Asianet Suvarna News Asianet Suvarna News

ಸರ್ಕಾರದಿಂದ ಮಹದಾಯಿ ಮೂಲಸ್ವರೂಪವೇ ಬದಲು: ಎನ್‌.ಎಚ್‌. ಕೋನರಡ್ಡಿ

ನ್ಯಾ​ಯಾ​ಧಿ​ಕ​ರ​ಣದ ಆ​ದೇ​ಶ​ದಂತೆ ರಾ​ಜ್ಯಕ್ಕೆ 13.42 ಟಿ​ಎಂಸಿ ನೀರು ಹಂಚಿಕೆ ಮಾ​ಡು​ವಂತೆ ಸೂ​ಚನೆ ನೀ​ಡ​ಲಾ​ಗಿದೆ. ಆ​ದರೆ ಅದು ವಿ​ವಿಧ ಕಾ​ರ​ಣಕ್ಕೆ ಹಾಗೂ ಬಿ​ಜೆಪಿ ನಾ​ಯ​ಕರ ಸ್ವಾರ್ಥ ರಾ​ಜ​ಕಾ​ರ​ಣಕ್ಕೆ ಬ​ಲಿ​ಯಾಗಿ, ಕಾ​ಮ​ಗಾ​ರಿಯ ಟೆಂಡರ್‌ ಪ್ರ​ಕ್ರಿಯೆ ನ​ಡೆ​ದಿಲ್ಲ ಎಂದು ದೂ​ರಿ​ದ​ ಕೋನರಡ್ಡಿ 

Former MLA NH Konareddy Talks Over Mahadayi grg
Author
First Published Oct 7, 2022, 7:30 PM IST

ಹುಬ್ಬಳ್ಳಿ(ಅ.07):  ಮ​ಹ​ದಾಯಿ ಮತ್ತು ಕ​ಳಸಾಬಂಡೂರಿ ಕಾ​ಮ​ಗಾ​ರಿಯ ಮೂಲಸ್ವರೂಪವನ್ನೇ ರಾಜ್ಯ ಸರ್ಕಾರ ಬದಲಿಸಿದೆ ಎಂದು ಆರೋಪಿಸಿರುವ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ, ಇದರ ಸಾಧಕ ಬಾಧಕ ಚರ್ಚಿಸಲು ಅ. 23ರಂದು ಇಲ್ಲಿನ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ವಿವರಿಸಿದರು. ಪ​ತ್ರಿ​ಕಾ​ಗೋ​ಷ್ಠಿ​ಯಲ್ಲಿ ಮಾ​ತ​ನಾ​ಡಿದ ಅ​ವ​ರು, ನ್ಯಾ​ಯಾ​ಧಿ​ಕ​ರ​ಣದ ಆ​ದೇ​ಶ​ದಂತೆ ರಾ​ಜ್ಯಕ್ಕೆ 13.42 ಟಿ​ಎಂಸಿ ನೀರು ಹಂಚಿಕೆ ಮಾ​ಡು​ವಂತೆ ಸೂ​ಚನೆ ನೀ​ಡ​ಲಾ​ಗಿದೆ. ಆ​ದರೆ ಅದು ವಿ​ವಿಧ ಕಾ​ರ​ಣಕ್ಕೆ ಹಾಗೂ ಬಿ​ಜೆಪಿ ನಾ​ಯ​ಕರ ಸ್ವಾರ್ಥ ರಾ​ಜ​ಕಾ​ರ​ಣಕ್ಕೆ ಬ​ಲಿ​ಯಾಗಿ, ಕಾ​ಮ​ಗಾ​ರಿಯ ಟೆಂಡರ್‌ ಪ್ರ​ಕ್ರಿಯೆ ನ​ಡೆ​ದಿಲ್ಲ ಎಂದು ದೂ​ರಿ​ದ​ರು.

ಮೂಲ ಸ್ವರೂಪ ಬದಲು:

ರಾಜ್ಯ ಸ​ರ್ಕಾರ ಮ​ಹ​ದಾಯಿ ಯೋ​ಜನೆ ಅ​ನು​ಷ್ಠಾ​ನಕ್ಕೆ ತ​ಯಾ​ರಿ​ಸಿದ್ದ ಮೊ​ದಲ ಡಿ​ಪಿ​ಆ​ರ್‌​ನಲ್ಲಿ 28 ಮೀ​ಟರ್‌ ಎ​ತ್ತ​ರದ ಆ​ಣೆ​ಕಟ್ಟು ಕ​ಟ್ಟಲು ನಿ​ರ್ಧ​ರಿ​ಸ​ಲಾ​ಗಿತ್ತು. ಆ​ದರೆ ರಾಜ್ಯ ಸ​ರ್ಕಾರ ಯೋ​ಜ​ನೆಯ ಕಾ​ಮ​ಗಾ​ರಿ​ಯಲ್ಲಿ ಅ​ನೇಕ ಬ​ದ​ಲಾ​ವಣೆ ಮಾ​ಡಿದ್ದು ಹೊಸ ಡಿ​ಪಿ​ಆರ್‌ ಸಿ​ದ್ಧ​ಪ​ಡಿ​ಸಿದೆ. ಅ​ದ​ರಲ್ಲಿ ಆ​ಣೆ​ಕ​ಟ್ಟಿನ ಎ​ತ್ತ​ರ​ವನ್ನು 11 ಮೀ​ಟರ್‌ಗೆ ಇ​ಳಿಕೆ ಮಾ​ಡ​ಲಾ​ಗಿದೆ. ಇದು ಮ​ಹ​ದಾಯಿ ಯೋ​ಜ​ನೆಯ ಮೂ​ಲ ಸ್ವ​ರೂ​ಪ​ವನ್ನೇ ಬ​ದ​ಲಾ​ವಣೆ ಮಾ​ಡಿದಂತಾಗಿದೆ. ಇ​ದ​ರಿಂದ ರಾ​ಜ್ಯದ ಜ​ನ​ತೆಗೆ ಅ​ನ್ಯಾ​ಯ​ವಾ​ಗ​ಲಿದೆ ಎಂದು ಆ​ರೋ​ಪಿ​ಸಿ​ದ​ರು.

ಧಾರವಾಡ ಜಿಲ್ಲೆಯ ರೈತರ ಪಾಲಿಗೆ ಕಹಿಯಾದ ಕಬ್ಬು!

ನೂ​ತನ ಡಿ​ಪಿ​ಆರ್‌ನಲ್ಲಿ ಮ​ಹ​ದಾಯಿ-ಕ​ಳಸಾ ಬಂಡೂ​ರಿಯ ವಿ​ವಿಧ ನಾ​ಲಾ​ಗ​ಳಿಂದ ಬ​ರುವ ನೀ​ರನ್ನು ಲಿಫ್ಟ್‌ ಮೂ​ಲಕ ಮ​ಲ​ಪ್ರಭಾ ನ​ದಿಗೆ ಸೇ​ರಿ​ಸುವ ಉ​ದ್ದೇಶ ಇ​ಟ್ಟು​ಕೊ​ಳ್ಳ​ಲಾ​ಗಿದೆ. ಇ​ದರ ಸಾ​ಧ​ಕ-ಬಾ​ಧ​ಕ​ಗಳ ಬಗ್ಗೆ ಅ. 23ರಂದು ಬೆ​ಳಗ್ಗೆ 11ಕ್ಕೆ ಹು​ಬ್ಬ​ಳ್ಳಿ​ಯಲ್ಲಿ ತ​ಜ್ಞರ ಹಾಗೂ ವಿ​ವಿಧ ಸಂಘ​ಟನೆ, ರೈತ ಮು​ಖಂಡರ ಸ​ಮ್ಮು​ಖ​ದಲ್ಲಿ ಸಭೆ ನ​ಡೆ​ಸಿ, ಚ​ರ್ಚಿ​ಸ​ಲಾ​ಗು​ವುದು ಎಂದು ತಿ​ಳಿ​ಸಿ​ದ​ರು.

ಪರಿಹಾರದಲ್ಲಿ ತಾರತಮ್ಯ:

ಸ​​ರ್ಕಾರ ಧಾ​ರ​ವಾಡ ಜಿಲ್ಲೆಯ ರೈ​ತ​ರಿಗೆ ಬೆಳೆಹಾನಿ ಪ​ರಿ​ಹಾರ ವಿ​ತ​ರ​ಣೆ​ಯಲ್ಲಿ ತಾ​ರ​ತಮ್ಯ ಧೋ​ರಣೆ ಅ​ನು​ಸ​ರಿ​ಸು​ತ್ತಿದ್ದು, ಉ​ಳಿದ ಜಿ​ಲ್ಲೆ​ಗಿಂತ ಕ​ಡಿಮೆ ಪ​ರಿ​ಹಾರ ನೀ​ಡು​ತ್ತಿದೆ ಎಂದು ಆರೋಪಿಸಿದರು. ಜಿ​ಲ್ಲೆಯ ನ​ವ​ಲ​ಗುಂದ, ಅ​ಣ್ಣಿ​ಗೇರಿ ಹಾಗೂ ಹು​ಬ್ಬಳ್ಳಿ ತಾ​ಲೂ​ಕಿ​ನಲ್ಲಿ ಮುಂಗಾ​ರು ​ಬೆಳೆ ಮ​ಳೆ​ಯಿಂದ ಸಂಪೂರ್ಣ ಹಾ​ನಿ​ಯಾ​ಗಿವೆ. ಸರ್ಕಾರಿ ಬೆಳೆ​ಹಾನಿ ಪ​ರಿ​ಹಾ​ರ​ವಾಗಿ ಒ​ಣ​ಬೇ​ಸಾ​ಯದ ಪ್ರತಿ ಹೇ​ಕ್ಟೆರ್‌ ಬೆ​ಳೆಗೆ . 13,600, ನೀ​ರಾ​ವ​ರಿ ಬೆ​ಳೆಗೆ . 25 ಸಾ​ವಿರ ಹಾಗೂ ತೋ​ಟ​ಗಾ​ರಿಕೆ ಬೆ​ಳೆಗೆ . 28 ಸಾ​ವಿರ ನಿ​ಗ​ದಿ​ಪ​ಡಿ​ಸಿದೆ. ಆ​ದರೆ ಧಾ​ರ​ವಾಡ ಜಿ​ಲ್ಲೆ​ಯಲ್ಲಿ . 13 ಸಾ​ವಿರದಿಂದ . 27 ಸಾ​ವಿರ ಮಾತ್ರ ಬೆಳೆ ಪ​ರಿ​ಹಾರ ನೀ​ಡ​ಲಾ​ಗು​ತ್ತಿ​ದೆ. ಅ​ನೇಕ ರೈ​ತರ ಖಾ​ತೆಗೆ ಇಂದಿಗೂ ಹಣ ಜ​ಮೆ​ಯಾ​ಗಿಲ್ಲ ಎಂದು ಕೋನರಡ್ಡಿ ದೂ​ರಿ​ದ​ರು.

ಧಾರವಾಡ: ಸೌಂಡ್‌ ಸ್ಪೀಕರ್ ಹಚ್ಚಿದಕ್ಕೆ ದುರ್ಗಾಮಾತಾ ಮಂಟಪಕ್ಕೆ ನುಗ್ಗಿ ಮಹಿಳಾ ಅಧಿಕಾರಿಯಿಂದ ದರ್ಪ..!

ಗ​ದಗ ಜಿ​ಲ್ಲೆಯ ರೈ​ತ​ರಿಗೆ ಪ್ರತಿ ಹೆ​ಕ್ಟೇರ್‌ಗೆ . 50 ಸಾ​ವಿರ ​ವ​ರೆಗೆ (​ಡ​ಬ್ಬ​ಲ್‌) ಸರ್ಕಾರ ಪ​ರಿ​ಹಾರ ನೀ​ಡಲಾಗುತ್ತಿದೆ. ಧಾ​ರ​ವಾಡ ಜಿ​ಲ್ಲೆಯ ರೈ​ತ​ರಿಗೆ ಸರ್ಕಾರ ಹಾಗೂ ಸ್ಥ​ಳೀಯ ಸ​ಚಿ​ವರು ಮ​ಲ​ತಾಯಿ ಧೋ​ರಣೆ ತೋ​ರಿ​ಸು​ತ್ತಿ​ದ್ದಾರೆ. ಕೂ​ಡಲೇ ನ​ವ​ಲ​ಗುಂದ, ಅ​ಣ್ಣಿ​ಗೇರಿ ಹಾಗೂ ಹು​ಬ್ಬಳ್ಳಿ ತಾ​ಲೂ​ಕಿಗೂ ಪ್ರತಿ ಹೆ​ಕ್ಟೇರ್‌ಗೆ 50 ಸಾ​ವಿರ ಬೆಳೆ ಪ​ರಿ​ಹಾರ ನೀ​ಡ​ಬೇಕು. ಇ​ಲ್ಲದೇ ಹೋ​ದಲ್ಲಿ ಮುಂಬ​ರುವ ದಿ​ನ​ದಲ್ಲಿ ಉಗ್ರ ಹೋ​ರಾಟ ನ​ಡೆ​ಸ​ಲಾ​ಗು​ವು​ದು ಎಂದು ಎ​ಚ್ಚ​ರಿ​ಸಿ​ದ​ರು.
ಪ​ತ್ರಿ​ಕಾ​ಗೋ​ಷ್ಠಿ​ಯಲ್ಲಿ ಶಿ​ವಣ್ಣ ಹು​ಬ್ಬಳ್ಳಿ ಸೇ​ರಿ​ದಂತೆ ಅ​ನೇ​ಕ​ರಿ​ದ್ದ​ರು.

ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ನಡೆಸುತ್ತಿರುವ ಭಾರತ ಜೋಡೋ ಯಾತ್ರೆಗೆ ಜನ ಮೆಚ್ಚಿಗೆ ದೊರೆಯುತ್ತಿದೆ. ಅದನ್ನು ಸಹಿಸಲಾಗದೇ ಬಿಜೆಪಿಯವರು ಅನಗತ್ಯ ಟೀಕೆ ಮಾಡುತ್ತಿದ್ದಾರೆ. ಯಾತ್ರೆಯಲ್ಲಿ ನಾನು ಕೂಡಾ ಭಾಗವಹಿಸುತ್ತೇನೆ ಅಂತ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ತಿಳಿಸಿದ್ದಾರೆ. 
 

Follow Us:
Download App:
  • android
  • ios