Asianet Suvarna News Asianet Suvarna News

ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರ ಕಿರಿಯ ಸಹೋದರ ಶಿವಣ್ಣ ಬೆಲ್ಲದ ನಿಧನ

ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರ ಕಿರಿಯ ಸಹೋದರ ಶಿವಣ್ಣ ಬೆಲ್ಲದ (82) ನಿಧನರಾಗಿದ್ದಾರೆ. ನಿನ್ನೆ (ಬುಧವಾರ) ರಾತ್ರಿ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಅಪಘಾತವಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. 

Former MLA Chandrakant Bellads younger brother Shivanna Bellad Passed Away gvd
Author
First Published Oct 6, 2022, 10:16 AM IST

ಧಾರವಾಡ (ಅ.06): ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರ ಕಿರಿಯ ಸಹೋದರ ಶಿವಣ್ಣ ಬೆಲ್ಲದ (82) ನಿಧನರಾಗಿದ್ದಾರೆ. ನಿನ್ನೆ (ಬುಧವಾರ) ರಾತ್ರಿ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಅಪಘಾತವಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಇಂದು ಶಿವಣ್ಣ ಬೆಲ್ಲದ ಅಂತ್ಯಕ್ರಿಯೆ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ನಡೆಯಲಿದೆ.

ಏನಿದು ಘಟನೆ: ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು. ಅಪಘಾತ ನಡೆದ ಕಾರಿನಲ್ಲಿ ಶಾಸಕ ಅರವಿಂದ ಬೆಲ್ಲದ್ ಹೋದರ ಶಿವಣ್ಣ ಬೆಲ್ಲದ ಇದ್ದರು. ಅಪಘಾತದಲ್ಲಿ ಶಿವಣ್ಣ ಬೆಲ್ಲದ ಸ್ಥಿತಿ ಗಂಭೀರವಾಗಿತ್ತು. ಅಪಘಾತ ಸಂಭವಿಸುತ್ತಿದ್ದಂತೆ ಸಹಾಯಕ್ಕೆ ಧಾವಿಸಿ ಬಂದ ಸ್ಥಳೀಯರು ಗಂಭೀರ ಸ್ಥಿತಿಯಲ್ಲಿದ್ದ ಶಿವಣ್ಣ ಬೆಲ್ಲದ ಅವರನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮೃತಪಟ್ಟಿದ್ದಾರೆ. ಇನ್ನು ಧಾರವಾಡ ಉಪನಗರ ಪೊಲೀಸ್ ಠಾಣೆ ಎದುರು ಅಪಘಾತ ನಡೆದಿತ್ತು. ಸದ್ಯ ಉಪನಗರ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಸ್ತೆ ಡಿವೈಡರ್‌ಗೆ ಕಾರು ಡಿಕ್ಕಿ; ಶಾಸಕ ಅರವಿಂದ್ ಬೆಲ್ಲದ್ ಸಹೋದರ ಸ್ಥಿತಿ ಗಂಭೀರ

ಮಾಜಿ ಸಚಿವ ಬೆಳ್ಳುಬ್ಬಿ ಸಹೋದರನ ಪುತ್ರ ಬೈಕ್‌ ಅಪಘಾತದಲ್ಲಿ ಸಾವು: ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿಯವರ ಸಹೋದರ ಮಲ್ಲಿಕಾರ್ಜುನ ಬೆಳ್ಳುಬ್ಬಿಯವರ ಪುತ್ರ ಸಚಿನ್‌ ಬೆಳ್ಳುಬ್ಬಿ (29) ಬುಧವಾರ ಸಂಜೆ ಬೈಕ್‌ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸಚಿನ್‌ ತಮ್ಮ ಸ್ನೇಹಿತ ಕೂಬಕಡ್ಡಿ ನಿವಾಸಿ ಪರಸಪ್ಪ ಉಗ್ರಾಣ ಜೊತೆಗೂಡಿ ಬೈಕ್‌ ಮೇಲೆ ಸವದತ್ತಿ ಎಲ್ಲಮ್ಮನ ದರ್ಶನಕ್ಕೆ ಹೋಗಿ, ಮರಳಿ ಬರುವಾಗ ಬಾಗಲಕೋಟೆ ಜಿಲ್ಲೆ ಕಲಾದಗಿ ಸಮೀಪದ ಯಡಹಳ್ಳಿ ಕ್ರಾಸ್‌ ಬಳಿ ವಾಹನವೊಂದನ್ನು ಓವರ್‌ಟೇಕ್‌ ಮಾಡಲು ಹೋಗಿ ಕ್ಯಾಂಟರ್‌ಗೆ ಬೈಕ್‌ ಡಿಕ್ಕಿಯಾಗಿ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಕುರಿತು ಕಲಾದಗಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಂತರ ಸಂಬಂಧಿಕರಿಗೆ ಶವಗಳನ್ನು ಹಸ್ತಾಂತರಿಸಲಾಗಿದ್ದು, ಬುಧವಾರ ರಾತ್ರಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಬನ್ನಿ ವಿನಿಮಯ, ಸ್ಪರ್ಧಾ ಕಾರ್ಯಕ್ರಮ ರದ್ದು: ಸಚಿನ್‌ ಬೆಳ್ಳುಬ್ಬಿ ನಿಧನದ ಹಿನ್ನೆಲೆಯಲ್ಲಿ ಅ.6 ಗುರುವಾರದಂದು ಕೊಲ್ಹಾರ ಪಟ್ಡಣದಲ್ಲಿ ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿಯವರ ಮನೆಯಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಬನ್ನಿ ವಿನಿಮಯ ಹಾಗೂ ಸ್ನೇಹಮಿಲನ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

ಹಿರಿಯ ಸಾಹಿತಿ ಸೋಲಾಪುರೆ ನಿಧನ: ಶೈಕ್ಷಣಿಕ, ಸಾಹಿತ್ಯಿಕ, ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಶ್ರಮಿಸಿರುವ ಕಲ್ಯಾಣ ನಾಡಿನ ಶ್ರೇಷ್ಠ ಚಿಂತಕ, ಹಿರಿಯ ಸಾಹಿತಿ ಬಾ.ನಾ ಸೋಲಾಪುರೆ (70) ಅವರು ಬುಧವಾರ ಹುಬ್ಬಳ್ಳಿಯಲ್ಲಿ ನಿಧನರಾಗಿದ್ದು ಗುರುವಾರ ಕಮಲನಗರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಔರಾದ್‌ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಅವರು ಗಡಿ ಭಾಗದಲ್ಲಿ ಕನ್ನಡವನ್ನು ತಳಮಟ್ಟದಿಂದ ಕಟ್ಟುವ ಮೂಲಕ ಯುವಕರಿಗೆ ಪ್ರೇರಣೆಯಾಗಿದ್ದರು. 

ಹಿಂದು ಹತ್ಯೆ ಸಂಚಿನ ಗುಟ್ಟು ಬಿಚ್ಚಿಡುತ್ತಿಲ್ಲ ಪಿಎಫ್‌ಐ

ವರದಿಗಾರರಾಗಿ ಕೆಲಸ ಮಾಡಿರುವ ಅವರು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜಿಲ್ಲೆಯ ಅನೇಕ ಕನ್ನಡಪರ ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿದ್ದು, ಗಡಿಯಾಚೆಗೂ ಕನ್ನಡವನ್ನು ಕೊಂಡೊಯ್ದ ಅಪ್ಪಟ ಕನ್ನಡಾಭಿಮಾನಿ. ಪೂಜ್ಯ ಶ್ರೀ ಚೆನ್ನಬಸವ ಪಟ್ಟದ್ದೇವರ ಆಶ್ರಯದಲ್ಲಿ ಬೆಳೆದ ಅವರಿಗೆ ಶರಣ ಪರಂಪರೆ ಹಾಗೂ ಕನ್ನಡ ಸಂಸ್ಕೃತಿ ಮೇಲೆ ಅಪಾರ ಅಭಿಮಾನವಿದ್ದು, ಕಲಬುರಗಿ ಆಕಾಶವಾಣಿ ಮೂಲಕ ಸುಮಾರು 47 ಚಿಂತನಗಳು ಪ್ರಸ್ತುತಪಡಿಸಿರುವ ಅವರು ಈ ಭಾಗದ ಬಹುದೊಡ್ಡ ಪ್ರೇರಕ ಶಕ್ತಿಯಾಗಿದ್ದರು.

Follow Us:
Download App:
  • android
  • ios