ಮೈಸೂರು(ಜ.11): ಮೈಸೂರು ವಿಶ್ವವಿದ್ಯಾಲಯದಲ್ಲಿ ಫ್ರೀ ಕಾಶ್ಮೀರ ಪ್ಲಕಾರ್ಡ್ ತೋರಿಸಿದ ಯುವತಿ ಮೊದಲ ಬಾರಿ ಪ್ಲಕಾರ್ಡ್ ಹಿಡಿದಿರುವುದಾಗಿ ಹೇಳಿದ್ದಾಳೆ. ಹಾಗೆಯೇ ತಾನು ಆಕ್ಟಿವಿಸ್ಟ್ ಅಲ್ಲ, ಸಾಮಾನ್ಯ ಪ್ರಜೆ ಎಂಬುದನ್ನೂ ಸ್ಪಷ್ಟಪಡಿಸಿದ್ದಾಳೆ.

"

ಮೈಸೂರು ವಿಶ್ವವಿದ್ಯಾಲಯದಲ್ಲಿ ಫ್ರೀ ಕಾಶ್ಮೀರ ಪ್ಲಕಾರ್ಡ್‌ ತೋರಿಸಿ ವಿವಾದ ಸೃಷ್ಟಿಯಾಗಿದ್ದು, ಪ್ಲಕಾರ್ಡ್ ಹಿಡಿದ ಯುವತಿ ತಾನು ಆಕ್ಟಿವಿಸ್ಟ್ ಅಲ್ಲ, ಸಾಮಾನ್ಯ ಪ್ರಜೆ ಎಂದು ಹೇಳಿದ್ದಾಳೆ. ನನ್ನ ಮೇಲೆ ಎಫ್‌ಐಆರ್ ಆಗಿದೆ ಎಂದ ತಕ್ಷಣ ಭಯ ಆಯ್ತು. ಅದಕ್ಕಾಗಿ ನನ್ನ ಫೇಸ್‌ಬುಕ್‌ನಲ್ಲಿ ಇದ್ದ ವಾಲ್‌ಗಳನ್ನು ಡಿಲೀಟ್ ಮಾಡಿದೆ. ಈಗ ಜಾಮೀನು ಆಗಿದೆ. ಪೊಲೀಸರ ಮುಂದೆ ಹೋಗಿ ಕೂಡ ನಾನು ನನ್ನ ಹೇಳಿಕೆ ದಾಖಲಿಸುತ್ತೇನೆ ಎಂದು ಹೇಳಿದ್ದಾಳೆ.

ಸೋಷಿಯಲ್ ಮೀಡಿಯಾ ನೋಡಿ ಪ್ರತಿಭಟನೆಗೆ ಹೋಗಿದ್ದ ಫ್ರೀ ಕಾಶ್ಮೀರ ಪ್ಲಕಾರ್ಡ್ ಯುವತಿ

ಇದರಿಂದ ಯಾರಿಗಾದರೂ ತೊಂದರೆ ಆಗಿದ್ದರೆ ಕ್ಷಮಿಸಿ. ನನ್ನ ಕೈಯಲ್ಲಿ ಎಷ್ಟಾಗುತ್ತೋ ಅಷ್ಟು ಒಳ್ಳೆಯದು ಮಾಡುತ್ತೇನೆ. ಪ್ಲಕಾರ್ಡ್ ಪ್ರಕರಣ ಹೊರ‌ಬಂದ ಮೇಲೆ ಯಾವ ಸಂಘಟನೆಯೂ ಭೇಟಿ ಮಾಡಿಲ್ಲ. ನಾನು ಹಿಂದೆ ನಾಲ್ಕೈದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ. ಆದರೆ ಮೊದಲ‌ ಬಾರಿ ಪ್ಲಕಾರ್ಡ್ ಹಿಡಿದಿದ್ದದ್ದು ಎಂದು ಹೇಳಿದ್ದಾಳೆ.

ನನ್ನ ಪೋಷಕರೂ ಕೂಡ ಯಾವುದೇ ತೊಂದರೆ ಮಾಡಿಕೊಳ್ಳಬೇಡ ಎಂದು ಧೈರ್ಯ ಹೇಳಿದ್ದಾರೆ. ಇಡೀ ಘಟನೆಯ ಹೊಣೆ, ಜವಾಬ್ದಾರಿ ನನ್ನದೇ, ಯಾರಿಗೇ ತೊಂದರೆ ಆಗಿದ್ದರೂ ಕ್ಷಮೆ ಇರಲಿ ಎಂದು ಘಟನೆ ಬಗ್ಗೆ ಕ್ಷಮೆ ಯಾಚಿಸಿದ್ದಾರೆ.

ಫ್ರೀ ಕಾಶ್ಮಿರ ಪ್ಲೆಕಾರ್ಡ್: ಸ್ವಯಂ ಪ್ರೇರಿತ ದೂರು ದಾಖಲು