಈ ಕ್ಷೇತ್ರ ಮಾಜಿ ಶಾಸಕರೊಬ್ಬರು 4 ಭಾರಿ ಗೆದ್ದವರು ಕ್ಷೇತ್ರದ ಅಭಿವೃದ್ದಿಗಾಗಿ ಒಂದು ದಿನವೂ ಧ್ವನಿ ಎತ್ತಲಿಲ್ಲ, ಜೆಡಿಎಸ್‌ ಜಿಲ್ಲಾಧ್ಯಕ್ಷರಾದವರೂ ಬಿಜೆಪಿಯವರ ಜೊತೆ ವ್ಯವಹಾರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಕೋಲಾರದಲ್ಲಿ ಕೈ-ಕೈ ಮಿಲಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು: ಪತ್ರಕರ್ತರ ಮೇಲೆ ರಮೇಶ್ ಕುಮಾರ್ ಹಲ್ಲೆ

ಚಿಂತಾಮಣಿ ತಾಲ್ಲೂಕಿನ ಮಾಜಿ ಶಾಸಕ ಸುಧಾಕರ್‌ ಮಾತನಾಡಿ ಈ ಹಿಂದೆ ಬಿಜೆಪಿ ಪಕ್ಷದಿಂದ ಜನೋತ್ಸವ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಸುಧಾಕರ್‌ ಪೂರ್ವ ಭಾವಿ ಸಭೆಗೆ ಪಟ್ಟಣಕ್ಕೆ ಆಗಮಿಸಿದಾಗ ಜೆಡಿಎಸ್‌ನ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿಯವರು ಪಟಾಕಿ ಸಿಡಿಸಿ ಸ್ವಾಗತಿಸಿದರು. ಇವರ ಜಾತ್ಯತೀತತೆ ಎಲ್ಲಿದೆ ಎಂದರು.

ಕೋಲಾರ ಶಾಸಕ ಶ್ರೀನಿವಾಸಗೌಡ, ಎಂಎಲ್‌ಸಿ ಗಳಾದ ನಜೀರ್‌ಅಹಮದ್‌, ಮಾಜಿ ಶಾಸಕ ಕೊತ್ತೂರು ಮಂಜುನಾಥ, ದಲಿತ ಮುಖಂಡ ಸಿ.ಎಂ ಮುನಿಯಪ್ಪ ಮಾತನಾಡಿ ಬಿಜೆಪಿಯನ್ನು ಸೋಲಿಸಿ ದೇಶವನ್ನು ರಕ್ಷಿಸಬೇಕು ಎಂದರು.