Asianet Suvarna News Asianet Suvarna News

ಪುನೀತ್‌ ಹೆಸರಲ್ಲಿ ಉಚಿತ ವಸತಿ ಶಾಲೆ, ಆಸ್ಪತ್ರೆ ನಿರ್ಮಾಣ : ಜನಾರ್ದನ ರೆಡ್ಡಿ ಘೋಷಣೆ

  •  ದೈಹಿಕವಾಗಿ ನಮ್ಮನ್ನಗಲಿದ್ದರೂ ಕರುನಾಡಿನ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿರುವ ನಟ ಪುನೀತ್‌ರಾಜ್‌ಕುಮಾರ್‌ 
  •  ಬಳ್ಳಾರಿಯಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿಯುತ ಶಾಲೆ ಹಾಗೂ ಜನಾರೋಗ್ಯಕ್ಕಾಗಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ
  • ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದ ಮಾಜಿ ಸಚಿವ ಜನಾರ್ದನ ರೆಡ್ಡಿ 
Free School And Hospital will open name of Puneeth Rajkumar says Janardhan Reddy snr
Author
Bengaluru, First Published Nov 9, 2021, 11:39 AM IST
  • Facebook
  • Twitter
  • Whatsapp

 ಬಳ್ಳಾರಿ (ನ.09):  ದೈಹಿಕವಾಗಿ ನಮ್ಮನ್ನಗಲಿದ್ದರೂ ಕರುನಾಡಿನ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿರುವ ನಟ ಪುನೀತ್‌ ರಾಜ್‌ಕುಮಾರ್‌  (Puneeth rajkumar) ಅವರ ಹೆಸರಿನಲ್ಲಿ ಬಳ್ಳಾರಿಯಲ್ಲಿ (ballary) ಬಡ ವಿದ್ಯಾರ್ಥಿಗಳಿಗೆ (Students) ಉಚಿತ ವಸತಿಯುತ ಶಾಲೆ (school) ಹಾಗೂ ಜನಾರೋಗ್ಯಕ್ಕಾಗಿ ಸುಸಜ್ಜಿತ ಆಸ್ಪತ್ರೆ (Hospital) ನಿರ್ಮಿಸಲಾಗುವುದು. ಈ ಮೂಲಕ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ (janardhan reddy) ತಿಳಿಸಿದರು.

ನಗರ ಹೊರವಲಯದ ರುಕ್ಮಣಮ್ಮ ಚೆಂಗಾರೆಡ್ಡಿ ಸ್ಮಾರಕ ಹಿರಿಯ ನಾಗರಿಕರ ವೃದ್ಧಾಶ್ರಮದಲ್ಲಿ ನಟ ಪುನೀತ್‌ರಾಜ್‌ಕುಮಾರ್‌ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರ ಜತೆ  ಜನಾರ್ದನ ರೆಡ್ಡಿ ಮಾತನಾಡಿದರು.

ಈ ಹಿಂದೆ ನಮ್ಮ ಅಧಿಕಾರ ಅವಧಿಯಲ್ಲಿ ಅನಂತಪುರ ರಸ್ತೆಗೆ ಹಾಗೂ ಉದ್ಯಾನವನಕ್ಕೆ ವರನಟ ಡಾ. ರಾಜ್‌ಕುಮಾರ್‌ (Dr rajkumar) ಅವರ ಹೆಸರಿಡಲಾಯಿತು. ಪುನೀತ್‌ ಹೆಸರು ಶಾಶ್ವತವಾಗಿ ಉಳಿಯುವಂತಾಗಬೇಕು ಎಂಬ ಆಶಯದಲ್ಲಿ ಅವರ ಹೆಸರಿನಲ್ಲಿ ವಸತಿಯುತ ಶಾಲೆ (Residensial school) ನಗರದಲ್ಲಿ ನಿರ್ಮಿಸುವೆ. ಹಂತ ಹಂತವಾಗಿ ಪಿಜಿವರೆಗೆ (Post graduation) ಶಾಲೆಯನ್ನು ವಿಸ್ತರಿಸಲಾಗುವುದು.

ಆದಷ್ಟು ಬೇಗ ಶಾಲೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು. ನಗರದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು (Super Speciality hospital) ನಮ್ಮ ಅವಧಿಯಲ್ಲಿ ತರಲಾಯಿತು. ಆದರೆ, ಅದು ಪೂರ್ಣಗೊಂಡಿಲ್ಲ. ಇದೀಗ ನಾವೇ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಿ ಜನರ ಆರೋಗ್ಯ ಸೇವೆಯನ್ನು (Health service) ಕೈಗೊಳ್ಳುತ್ತೇವೆ. ನಮ್ಮ ಸೇವಾ ಕಾರ್ಯಕ್ಕೆ ಪುನೀತ್‌ ರಾಜ್‌ ಕುಮಾರ್‌ ಅವರು ತೆರೆ ಮರೆಯಲ್ಲಿ ಮಾಡಿರುವ ಅನೇಕ ಜನೋಪಕಾರಿ ಕೆಲಸಗಳೇ ಪ್ರೇರಣೆಯಾಗಿವೆ ಎಂದು ತಿಳಿಸಿದರು.

ಪುನೀತ್‌ರಿಗೆ ಅನೇಕ ಅವಾರ್ಡ್‌ಗಳನ್ನು (award) ನೀಡುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಆದರೆ, ಪುನೀತ್‌ ಅವರ ಜನಮುಖಿ ಸೇವೆ ಹಾಗೂ ಚಿತ್ರರಂಗಕ್ಕೆ (Sandalwood) ನೀಡಿದ ಕೊಡುಗೆ ನೋಡಿದರೆ ಅವರಿಗೆ ಯಾವ ಅವಾರ್ಡ್‌ ನೀಡಿದರೂ ಕಡಿಮೆಯೇ. ನಾಡಿನ ಪ್ರತಿಯೊಬ್ಬರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದು ಎಲ್ಲಕ್ಕಿಂತ ದೊಡ್ಡ ಅವಾರ್ಡ್‌ ಪಡೆದುಕೊಂಡೇ ಅವರು ನಮ್ಮಿಂದ ದೂರವಾಗಿದ್ದಾರೆ ಎಂದರು.

ಪರ್ಮನೆಂಟಾಗಿ ಬಳ್ಳಾರಿಯಲ್ಲಿಯೇ ಇರುವೆ :  ನಾನು ಪರ್ಮನೆಂಟಾಗಿ ಬಳ್ಳಾರಿಯಲ್ಲಿಯೇ ಇರುತ್ತೇನೆ. ನಿಮ್ಮೆಲ್ಲರ ಜತೆಯೇ ಇದ್ದು, ಸೇವಾ ಕೈಂಕರ್ಯಗಳನ್ನು ಮುಂದುರಿಸುತ್ತೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

‘ನಿಮಗೆ ಕೋರ್ಟ್‌ (Court) ಬಳ್ಳಾರಿಯಲ್ಲಿಯೇ ಇರಲು ಅನುಮತಿ ನೀಡಿದೆಯೇ’ ಎಂಬ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೆಡ್ಡಿ, ‘ಇಂಟರ್‌ನೆಟ್‌ನಲ್ಲಿ ನೋಡಿದರೆ ನಿಮಗೆ ಕೋರ್ಟ್‌ ಆರ್ಡರ್‌ ಸಿಗುತ್ತದೆ’ ನಾನು ಇಲ್ಲಿಯೇ ಪರ್ಮಿನೆಂಟಾಗಿ ಉಳಿಯಲು ಅವಕಾಶ ನೀಡಿದೆ. ಮಾಧ್ಯಮಗಳು ತಪ್ಪು ಗ್ರಹಿಕೆಯಿಂದ ಕೆಲವೇ ತಿಂಗಳು ಎಂಬಂತೆ ಸುದ್ದಿ ಮಾಡಿದ್ದಾರೆ. ಆದರೆ, ನನಗೆ ಇಲ್ಲಿಯೇ ಇರಲು ಅವಕಾಶ ಕೊಡಲಾಗಿದೆ ಎಂದು ಖಚಿತಪಡಿಸಿದರು.

ಅಧಿಕಾರ ಬೇಡ - ಸಮಾಜ ಸೇವೆಯಲ್ಲಿ ತೊಡಗುವೆ :  

ನನಗೆ ಯಾವ ಅಧಿಕಾರ ಬೇಡ. ಉಳಿದ ಆಯುಷ್ಯವನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಿರ್ಧರಿಸಿರುವೆ. ‘ಯಾವ ರಾಜಕೀಯ ಬೇಡ. ಬಳ್ಳಾರಿಗಷ್ಟೇ ಸೇರಿಸಿಬಿಡು, ಜನಸೇವೆ ಮಾಡಿಕೊಂಡಿರುವೆ’ ಎಂದು ಸಂಕಷ್ಟದ ದಿನಗಳಲ್ಲಿ ದೇವರ ಮೊರೆ ಇಡುತ್ತಿದ್ದೆ. ಈಗ ಅದೇ ನಿಲುವು ತೆಗೆದುಕೊಂಡಿರುವೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ತಿಳಿಸಿದರು.

ನಗರ ಹೊರವಲಯದ ತಮ್ಮದೇ ಆದ ‘ರುಕ್ಮಣಮ್ಮ ಚೆಂಗಾರೆಡ್ಡಿ ವೃದ್ಧಾಶ್ರಮ’ದಲ್ಲಿ ಹಮ್ಮಿಕೊಂಡಿದ್ದ ನಟ ಪುನೀತ್‌ ರಾಜ್‌ಕುಮಾರ್‌ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುನೀತ್‌ರಾಜ್‌ಕುಮಾರ್‌ ನಮ್ಮ ಕುಟುಂಬದ ಜತೆ ನಿರಂತರ ಒಡನಾಟದಲ್ಲಿದ್ದರು. ನನ್ನ ಮಗ ಕಿರೀಟಿಯನ್ನು ಕನ್ನಡ ಸಿನಿಮಾ ಕ್ಷೇತ್ರಕ್ಕೆ ಪರಿಚಯಿಸಬೇಕು ಎಂದುಕೊಂಡು ಪುನೀತ್‌ ಅವರ ಜತೆ ಬಿಟ್ಟಿದ್ದೆ. ಶೂಟಿಂಗ್‌ಗೆ ತೆರಳುವಾಗ ಕಿರೀಟಿಯನ್ನು ಕರೆದುಕೊಂಡು ಹೋಗುತ್ತಿದ್ದರು ಎಂದು ಮೆಲುಕು ಹಾಕಿದರು.

Follow Us:
Download App:
  • android
  • ios