ಬೆಳಗಾವಿ(ಆ.23): ನಮಗಷ್ಟ ಅಲ್ರಿ ದನಕ್ಕೂ ಹಾಕಲು ಮೇವಿಲ್ಲ ಎಂದು ರೈತ ಮಹಿಳೆಯೊಬ್ಬಳು ಅಳಲು ತೋಡಿಕೊಂಡ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಮೆಳವಂಕಿ ಪರಿಹಾರ ಕೇಂದ್ರದಲ್ಲಿ ನಡೆದಿದೆ.

ಮಹಾರಾಷ್ಟ್ರ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆಯಾದ ಪರಿಣಾಮ ಘಟಪ್ರಭಾ ನದಿಯಲ್ಲಿ ಉಂಟಾಗಿದ್ದ ಪ್ರವಾಹಕ್ಕೆ ಬೆಳಗಾವಿ ಜಿಲ್ಲೆಯ ರೈತರು ಅಕ್ಷರಶಃ ಕಂಗಾಲಾಗಿ ಹೋಗಿದ್ದಾರೆ. ಈ ಬಗ್ಗೆ ರೈತ ಮಹಿಳೆಯೊಬ್ಬಳು ಸುವರ್ಣನ್ಯೂಸ್ ಬಳಿ ಅಳಲು ತೋಡಿಕೊಂಡಿದ್ದಾರೆ. 

ಡಿಕೆಶಿಗೆ ಅನಾರೋಗ್ಯ: ಬೆಳಗಾವಿ ಜಿಲ್ಲಾ ಪ್ರವಾಸ ಮುಂದೂಡಿಕೆ

ಮಳೆ ನಿಂತು‌ ಪ್ರವಾಹ ಇಳಿಮುಖ ಆದರೂ ರೈತರ ಸಂಕಷ್ಟಗಳು ಮಾತ್ರ ಇಂದಿಗೂ ತಪ್ಪುತ್ತಿಲ್ಲ. ಮನೆಘಳೊಗೆ ಪ್ರವಾಹದ ನೀರು ನುಗ್ಗಿದ್ದರಿಂದ ರೈತ ಕುಟುಂಬಗಳು ಜಾನುವಾರು ಸಮೇತ ಮೆಳವಂಕಿ ಪರಿಹಾರ ಕೇಂದ್ರಕ್ಕೆ ಶಿಫ್ಟ್ ಆಗಿವೆ.
ಕಳೆದ ಬಾರಿ ಭೀಕರ ಜಲಪ್ರಳಯಕ್ಕೆ ಅಪಾರ ಬೆಳೆಹಾನಿ ಅ‌ನುಭವಿಸಿದ್ದ ರೈತರು, ಈ ಬಾರಿಯೂ ಘಟಪ್ರಭಾ ನದಿ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕಳೆದ ವರ್ಷದ ಬೆಳೆ ಹಾನಿಯಾಯ್ತು, ಪರಿಹಾರ ಮಾತ್ರ ಬರಲಿಲ್ರಿ, ಸಾಲ ಮಾಡಿ ನಾಟಿ ಮಾಡಿದ್ದ ಕಬ್ಬು ಸಂಪೂರ್ಣ ಮುಳುಗಡೆಯಾಗಿದೆ. ಹೋದ ವರ್ಷದ ಕಬ್ಬು ಬೆಳೆ ಹಾನಿಯಾಯ್ತು, ಈ ಬಾರಿಯೂ ಹಾನಿಯಾಗಿದೆ. ನಾವು ಬದುಕುವುದು ಹೇಗೆ ಎಂದು ಅನ್ನದಾತರ ಪ್ರಶ್ನೆಯಾಗಿದೆ.