ನಾಗಮಂಗಲ (ಆ.24) : ಮಹಿಳಾ ಸಬಲೀಕರಣದ ಜೊತೆಗೆ ಗ್ರಾಮೀಣ ಪ್ರದೇಶದ ರೈತ ಮಹಿಳೆಯರ ಕೌಶಲ್ಯಾಭಿವೃದ್ಧಿಗೆ ಪೂರಕವಾಗಿ ಮೈಸೂರಿನ ಓಡಿಪಿ ಸಂಸ್ಥೆಯಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮೈಸೂರು ವಿಭಾಗದ ರೈತ ಉತ್ಪಾದಕರ ಕಂಪನಿಯ ಸಂಯೋಜಕ ರಮೇಶ್‌ ತಿಳಿಸಿದರು.

ತಾಲೂಕಿನ ಚೀಣ್ಯದ ಶ್ರೀಸೋಮನಾಯಕಿ ದೇವಸ್ಥಾನದ ಆವರಣದಲ್ಲಿ ಮೈಸೂರಿನ ಓಡಿಪಿ ಸಂಸ್ಥೆ ಆಯೋಜಿಸಿದ್ದ ರೈತರಿಗೆ ಉಚಿತ ರಸಗೊಬ್ಬರ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಬೆನ್ನುಲುಬಾಗಿರುವ ರೈತರನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಕಳೆದ 2015ರಲ್ಲಿ ದೇಶದಾದ್ಯಂತ 2000 ರೈತ ಉತ್ಪಾದಕ ಕಂಪನಿ ಸ್ಥಾಪಿಸುವ ಕಾರ್ಯಕ್ರಮ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಓಡಿಪಿ ಸಂಸ್ಥೆಯು ನಬಾರ್ಡ್‌ ಸಹಯೋಗದೊಂದಿಗೆ ಮೂರು ಜಿಲ್ಲೆಗಳಲ್ಲಿ ರೈತ ಉತ್ಪಾದಕ ಕಂಪನಿಗಳ ಸ್ಥಾಪಿಸಿ ರೈತರಿಗೆ ಅನುಕೂಲವಾಗುವ ರಸಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಅಗತ್ಯ ಪರಿಕರಗಳನ್ನು ನೀಡುತ್ತಿದ್ದೇವೆ ಎಂದರು.

ನಮಗೂ ಒಂದು 'ಭಾಗ್ಯ' ಕೊಡಿ; ಅವಿವಾಹಿತ ಯುವರೈತರಿಂದ ಸರ್ಕಾರಕ್ಕೆ ಮನವಿ!.

ಗ್ರಾಮೀಣ ಪ್ರದೇಶದ ರೈತರು ಯಾವುದೇ ಬೆಳೆ ಬೆಳೆಯಲು ಉತ್ಪಾದಕ ಕಂಪನಿಗಳಿಂದ ನೇರವಾಗಿ ರೈತರಿಗೆ ತಲುಪಿಸುವ ವ್ಯವಸ್ಥೆ ಜಾರಿಯಾಗಬೇಕು. ಆಗ ಮಾತ್ರ ರೈತರ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗುತ್ತದೆ. ರೈತ ಉತ್ಪಾದಕ ಸಮಿತಿಯಲ್ಲಿ ಸದಸ್ಯತ್ವ ಹೊಂದಿರುವ ಗ್ರಾಮೀಣ ಪ್ರದೇಶದ ರೈತರು ಕೊರೋನಾ ವಿರುದ್ಧ ಹೋರಾಟ ನಡೆಸುವ ಜೊತೆಗೆ ಸೋಂಕು ಹರಡದಂತೆ ಪ್ರತಿಯೊಬ್ಬರೂ ಸಹ ಮುನ್ನೆಚ್ಚರಿಕೆ ವಹಿಸಬೇಕು. ಸಂಸ್ಥೆಯಲ್ಲಿ ದೊರಕುವ ಸಲವತ್ತುಗಳನ್ನು ಪಡೆದು ಉತ್ತಮ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಆರೋಗ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.

ಬೆಳಗಾವಿ: ಮಳೆ ನಿಂತು‌ ಪ್ರವಾಹ ಇಳಿಮುಖ ಆದ್ರೂ ತಪ್ಪದ ರೈತರ ಸಂಕಷ್ಟ..!...

ಸಂಸ್ಥೆಯ ರೈತ ಉತ್ಪಾದಕ ಸಮಿತಿಯಲ್ಲಿ ಸದಸ್ಯತ್ವ ಹೊಂದಿರುವ ಸ್ಥಳೀಯ ರೈತ ಮಹಿಳೆಯರಿಗೆ ಉಚಿತವಾಗಿ ರಸಗೊಬ್ಬರವನ್ನು ವಿತರಿಸಲಾಯಿತು. ಹೊಣಕೆರೆ ಹೋಬಳಿಯ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಮಂಜುನಾಥ್‌ ಪಟಗಾರ್‌, ಸಂಸ್ಥೆಯ ತಾಲೂಕು ಸಂಯೋಜಕಿ ಜಯಶೀಲ, ಹೊಣಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಸವರಾಜು, ಸತೀಶ್‌ ಚಿಣ್ಯ, ನಾಗೇಂದ್ರ, ಲಕ್ಕಪ್ಪ, ಕಲ್ಪನ, ಡೈರಿ ರಮೇಶ್‌, ಶಶಿಕಲಾ, ದೀಪಿಕಾ, ದಿವ್ಯ, ಶೋಭಾ, ಪುಷ್ಪಾವತಿ, ಪ್ರಿಯಾಂಕ, ರಾಜಣ್ಣ, ನಾರಾಯಣ ಇತರರಿದ್ದರು.