ಸಿಂಧನೂರು: ಲಾರಿ-ಟಾಟಾಏಸ್ ನಡುವೆ ಡಿಕ್ಕಿ, ನಾಲ್ವರ ದುರ್ಮರಣ

ಮಸ್ಕಿ ತಾಲೂಕಿನ ಮದ್ಲಾಪೂರ ಗ್ರಾಮದಲ್ಲಿ ಮದುವೆ ಕಾರ್ಯಕ್ರಮಕ್ಕೆ ಡೆಕೋರೇಶನ್ ಮಾಡಲು ಸಿಂಧನೂರಿನಿಂದ ಬೆಳಗ್ಗೆ 4 ಗಂಟೆ ಸುಮಾರಿಗೆ ಟಾಟಾಏಸ್ ವಾಹನದಲ್ಲಿ ಡೆಕೋರೇಶನ್ ಸಾಮಗ್ರಿಗಳನ್ನು ತೆಗೆದುಕೊಂಡು ಐವರು ತೆರಳುತ್ತಿದ್ದರು. ಇದರಂತೆ ಲಿಂಗಸುಗೂರಿನಿಂದ ಸಿಂಧನೂರು ಕಡೆಗೆ ಲಾರಿಯೊಂದು ಬರುತ್ತಿತ್ತು. ಮಾರ್ಗ ಮಧ್ಯ ತಾಲೂಕಿನ ಪಗಡದಿನ್ನಿ ಕ್ಯಾಂಪಿನಲ್ಲಿ ಎರಡು ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ.

Four Killed in Road Accident at Sindhanur in Raichur grg

ಸಿಂಧನೂರು(ಡಿ.08):  ಲಾರಿ ಮತ್ತು ಟಾಟಾಏಸ್ ವಾಹನದ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ದುರ್ಮರಣ ಹೊಂದಿದ್ದು, ಓರ್ವನಿಗೆ ತೀವ್ರ ಗಾಯಗಳಾಗಿರುವ ಘಟನೆ ಗುರುವಾರ ಬೆಳಗಿವ ಜಾವ ನಡೆದಿದೆ.

ಮಸ್ಕಿ ತಾಲೂಕಿನ ಮದ್ಲಾಪೂರ ಗ್ರಾಮದಲ್ಲಿ ಮದುವೆ ಕಾರ್ಯಕ್ರಮಕ್ಕೆ ಡೆಕೋರೇಶನ್ ಮಾಡಲು ಸಿಂಧನೂರಿನಿಂದ ಬೆಳಗ್ಗೆ 4 ಗಂಟೆ ಸುಮಾರಿಗೆ ಟಾಟಾಏಸ್ ವಾಹನದಲ್ಲಿ ಡೆಕೋರೇಶನ್ ಸಾಮಗ್ರಿಗಳನ್ನು ತೆಗೆದುಕೊಂಡು ಐವರು ತೆರಳುತ್ತಿದ್ದರು. ಇದರಂತೆ ಲಿಂಗಸುಗೂರಿನಿಂದ ಸಿಂಧನೂರು ಕಡೆಗೆ ಲಾರಿಯೊಂದು ಬರುತ್ತಿತ್ತು. ಮಾರ್ಗ ಮಧ್ಯ ತಾಲೂಕಿನ ಪಗಡದಿನ್ನಿ ಕ್ಯಾಂಪಿನಲ್ಲಿ ಎರಡು ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಬೆಳಗಾವಿ: ಟಿಪ್ಪರ್, ಕಾರಿನ ಮಧ್ಯೆ ಭೀಕರ ಅಪಘಾತ, ಬೆಂಕಿ ಹತ್ತಿ ಇಬ್ಬರ ಸಜೀವ ದಹನ

ಈ ಘಟನೆಯಿಂದ ಟಾಟಾಏಸ್ ವಾಹನದಲ್ಲಿದ್ದ ಇಸ್ಮಾಯಿಲ್ (25), ಚನ್ನಬಸವ ಲಿಂಗಸುಗೂರು (25), ಅಂಬರೀಶ ಲಿಂಗಸುಗೂರು (20) ಸ್ಥಳದಲ್ಲಿಯೇ ಮೃತಪಟ್ಟಿದ್ದು, ರವಿ ಬುಕ್ಕನಹಟ್ಟಿ ಅವರನ್ನು ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಯಿತು. ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಫಲಕಾರಿಯಾಗದೆ ಸಾವನ್ನಪ್ಪಿದರು. ಇನ್ನೋರ್ವ ಸಮೀರ್‌ಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆಂದು ತಿಳಿದು ಬಂದಿದೆ.

ವಿಷಯ ತಿಳಿದಾಕ್ಷಣ ಅಪಘಾತ ಸ್ಥಳಕ್ಕೆ ಡಿವೈಎಸ್ಪಿ ಬಿ.ಎಸ್.ತಳವಾರ, ಸರ್ಕಲ್ ಇನ್ಸ್‌ಪೆಕ್ಟರ್ ವೀರಾರೆಡ್ಡಿ ಎಚ್, ಶಹರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದುರುಗಪ್ಪ ಡೊಳ್ಳಿನ್ ಹಾಗೂ ಸಿಬ್ಬಂದಿ ಬಂದು ಪರಿಶೀಲಿಸಿ ಕ್ಯಾಂಪಿನ ನಿವಾಸಿಗಳಿಂದ ಮಾಹಿತಿ ಪಡೆದುಕೊಂಡರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios