'ಜನರ ಸಂಕಷ್ಟಕ್ಕೆ ಸ್ಪಂದಿಸದ ಮೋದಿ, ಬಿಜೆಪಿ ಸರ್ಕಾರದ ವೈಫಲ್ಯ ಕಾಂಗ್ರೆಸ್‌ಗೆ ವರ'

ನಿರುದ್ಯೋಗಿ ಪದವೀಧರ ಸಮಸ್ಯೆಗಳು ಇನ್ನೂ ಹಾಗೆ ಇದ್ದು ಅವರಿಗೆ ಉದ್ಯೋಗದ ಭರವಸೆ ಮರಿಚಿಕೆ| ಸಾವಿರಾರು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿಕೆ ನೀಡಿ ತಮ್ಮ ಮಾತು ಉಳಿಸಿಕೊಳ್ಳುವಲ್ಲಿ ವಿಫರಾದ ಪ್ರಧಾನಿ ಮೋದಿ| 
 

Former MLA Ramakrishna Doddamani Slams on BJP Government grg

ಲಕ್ಷ್ಮೇಶ್ವರ(ಅ.16): ಪದವಿಧರ ನಿರುದ್ಯೋಗಿಗಳ ಸಮಸ್ಯೆ ಬಗೆಹರಿಸುವಲ್ಲಿ ಪ್ರೊ. ಎಸ್‌.ವಿ. ಸಂಕನೂರು ವಿಫಲರಾಗಿದ್ದಾರೆ. ಅದ್ದರಿಂದ ಈ ಬಾರಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಎಂ.ಆರ್‌. ಕುಬೇರಪ್ಪ ಅವರು ಸುಲಭವಾಗಿ ಗೆಲ್ಲುತ್ತಾರೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಪಟ್ಟಣದ ಚೆನ್ನಮ್ಮನ ವನ ಕಲ್ಯಾಣ ಮಂಟಪದಲ್ಲಿ ಗುರುವಾರ ಕಾಂಗ್ರೆಸ್‌ ಪಕ್ಷದ ಪಶ್ಚಿಮ ಪದವಿಧರ ಕ್ಷೇತ್ರದ ಅಭ್ಯರ್ಥಿ ಎಂ.ಆರ್‌. ಕುಬೇರಪ್ಪ ಅವರ ಪರವಾಗಿ ಹಮ್ಮಿಕೊಳ್ಳಲಾಗಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷವು ತಮ್ಮ ಆಡಳಿತ ಅವಧಿಯಲ್ಲಿ ನೂರಾರು ವೈಫಲ್ಯ ಅನುಭವಿಸುತ್ತಿದ್ದು ಜನರ ಕಣ್ಣಿಗೆ ಮಣ್ಣೆರಚುವ ಮೂಲಕ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದೆ. ದೇಶವು ಕೊರೋನಾ ಸಂಕಷ್ಟದಿಂದ ಸಾಕಷ್ಟು ಸಾವು ನೋವು ಅನುಭವಿಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಜನರ ಕಷ್ಟಗಳಿಗೆ ಸ್ಪಂಧಿಸುವ ಕಾರ್ಯ ಮಾಡುತ್ತಿಲ್ಲ, ನಿರುದ್ಯೋಗಿ ಪದವೀಧರ ಸಮಸ್ಯೆಗಳು ಇನ್ನೂ ಹಾಗೆ ಇದ್ದು ಅವರಿಗೆ ಉದ್ಯೋಗದ ಭರವಸೆ ಮರಿಚಿಕೆಯಾಗಿದೆ. ಸಾವಿರಾರು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿಕೆ ನೀಡಿದ್ದ ಪ್ರಧಾನಿ ಅವರು ತಮ್ಮ ಮಾತು ಉಳಿಸಿಕೊಳ್ಳುವಲ್ಲಿ ವಿಫರಾಗಿದ್ದಾರೆ.

ರೋಣ: ಭೀಕರ ಮಳೆ, ಮಣ್ಣಿನ ಮನೆ ಮುಂಭಾಗ ಕುಸಿದು ವೃದ್ಧೆ ಸಾವು

ಲಕ್ಷ್ಮೇಶ್ವರ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದ್ದು ರಸ್ತೆಗಳೆಲ್ಲ ಗುಂಡಿಗಳಾಗಿ ಪರಿವರ್ತನೆಯಾಗಿದ್ದರೂ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿಲ್ಲ. ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್‌ ಕಂಪನಿಗಳ ಖಾಸಗೀಕರಣ ಮಾಡುವ ಮೂಲಕ ಬಂಡವಾಳ ಶಾಹಿಗಳ ಜೇಬು ತುಂಬಿಸುವ ಕಾರ್ಯ ಬಿಜೆಪಿ ಸರ್ಕಾರಗಳು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿವೆ ಎಂದರು.

ಇದೆ ಸಂದರ್ಭದಲ್ಲಿ ಜಿಪಂ ಸದಸ್ಯ ಎಸ್‌.ಪಿ. ಬಳಿಗಾರ. ತಾಪಂ ಮಾಜಿ ಸದಸ್ಯ ಚೆನ್ನಪ್ಪ ಜಗಲಿ, ಪುರಸಭೆ ಸದಸ್ಯ ರಾಜು ಕುಂಬಿ, ಜಯಕ್ಕ ಕಳ್ಳಿ, ವಿರೇಂದ್ರಗೌಡ ಪಾಟೀಲ, ಸೋಮಣ್ಣ ಬೆಟಗೇರಿ, ಬಸವರಾಜ ಬಾಳೇಶ್ವರಮಠ, ನಜೀರ್‌ಅಹ್ಮದ್‌ ಗದಗ, ಭಾಗ್ಯಶ್ರೀ ಬಾಬಣ್ಣ ಮಾತನಾಡಿದರು.

ಸಭೆಯಲ್ಲಿ ಪುರಸಭೆ ಸದಸ್ಯ ಮಹಾದೇವಪ್ಪ ಅಣ್ಣಿಗೇರಿ, ವಿರೂಪಾಕ್ಷಪ್ಪ ನಂದೆಣ್ಣವರ, ಫಕ್ಕೀರೇಶ ಹಡಪದ, ಸುರೇಶ ಬೀರಣ್ಣವರ, ಲಕ್ಷ್ಮವ್ವ ಕುರಿ, ಪರಮೇಶ ಲಮಾಣಿ, ಸೋಮು ಯತ್ತಿನಹಳ್ಳಿ, ಮುತ್ತಣ್ಣ ಬಟ್ಟೂರ ಮೊದಲಾದವರು ಇದ್ದರು. ಅಂಬರೀಶ ತೆಂಬದಮನಿ ಸ್ವಾಗತಿಸಿ, ನಿರೂಪಿಸಿದರು.
 

Latest Videos
Follow Us:
Download App:
  • android
  • ios