ಮೈಸೂರು(ಜ.12): ಮೈಸೂರು ವಿಶ್ವವಿದ್ಯಾಲಯದಲ್ಲಿ ಫ್ರೀ ಕಾಶ್ಮೀರ ಪ್ಲಕಾರ್ಡ್ ಹಿಡಿದ ಘಟನೆಗೆ ಸಂಬಂಧಿಸಿ ಹಲವರ ವಿಚಾರಣೆ ನಡೆಯುತ್ತಿದೆ. ಪ್ರಕರಣ ಎ1 ಆರೋಪಿ ಮರಿದೇವಯ್ಯ ಎಂಬಾತ ತಲೆ ಮರೆಸಿಕೊಂಡಿದ್ದಾನೆ.

ಮೈಸೂರು ವಿವಿಯಲ್ಲಿ ಫ್ರೀ ಕಾಶ್ಮೀರ ಪ್ಲಕಾರ್ಡ್ ಹಿಡಿದ ಪ್ರಕರಣದಲ್ಲಿ ದಿನ ಕಳೆದಂತೆ ಆರೋಪಿಗಳನ್ನು ಪತ್ತೆ ಹಚ್ಚುತ್ತಿರುವ ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಜಯಲಕ್ಷ್ಮಿಪುರಂ ಪೊಲೀಸರು ವಿಚಾರಣೆ ಮುಂದುವರಿಸಿದ್ದು, ಇಂದೂ ಕೂಡ ಸಂಘಟಕರ ವಿಚಾರಣೆ ನಡೆಯಲಿದೆ.

ಮೈಸೂರು: ಫ್ರೀ ಕಾಶ್ಮೀರ ಪ್ಲಕಾರ್ಡ್ ಹಿಡಿದ ಯುವತಿಗೆ ಜಾಮೀನು

ಆರೋಪಿಗಳು ದೇಶ ದ್ರೋಹದ ಆರೋಪ ಎದುರಿಸುತ್ತಿದ್ದಾರೆ. ನೆನ್ನೆ ಇಡೀ ದಿನ ಪೊಲೀಸರು ಪ್ಲಕಾರ್ಡ್ ಹಿಡಿದಿದ್ದ ನಳಿನಿ ವಿಚಾರಣೆ ನಡೆಸಿದ್ದರು. ಈಗಾಗಲೇ ದಲಿತ ವಿದ್ಯಾರ್ಥಿ ಸಂಘಟನೆ ಮುಖಂಡ ಸೋಸಲೆ ಮಹೇಶ್, ಹಾಗೂ ವಿದ್ಯಾರ್ಥಿನಿ ವಯಿಲಾ ವಿಚಾರಣೆ ನಡೆದಿದೆ.

ಇಂದು ಸಂದೀಪ್, ಮನೋಜ್ ಕುಮಾರ್, ಚಂದ್ರಕಲಾ, ಆಸಿಯಾ ಬೇಗಂ, ವಿಷ್ಣು ವಿಜಯ್ ಹಾಗೂ ಅಸ್ಕರ್ ಅಲಿ ವಿಚಾರಣೆ ನಡೆಯಲಿದ್ದು, ಪ್ರಕರಣ ಎ1 ಆರೋಪಿ ಸಂಶೋಧನಾ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮರಿದೇವಯ್ಯ ತಲೆ ಮರೆಸಿಕೊಂಡಿದ್ದಾನೆ. 'ಫ್ರೀ ಕಾಶ್ಮೀರ' ಫಲಕ ಪ್ರದರ್ಶ‌ನ ಪ್ರಕರಣ ರಾಷ್ಟ್ರದ ಗಮನ ಸೆಳೆದಿದೆ.

ಸೋಷಿಯಲ್ ಮೀಡಿಯಾ ನೋಡಿ ಪ್ರತಿಭಟನೆಗೆ ಹೋಗಿದ್ದ ಫ್ರೀ ಕಾಶ್ಮೀರ ಪ್ಲಕಾರ್ಡ್ ಯುವತಿ