ಮಂಗಳೂರು(ಏ.30): ಮಾಜಿ ಸೈನಿಕರೊಬ್ಬರು ಮನೆಯಲ್ಲಿ ಮಲಗಿದ್ದಲ್ಲೇ ಮೃತಪಟ್ಟು 5 ದಿನಗಳ ಬಳಿಕ ಘಟನೆ ಬೆಳಕಿಗೆ ಬಂದಿದೆ.ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಪಂಜಿಕಲ್ಲು ಗ್ರಾಮದ ಪಲ್ಲೊಟ್ಟು ಎಂಬಲ್ಲಿ ಘಟನೆ ನಡೆದಿದ್ದು, ಮಾಜಿ ಸೈನಿಕ, ಅವಿವಾಹಿತ ರಿಚಾರ್ಡ್‌ ಫರ್ನಾಂಡಿಸ್‌ (50) ಮೃತರು.

ಶನಿವಾರ ರಾತ್ರಿ ಮಲಗಿದ್ದ ಬಳಿಕ ಬುಧವಾರದವರೆಗೂ ಎದ್ದೇಳಿರಲಿಲ್ಲ. ದಿನ ನಿತ್ಯ ಹತ್ತಿರದ ಹಾಲಿನ ಡೈರಿಗೆ ಇವರು ಹಾಲು ಕೊಂಡು ಹೋಗುತ್ತಿದ್ದರು. ಆದರೆ ಡೈರಿಗೆ ಬಾರದೇ ಇದ್ದರಿಂದ ಎಲ್ಲಿ ಹೋಗಿದ್ದಾರೆ ಎಂದು ಸ್ಥಳೀಯರು ಮನೆಗೆ ಬಂದು ಕೇಳಿದ್ದಾರೆ.

ದೇಶದಲ್ಲಿ ಒಂದೇ ದಿನ ಕೊರೋನಾ ವೈರಸ್‌ ಡಬಲ್‌!

ಮನೆಯವರು ಅವರು ಶನಿವಾರ ಮಲಗಿದ್ದಾರೆ ಇನ್ನೂ ಎದ್ದೇಳಿಲ್ಲ ಎಂದು ಹೇಳಿದರು. ನೆರೆಮನೆಯವರು ಮನೆಯೊಳಗೆ ಹೋಗುತ್ತಿದ್ದಂತೆ ವಾಸನೆ ಬರತೊಡಗಿತು. ಮನೆಯ ಕೋಣೆಯೊಳಗೆ ಮಲಗಿದ ಸ್ಥಿತಿಯಲ್ಲಿದ್ದ ಮಾಜಿ ಸೈನಿಕ ಅದಾಗಲೇ ಸತ್ತು ಐದು ದಿನಗಳಾಗಿತ್ತು. ಮನೆಯಲ್ಲಿ ರಿಚಾರ್ಡ್‌ ಸೇರಿದಂತೆ ಇಬ್ಬರು ಅಕ್ಕಂದಿರು ಇದ್ದಾರೆ.

ಮೂವರೂ ಅವಿವಾಹಿತರು. ಇಬ್ಬರು ಅಕ್ಕಂದಿರು ಮಾನಸಿಕ ಅಸ್ವಸ್ಥತೆಯಾಗಿದ್ದರು. ಹಾಗಾಗಿ ಸೈನಿಕ ಮೃತಪಟ್ಟವಿಚಾರದ ಬಗ್ಗೆ ಅಷ್ಟು ತಲೆಕೆಡಿಸಿಕೊಂಡಿಲ್ಲ. ನೆರೆಮನೆಯವರು ಬಂದು ನೋಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ವರದಿಗಾರನಿಗೆ ಕೊರೋನಾ: ಕಾಸರಗೋಡು ಡಿಸಿಗೆ ಕ್ವಾರೆಂಟೈನ್..!

ಆ ಬಳಿಕ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಎಸ್‌ಐ ಪ್ರಸನ್ನ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.