ಬೆಳಗಾವಿ(ಆ.24): ಮಾಜಿ ಸಚಿವೆ ಉಮಾಶ್ರೀ ಶುಕ್ರವಾರ ವಡಗಾವಿಯ ನೇಕಾರ ಪ್ರದೇಶಗಳಾದ ಸಾಯಿನಗರ, ನೇಕಾರ ಕಾಲೋನಿ, ಕಲ್ಯಾಣ ನಗರ, ಖಾಸಬಾಗ ಹಾಗೂ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಂಕಷ್ಟಆಲಿಸಿದರು.

ಮಳೆಯಿಂದಾಗಿ ನೇಕಾರರ ಮನೆಗಳು ಬಿದ್ದಿವೆ. ಮನೆಯೊಳಗೆ ನೀರು ನುಗ್ಗಿದ್ದರಿಂದ ವಿದ್ಯುತ್‌ ಮಗ್ಗಗಳು ಜಲಾವೃತಗೊಂಡಿದ್ದು, ನೇಕಾರರಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. ನೇಕಾರರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ನೇಕಾರರು ಮನವಿ ಮಾಡಿದರು. ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ನೇಕಾರರಿಗೆ ಪರಿಹಾರ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಉಮಾಶ್ರೀ ನೇಕಾರರಿಗೆ ಭರವಸೆ ನೀಡಿದರು.

ಪ್ರವಾಹ ಹಾನಿ : ಅಧಿಕಾರಿಗಳಿಗೆ ನೂತನ ಸಚಿವೆ ಶಶಿಕಲಾ ಜೊಲ್ಲೆ ವಾರ್ನಿಂಗ್‌

ಈ ಸಂದರ್ಭದಲ್ಲಿ ಜಿಲ್ಲಾ ನೇಕಾರರ ವೇದಿಕೆ ಅಧ್ಯಕ್ಷ ಪರಶುರಾಮ ಢಗೆ, ನಾಗಪ್ಪ ಬಸಕ್ರಿ, ಬಸವರಾಜ ಕಾಮಕರ, ಬಾಬು ದಿವಟೆ, ಶ್ರೀನಿವಾಸ ತಾಳೂಕರ ಮೊದಲಾದವರು ಇದ್ದರು.