Asianet Suvarna News Asianet Suvarna News

ಧಾರವಾಡ: ಸೌಂಡ್‌ ಸ್ಪೀಕರ್ ಹಚ್ಚಿದಕ್ಕೆ ದುರ್ಗಾಮಾತಾ ಮಂಟಪಕ್ಕೆ ನುಗ್ಗಿ ಮಹಿಳಾ ಅಧಿಕಾರಿಯಿಂದ ದರ್ಪ..!

ದೇವಿ ಪ್ರತಿಷ್ಠಾಪಣೆ ಯಾರು ಅವಕಾಶ ಕೊಟ್ಟಿದ್ದಾರೆ ಎಂದು ಏಕವಚನದಲ್ಲಿ ಬೈದಾಡಿದ ಮಹಿಳಾ ಅಧಿಕಾರಿ 

People Case Agains Government Officer in Dharwad grg
Author
First Published Oct 4, 2022, 8:00 PM IST

ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ(ಅ.04):  ಮಹಾನವಮಿ ಹಬ್ಬದ ವಿಚಾರವಾಗಿ ಓಣಿಯಲ್ಲಿ ದುರ್ಗಾಮಾತಾ ಮೂರ್ತಿ ಪ್ರತಿಷ್ಠಾಪಣೆ ಮಾಡಿದಕ್ಕೆ‌ ಮತ್ತು ಸ್ಪೀಕರ್ ಅವಳವಡಿಕೆ ಮಾಡಿದ್ದಕ್ಕೆ ಅಬಕಾರಿ ಇಲಾಖೆಯಲ್ಲಿ ಪ್ರೊಬೇಷನರ್ ಡಿಸಿ ಯಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಮಹಿಳಾ ಅಧಿಕಾರಿಯೊಬ್ಬರು ಏಕಾಏಕಿ ದುರ್ಗಾಮಾತಾ ಮಂಟಪಕ್ಕೆ ಹೋಗಿ ಅಲ್ಲಿರುವ ಸೌಂಡ್‌ ಸಿಸ್ಟಮ್‌ ಎಲೆಕ್ಟ್ರಿಕಲ್ ಬೋರ್ಡ್‌ಗಳನ್ನ‌ ಕಿತ್ತು ಹಾಕಿ ದರ್ಪ ತೋರಿಸಿರುವ ಘಟನೆ ಧಾರವಾಡ ಉಪನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ರಾಜ್ ನಗರದಲ್ಲಿ ಘಟನೆ ನಡೆದಿದೆ.

ಕಳೆದ ಮೂರು ದಿನಗಳಿಂದ ಈ ಮಹಿಳಾ ಅಧಿಕಾರಿ ರಾಜನಗರ ಕಾಲೋನಿಯಲ್ಲಿ ದಿನನಿತ್ಯ ಬಂದು ಕಿರಿಕಿರಿ ಮಾಡುತ್ತಿದ್ದರು ಎಂದು ಸ್ಥಳಿಯರು ಮಹಿಳಾ ಅಧಿಕಾರಿ ಮೇಲೆ ಗಂಭೀರ ಆರೋಪವನ್ನ ಮಾಡುತ್ತಿದ್ದಾರೆ. ಆದರೆ ಇಲ್ಲಿ ಈ ಮೂರ್ತಿಯನ್ನ ಪ್ರತಿಷ್ಠಾಪಣೆಗೆ ಅವಕಾಶ ಯಾರು ಕೊಟ್ಟಿದ್ದಾರೆ ಅವರನ್ನ ಇಲ್ಲಿ ಕರೆಸಿಬೇಕು ಎಂದು ಮಂಟಪಕ್ಕೆ‌ ನುಗ್ಗಿ ಅಲ್ಲಿರುವ ಚಿಕ್ಕ ಮಕ್ಕಳು ಸೇರಿದಂತೆ‌ ಹಿರಿಯರಿಗೆ ಏಕವಚನದಲ್ಲಿ ಮಾತನಾಡಿ ದೇವಿಯ ಬಗ್ಗೆ ಹಿಯ್ಯಾಳಿಸಿ ಮಾತನಾಡಿದ್ದಾರೆ. 

ಹುಬ್ಬಳ್ಳಿಯಲ್ಲಿ ಹದಗೆಟ್ಟ ರಸ್ತೆಗಳು: 'ದುರ್ಗಾದೇವಿ' ವೇಷ ತೊಟ್ಟು ಬಾಲಕಿ ವಿಭಿನ್ನ ಅಭಿಯಾನ

ಇನ್ನು ಘಟನೆಯನ್ನ‌ ಖಂಡಿಸಿ ಮಹಿಳೆಯರು ಮತ್ತು ಸ್ಥಳೀಯರು ಬಂದು ಉಪನಗರ ಪೋಲಿಸ್ ಠಾಣೆಗೆ ಬಂದು ಮಹಿಳಾ ಅಧಿಕಾರಿ‌ ವಿರುದ್ಧ‌ ದೂರು ಸಲ್ಲಿಸಿದ್ದಾರೆ. ಪೊಲಿಸ್ ಅಧಿಕಾರಿಯಾದ್ರೆ ಏನು ಬೇಕಾದನ್ನ ಮಾಡಬಹುದಾ ಎಂದು ಮಹಿಳೆಯರು ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಹಿಂದೂ ಧರ್ಮದ ಆಚರಣೆಯ ಬಗ್ಗೆ ಈ ಮಹಿಳಾ ಅಧಿಕಾರಿ‌ ಮಾಡಿದನ್ನ ಖಂಡಿಸಿ ಉಪನಗರ ಪೋಲಿಸ್ ಠಾಣೆಯಲ್ಲಿ ಒಂದು ಗಂಟೆಯವರೆಗೆ ಹೈಡ್ರಾಮಾ ನಡೆಯಿತು. 
ಇನ್ನು‌ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ ಮಹಿಳೆಯರು ಮತ್ತು ಯುವಕರು ಮಹಿಳಾ ಅಧಿಕಾರಿ ಹಿಂದೂ ಧರ್ಮದ ಆಚರಣೆಯ ಬಗ್ಗೆ ಬೇಕು ಅಂತಲೆ‌ ಈ ರೀತಿ ದರ್ಪ ತೋರುತ್ತಿದ್ದಾಳೆ. ರಾಜನಗರದಲ್ಲಿ ಯಾರಿಗೂ ಆಗದ ತೊಂದರೆ ಈ ಮಹಿಳಾ ಅಧಿಕಾರಿಗಷ್ಟೆ ಆಯ್ತಾ ಅಂತ ರಾಜನಗರ ನಿವಾಸಿಗಳು ಮಾತನಾಡಿಕ್ಕೊಳ್ಳುತ್ತಿದ್ದಾರೆ.

ಇನ್ನು ದೂರು ಸ್ವಿಕರಿಸಿದ ಉಪನಗರ ಪೋಲಿಸ್ ಠಾಣೆಯ ಪೊಲೀಸರು ಮಹಿಳಾ ಅಧಿಕಾರಿಯನ್ನ ಪೋಲಿಸ್ ಠಾಣೆಗೆ ಕರೆಸಿ ವಿಚಾರಣೆ ಮಾಡ್ತಾರಾ? ಇಲ್ಲವೋ ಎಂಬುದು ಕೂಡಾ ಪ್ರಶ್ನೆ ಸದ್ಯ ಉದ್ಬವವಾಗಿದೆ. ಅಷ್ಟಕ್ಕೂ ಮಹಿಳಾ ಅಧಿಕಾರಿ ಪ್ರೋಬೇಷನರ್ ಅಬಕಾರಿ ಡಿಸಿ ಇದ್ರೂ ಸಹ ಕಿರಿಯ ಅಧಿಕಾರಿಗಳು ಅವರನ್ನ‌ ಠಾಣೆಗೆ ಕರೆಸಿ ವಿಚಾರಣೆ ಮಾಡುತ್ತಾರಾ ಇಲ್ಲವೋ ಎಂಬುದನ್ನ ಕಾದು ನೋಡಬೇಕಿದೆ. ಇನ್ನು ನಾವು ಅಲ್ಲಿ ಮೂರ್ತಿ ಪ್ರತಿಷ್ಠಾಪಣೆ ‌ಮಾಡುತ್ತೇವೆ ಎಂದು ರಾಜನಗರ ನಿವಾಸಿಗಳು ಪಟ್ಟು ಹಿಡಿದಿದ್ದಾರೆ.
 

Follow Us:
Download App:
  • android
  • ios