Asianet Suvarna News Asianet Suvarna News

ಬೆಳಗಾವಿ: ಟಿಪ್ಪರ್, ಕಾರಿನ ಮಧ್ಯೆ ಭೀಕರ ಅಪಘಾತ, ಬೆಂಕಿ ಹತ್ತಿ ಇಬ್ಬರ ಸಜೀವ ದಹನ

ಬಂಬರಗಾ ಕ್ರಾಸ್‌ ಬಳಿ ಟಿಪ್ಪರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಟಿಪ್ಪರ್‌ನ ಡಿಸೇಲ್ ಟ್ಯಾಂಕ್ ಒಡೆದು ಕಾರು ಮತ್ತು ಟಿಪ್ಪರ್‌ಗೆ ಬೆಂಕಿ ಹೊತ್ತಿ ಉರಿದಿದೆ. ಈ ವೇಳೆ ಕಾರಿನಲ್ಲಿದ್ದ ಇಬ್ಬರು ಸಜೀವ ದಹನಗೊಂಡರು. 

Two Killed Due to Tipper Car Accident in Belagavi grg
Author
First Published Dec 8, 2023, 12:58 PM IST

ಬೆಳಗಾವಿ(ಡಿ.08):  ಟಿಪ್ಪರ್ ಮತ್ತು ಕಾರಿನ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿ ಇಬ್ಬರು ಸಜೀವ ದಹನಗೊಂಡಿರುವ ಘಟನೆ ಬೆಳಗಾವಿ ತಾಲೂಕಿನ ದೇವಗಿರಿ ಬಂಬರಗಾ ಕ್ರಾಸ್ ಬಳಿ ಬುಧವಾರ ರಾತ್ರಿ ನಡೆದಿದೆ.

ಬಂಬರಗಾ ಗ್ರಾಮದ ಮೋಹನ್ ಮಾರುತಿ ಬೆಳ್ಗಾಂವಕರ್ (24), ಮಚ್ಚೆ ಗ್ರಾಮದ ಬಾಲಕಿ ಸಮೀಕ್ಷಾ ಡಿಯೇಕರ್(12) ಮೃತಪಟ್ಟವರು. ಗಾಯಗೊಂಡಿರುವ ಮಹೇಶ್ ಬೆಳ್ಗಾಂವಕರ್ ಮತ್ತು ಸ್ನೇಹಾ ಬೆಳ್ಗುಂದ್ಕರ್ ಅವರನ್ನು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮದುವೆ ಸಮಾರಂಭಕ್ಕೆ ತೆರಳಿದ್ದ ಈ ನಾಲ್ವರು ಕಾರಿನಲ್ಲಿ ಗ್ರಾಮಕ್ಕೆ ಮರಳಿ ಬರುತ್ತಿದ್ದರು.

ಚಿಕ್ಕಮಗಳೂರು: ವೇಗವಾಗಿ ಬಂದು ಬೈಕ್‌ಗೆ ಗುದ್ದಿದ ಕಾರು, ಇಬ್ಬರು ಸಾವು

ಈ ವೇಳೆ ಬಂಬರಗಾ ಕ್ರಾಸ್‌ ಬಳಿ ಟಿಪ್ಪರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಟಿಪ್ಪರ್‌ನ ಡಿಸೇಲ್ ಟ್ಯಾಂಕ್ ಒಡೆದು ಕಾರು ಮತ್ತು ಟಿಪ್ಪರ್‌ಗೆ ಬೆಂಕಿ ಹೊತ್ತಿ ಉರಿದಿದೆ. ಈ ವೇಳೆ ಕಾರಿನಲ್ಲಿದ್ದ ಇಬ್ಬರು ಸಜೀವ ದಹನಗೊಂಡರು. ಇಬ್ಬರು ಗಂಭೀರ ಗಾಯಗೊಂಡರು. ಸ್ಥಳೀಯರೇ ಗಾಯಾಳುಗಳನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಿದರು. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಈ ಕುರಿತು ಕಾಕತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios