Asianet Suvarna News Asianet Suvarna News

ರೋಣ: ಭೀಕರ ಮಳೆ, ಮಣ್ಣಿನ ಮನೆ ಮುಂಭಾಗ ಕುಸಿದು ವೃದ್ಧೆ ಸಾವು

ಬೆಳಗಿನ ಜಾವ ಬಹಿರ್ದೆಸೆಗೆ ಹೋಗಿ ಮನೆಗೆ ಮರಳಿ ಬರುವ ವೇಳೆ ವೃದ್ಧೆಯ ಮೇಲೆ ಬಿದ್ದ ಮನೆಯ ಗೋಡೆ| ಗದಗ ಜಿಲ್ಲೆ ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿ ನಡೆದ ಘಟನೆ| ಮಣ್ಣಿನಡಿ ಸಿಲುಕಿದ್ದ ವೃದ್ಧೆ ರಕ್ಷಣೆಗೆ ಮುಂದಾದ ಕುಸಿದು   ಗ್ರಾಮಸ್ಥರು| 

Old Age Women Dies for Wall Collapsed Due to Heavy Rain in Gadag District grg
Author
Bengaluru, First Published Oct 15, 2020, 2:24 PM IST

ರೋಣ(ಅ.15): ಕಳೆದ ಹದಿನೈದು ದಿನಗಳಿಂದ ನಿರಂತರ ಸುರಿದ ಮಳೆಗೆ ಮಣ್ಣಿನ ಮನೆ ಮುಂಭಾಗ ಕುಸಿದು, ಮಣ್ಣಿನಡಿ ಸಿಲುಕಿ ವೃದ್ಧೆ ಮೃತಪಟ್ಟ ಘಟನೆ ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದೆ.

ಮೃತ ದುರ್ದೈವಿ ಶಂಕ್ರಮ್ಮ ನಿಂಗನಗೌಡ ಭೀಮನಗೌಡ್ರ(67), ಬೆಳಗಿನ ಜಾವ ಬಹಿರ್ದೆಸೆಗೆ ಹೋಗಿ ಮನೆಗೆ ಮರಳಿ ಬರುವ ವೇಳೆ ತಮ್ಮ ಮನೆಯ ಎದುರಿಗಿದ್ದ ಮನೆಯ ಗೋಡೆ ಕುಸಿದು ವೃದ್ಧೆಯ ಮೇಲೆ ಬಿದ್ದಿದೆ. ತಕ್ಷಣವೇ ಗ್ರಾಮಸ್ಥರು ಮಣ್ಣಿನಡಿ ಸಿಲುಕಿದ್ದ ವೃದ್ಧೆ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ, ತೀವ್ರ ಗಾಯಗೊಂಡಿದ್ದರಿಂದ ಅವರನ್ನು ಚಿಕಿತ್ಸೆಗೆ ರೋಣ ಪಟ್ಟಣಕ್ಕೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಲೆನೊವಾ ವಿಶೇಷ ಸ್ಪರ್ಧೆ: ವಿಶ್ವದ 10 ಮಹಿಳೆಯರ ಜೀವನಗಾಥೆಗೆ ನರಗುಂದದ ಯುವತಿ ಅಯ್ಕೆ

ಮನೆಯೊಳಗೆ ಹೋಗಲು ಬಿಡದ ಜವರಾಯ:

ವೃದ್ಧೆ ಶಂಕ್ರಮ್ಮ ಬೆಳಗಿನ ಜಾವ ಬಹಿರ್ದೆಸೆಗೆ ತೆರಳಿ ಮನೆಗೆ ವಾಪಾಸ್‌ ಬರುತ್ತಿದ್ದಳು. ಇನ್ನೇನು ತನ್ನ ಮನೆ ಒಳಗೆ ಹೋಗಬೇಕು ಅನ್ನುವಷ್ಟರಲ್ಲಿ ವೃದ್ಧೆ ಮೇಲೆ ತನ್ನ ಮನೆ ಎದುರಿಗೆ ಇರುವ ಮಣ್ಣಿನ ಮನೆ ಬಿದ್ದಿದೆ. ಕೇವಲ ಇನ್ನೆರಡು ಅಡಿ ಹೆಜ್ಜೆ ಹಾಕಿ ತನ್ನ ಮನೆಯೊಳಗೆ ಹೋಗಿದ್ದರೆ ವೃದ್ಧೆ ಬದುಕುವ ಸಾಧ್ಯತೆಯಿತ್ತು. ಮನೆಯೊಳಗೆ ಹೋಗಲು ಬಿಡದ ಜವರಾಯ ಅವರನ್ನು ಬಲಿ ಪಡೆದ ಎಂದು ಸ್ಥಳೀಯರು ಕಣ್ಣಿರಿಟ್ಟರು. ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕ ಎನ್‌.ಐ. ಅಡಿವೆಣ್ಣರ, ಗ್ರಾಪಂ ಆಡಳಿತಾಧಿಕಾರಿ ಬಸವರಾಜ ಅಂಗಡಿ, ಪಿಡಿಒ ಚನ್ನಪ್ಪ ಇಮ್ರಾಪೂರ, ಪಿ.ಎಸ್‌.ಐ ವಿನೋದ ಪೂಜಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
 

Follow Us:
Download App:
  • android
  • ios