ಮಂಗಳೂರು(ಏ.30): ಕೊರೋನಾ ವೈರಸ್‌ ವೇಗವಾಗಿ ವ್ಯಾಪಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಕಟ್ಟು ನಿಟ್ಟಿನ ಜವಾಬ್ದಾರಿ, ಸಮಾಜಿಕ ಕಳಕಳಿಯಿಂದಲೇ ಹಸೆರಾಗಿದ್ದ ಕಾಸರಗೋಡು ಜಿಲ್ಲಾಧಿಕಾರಿ ಸಜಿತ್ ಬಾಬು ಅವರು ಕ್ವಾರಂಟೈನ್‌ಗೊಳಗಾಗಿದ್ದಾರೆ. ಕಾಸರಗೋಡಿನಲ್ಲಿ ಕೊರೋನಾ ಭೀತಿ ಹೆಚ್ಚುತ್ತಿರುವಾಗ ಸ್ವಲ್ಪವೂ ಎದೆಗುಂದದೆ, ಅಧಿಕಾರಿಗಳನ್ನು ಜೊತೆ ಸೇರಿಸಿ ಬದ್ಧತೆಯಿಂದ ಕಾರ್ಯ ನಿರ್ವಹಿಸಿದ್ದರು.

"

ಕಾಸರಗೋಡಿನಲ್ಲಿ ಬುಧವಾರ ದೃಶ್ಯಮಾಧ್ಯಮದ ವರದಿಗಾರನಿಗೆ ಕೊರೋನಾ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಅಲ್ಲಿನ ಜಿಲ್ಲಾಧಿಕಾರಿ ಡಾ. ಸಜಿತ್‌ ಬಾಬು ಅವರು ಸ್ವತಃ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಕೊರೋನಾ ಹೋರಾಟಕ್ಕೆ ಸಾಗರದ ಹಿರಿಯ ಜೀವ ನೀಡಿದ ದೇಣಿಗೆ ಕೋಟಿ ರೂ.ಗೂ ಕಡಿಮೆ ಇಲ್ಲ!

ಅಲ್ಲದೆ ಅವರ ಕಾರು ಚಾಲಕ ಮತ್ತು ಗನ್‌ಮ್ಯಾನ್‌ ಕೂಡ ಕ್ವಾರಂಟೈನ್‌ ಆಗಿದ್ದಾರೆ. ಖಾಸಗಿ ಚಾನೆಲ್‌ ವರದಿಗಾರ ಏ.19 ರಂದು ಜಿಲ್ಲಾ​ಧಿಕಾರಿಗಳ ಸಂದರ್ಶನ ನಡೆಸಿದ್ದರು. ಈಗ ವರದಿಗಾರನಿಗೆ ಕೊರೋನಾ ದೃಢಪಟ್ಟಿರುವುದರಿಂದ ಜಿಲ್ಲಾ​ಧಿಕಾರಿ ಮಾತ್ರವಲ್ಲ ಅವರ ಕಾರು ಚಾಲಕ ಹಾಗೂ ಗನ್‌ಮ್ಯಾನ್‌ ಕೂಡ ಕ್ವಾರಂಟೈನ್‌ ಆಗಿದ್ದಾರೆ.

ಇದೇನಾಗುತ್ತಿದೆ, ಗ್ರೀನ್ ಝೋನ್ ಗೂ ವಕ್ಕರಿಸಿದ ಕೊರೋನಾ

ಇವರ ಗಂಟಲ ದ್ರವ ತಪಾಣೆಗೆ ಕಳುಹಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಬುಧವಾರ ಸೋಂಕು ಪತ್ತೆಯಾದ ವರದಿಗಾರನಿಗೆ ಮೊದಲು ಯಾವುದೇ ಕೊರೋನಾ ಸೋಂಕು ಲಕ್ಷಣಗಳಿರಲಿಲ್ಲ. ಆದರೆ ತಪಾಸಣೆ ಸಂದರ್ಭದಲ್ಲಿ ಕೊರೋನಾ ಸೋಂಕು ಪಾಟಿಸಿವ್‌ ಆಗಿತ್ತು.