Asianet Suvarna News Asianet Suvarna News

ಮಾಜಿ ಸಚಿವ ವೀರುಪಾಕ್ಷಪ್ಪ ಅಗಡಿ ನಿಧನ

  • ಮಾಜಿ ಸಚಿವ ವೀರುಪಾಕ್ಷಪ್ಪ  ಅಗಡಿ (81) ವಯೋ ಸಹಜ ಅನಾರೋಗ್ಯದಿಂದ ಸೋಮವಾರ ರಾತ್ರಿ ನಿಧನ
  • ಕೊಪ್ಪಳದ ಕಲ್ಯಾಣ ನಗರದ ನಿವಾಸದಲ್ಲಿ ಅಗಡಿ ಅವರು ನಿಧನ
Former minister virupakshappa agadi passes away snr
Author
Bengaluru, First Published Oct 12, 2021, 10:36 AM IST

ಕೊಪ್ಪಳ (ಅ.12):  ಮಾಜಿ ಸಚಿವ (Former Minister) ವೀರುಪಾಕ್ಷಪ್ಪ  ಅಗಡಿ (81) (Virupakshappa agadi) ವಯೋ ಸಹಜ ಅನಾರೋಗ್ಯದಿಂದ ಸೋಮವಾರ ರಾತ್ರಿ ನಿಧನರಾಗಿದ್ದಾರೆ. 

ಕೊಪ್ಪಳದ (koppal) ಕಲ್ಯಾಣ ನಗರದ ನಿವಾಸದಲ್ಲಿ ಅಗಡಿ ಅವರು ನಿಧನರಾಗಿದ್ದಾರೆ.  ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ವೀರುಪಾಕ್ಷಪ್ಪ ಅಗಡಿ ಅವರಿಗೆ   ಕಳೆದ ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯ ಕಾಡಿತ್ತು. 

1985-1989 ರವರೆಗೆ ಶಾಸಕರಾಗಿದ್ದ (MLA) ವೀರುಪಾಕ್ಷಪ್ಪ ಅಗಡಿ ಜನತಾ ಪಾರ್ಟಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಎಸ್ ಆರ್ ಬೋಮ್ಮಾಯಿ (SR Bommai) ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿಯೂ (education Minister) ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು ವೀರುಪಾಕ್ಷಪ್ಪ ಅಗಡಿ.

ಇಂದು ಮಗ ಸಿಎಂ, ಅಂದು ಅಪ್ಪನ ಸರ್ಕಾರ ವಜಾ ಮಾಡಲಾಗಿತ್ತು!

ಭಿನ್ನಮತದಿಂದ ಸರ್ಕಾರದ ಬಿದ್ದು ಹೋದ ಕಾರಣ ಕೇವಲ ಒಂದು ವಾರ ಮಾತ್ರವೇ ವೀರುಪಾಕ್ಷಪ್ಪ ಅಗಡಿ ಅವರು ಸಚಿವರಾಗಿ ಕಾರ್ಯನಿರ್ವಹಿಸಿದ್ದರು.  

1989 ರಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದ ವೀರುಪಾಕ್ಷಪ್ಪ ಅಗಡಿ 1998ರಲ್ಲಿ ಲೋಕಶಕ್ತಿ ಪಕ್ಷದಿಂದ ಸ್ಪರ್ಧಿಸಿ ಸೋತರು. 2004 ರಲ್ಲಿ  ಜೆಡಿಎಸ್ (JDS) ನಿಂದ ಲೋಕಸಭೆಗೆ (Loksabha) ಸ್ಪರ್ಧಿಸಿ  ವೀರುಪಾಕ್ಷಪ್ಪ ಅಗಡಿ ಸಂಸದರಾಗಿ ಆಯ್ಕೆ ಆಗಿದ್ದರು. 

ಗೃಹ ಮಂಡಳಿ (Housing board) ಅಧ್ಯಕ್ಷರಾಗಿ, ಬಳಿಕ ವಿಧಾನ ಪರಿಷತ್ ಸದಸ್ಯರಾಗಿಯು ಕಾರ್ಯನಿರ್ವಹಿಸಿದ್ದು, ಬಳಿಕ ಬಿಜೆಪಿ ಸೇರಿ ಸಂಘಟನೆಯಲ್ಲಿ  ತೊಡಗಿಕೊಂಡಿದ್ದರು. ಬಿಜೆಪಿಗೆ (BJP) ಭದ್ರ ನೆಲೆ ಕಲ್ಪಿಸುವಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದರು. 

ವೀರುಪಾಕ್ಷಪ್ಪ ಅಗಡಿ ಅವರು ಮೂವರು ಮಕ್ಕಳನ್ನು ಅಗಲಿದ್ದಾರೆ. 

ಇಂದು ಸಂಜೆ 4 ಗಂಟೆಗೆ ಕೊಪ್ಪಳದ ವೀರಶೈವ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಕಲ್ಯಾಣನಗರದ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ  ಮಾಡಲಾಗಿದೆ. 

Follow Us:
Download App:
  • android
  • ios