ಕಟೀಲ್ ಆರೋಪ ಗಂಭೀರವಾಗಿ ಪರಿಗಣಿಸುವ ಹಾಗಿಲ್ಲ: ಮಾಜಿ ಸಚಿವ ಎಂ.ಬಿ.ಪಾಟೀಲ
ಶಾಖಾ ಕಾಲುವೆಗಳಿಗೆ ಬಿಜೆಪಿ ಖರ್ಚು, ಯಾರು ಕಮಿಷನ್ ಪಡೆದಿದ್ದಾರೆಂದು ಗೊತ್ತಾಗುತ್ತದೆ: ಎಂಬಿಪಾ ಲೇವಡಿ
ವಿಜಯಪುರ(ಅ.11): ಕಾಲುವೆಗಳು ಎಲ್ಲೆಲ್ಲಿ ಬರುತ್ತವೆ ಎಂಬುವುದರ ಬಗ್ಗೆ ಅರಿವೇ ಇಲ್ಲದವರು ತಮ್ಮ ಮನಸ್ಸಿಗೆ ಬಂದಂತೆ ಮಾತಾನಾಡುತ್ತಾರೆ. ಅದಕ್ಕೆ ಗಮನ ಕೊಡುವ ಅಗತ್ಯವಿಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.
ಬಬಲೇಶ್ವರ ಕ್ಷೇತ್ರದ ದೇವಾಪುರ ಗ್ರಾಮದಲ್ಲಿ ಬಬಲಾದ-ದೇವರಗೆಣ್ಣೂರ-ಲಿಂಗದಳ್ಳಿ-ದೇವಾಪುರ-ಕೊಡಬಾಗಿವರೆಗೆ .9 ಕೋಟಿ ವೆಚ್ಚದಲ್ಲಿ 6.10 ಕಿಮೀ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಅವರು ವಿಜಯಪುರಕ್ಕೆ ಬಂದಾಗ ಮಲಪ್ರಭಾ ಯೋಜನೆಯಡಿ ಅವವ್ಯಹಾರ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ಕಟೀಲ್ ಅವರ ಆರೋಪವನ್ನು ಗಂಭೀರವಾಗಿ ಪರಿಗಣಿಸುವ ಹಾಗಿಲ್ಲ. ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಮುಖ್ಯಕಾಲುವೆಗಳನ್ನು ನಿರ್ಮಾಣ ಮಾಡಲಾಗಿದೆ. ನಂತರ ಶಾಖಾ ಕಾಲುವೆಗಳು ಯಡಿಯೂರಪ್ಪನವರ ಅವಧಿಯಲ್ಲಿ ನಿರ್ಮಾಣಗೊಂಡವು. ಆದರೆ, ಮುಖ್ಯಕಾಲುವೆಗಿಂತಲೂ ಹೆಚ್ಚು ಹಣ ಶಾಖಾ ಕಾಲುವೆಗಳಿಗೆ ಬಿಜೆಪಿ ಖರ್ಚು ಮಾಡಿದ್ದಾರೆ. ಇದರಲ್ಲಿ ಯಾರು ಕಮಿಷನ್ ಪಡೆದಿದ್ದಾರೆ ಎಂದು ಗೊತ್ತಾಗುತ್ತದೆ ಎಂದರು.
ಸಣ್ಣ ಹುಡುಗ(ರಾಹುಲ್ ಗಾಂಧಿ) ಕರ್ಕೊಂಡು ಕಾಂಗ್ರೆಸ್ ಯಾತ್ರೆ: ಸಂಸದ ಜಿಗಜಿಣಗಿ ವ್ಯಂಗ್ಯ
ಸದ್ಯದ ಸರ್ಕಾರ ಆರ್ಥಿಕ ಪರಿಸ್ಥಿಯನ್ನು ಗಂಭೀರ ಸ್ಥಿತಿಗೆ ತಂದಿದೆ. ಸರ್ಕಾರದ ಬಳಿ ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲ. ಈ ಹಿಂದೆ ಮಾಡಿದ ಅಭಿವೃದ್ಧಿ ಯೋಜನೆಗಳ ಬಾಕಿ ಬಿಲೆ ಬಿಡುಗಡೆಗೊಳಿಸದೇ ಹೊಸ ಯೋಜನೆಗಳಿಗೆ ಸಿದ್ಧತೆ ನಡೆದಿದ್ದಾರೆ. ಇವುಗಳಿಂದ ಟೆಂಡರ್ ಪಡೆದ ಗುತ್ತಿಗೆದಾರರು ಬಿಲ್ ದೊರಕದೆ ಸಾಲಕ್ಕೆ ಮೊರೆ ಹೋಗಿ, ನಂತರ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಆಡಳಿತ ವ್ಯವಸ್ಥೆಯಲ್ಲಿ ಕುಂಠಿತವಾಗಿದೆ. ಇದನ್ನೆಲ್ಲ ನೋಡಿ ಸಿದ್ದರಾಮಯ್ಯನವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇದ್ದ ಪರಿಸ್ಥಿತಿಯನ್ನು ಸುಧಾರಿಸಲು ಕನಿಷ್ಠ ಎರಡು ವರ್ಷಗಳಾದರೂ ಬೇಕು. ಬಾಕಿ ಬಿಲ್‌ಗಳನ್ನು ಬಿಡುಗಡೆ ಮಾಡಿದ ನಂತರವೇ ಹೊಸ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಹೇಳುತ್ತಿರುತ್ತಾರೆ ಎಂದರು.
ಪ್ರತಿ ಬಾರಿ ಅಭಿವೃದ್ಧಿಗಾಗಿ ನನ್ನ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಲ್ಲಿ ಕನಿಷ್ಠ ಶೇ.50 ರಷ್ಟುಅನುದಾನವನ್ನು ಮಮದಾಪುರ ಹೋಬಳಿಗೆ ಮೀಸಲಿಟ್ಟಿದ್ದೇನೆ. ನಂತರ ಉಳಿದ ಅನುದಾನವನ್ನು ತಿಕೋಟಾ ಮತ್ತು ಬಬಲೇಶ್ವರ ಹೋಬಳಿಗಳಿಗೆ ವ್ಯಯಿಸಲಾಗುತ್ತಿದೆ. ದೊಡ್ಡ ಮೊತ್ತದ ಈ ಅನುದಾನದಲ್ಲಿ ಗುಣಮಟ್ಟರಸ್ತೆ ಕಾಮಗಾರಿಗಳನ್ನು ಮಾಡಿಸುತ್ತೇನೆ. ರಸ್ತೆ ನಿರ್ಮಾಣವಾಗುವುದಕ್ಕಿಂತ ಮುಂಚೆ ನೀರಿನ ಪೈಪ್, ವಿದ್ಯುತ್ ವೈಯರ್ ಅಳವಡಿಕೆಗೆ ಅವಕಾಶವಿದೆ ನಂತರ ಅವಕಾಶವಿಲ್ಲ. ನೀರು ನಿಲ್ಲುವ ಸ್ಥಳಗಳಲ್ಲಿ ಕಾಂಕ್ರಿಟ್ ರಸ್ತೆಗಳ ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕಾಗಿ ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು.
ಸಣ್ಣ ಹುಡುಗ(ರಾಹುಲ್ ಗಾಂಧಿ) ಕರ್ಕೊಂಡು ಕಾಂಗ್ರೆಸ್ ಯಾತ್ರೆ: ಸಂಸದ ಜಿಗಜಿಣಗಿ ವ್ಯಂಗ್ಯ
ಮಮದಾಪುರ ವಿರಕ್ತಮಠದ ಅಭಿನವ ಮುರುಗೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಎಚ್.ಮುಂಬಾರೆಡ್ಡಿ, ನಂದಿ ಸಕ್ಕರೆ ಕಾರ್ಖಾನೆ ಮಾಜಿ ಸದಸ್ಯ ಎಚ್.ಎಸ್.ಕೋರಡ್ಡಿ, ನಿವೃತ್ತ ಶಿಕ್ಷಕ ವಿ.ವಿ.ಅರಕೇರಿ, ಗುತ್ತಿಗೆದಾರ ಮುಜುಮದಾರ, ಮುಖಂಡರಾದ ಟಿ.ಆರ್.ಪಚ್ಚೇನವರ, ಕೃಷ್ಣಾಜಿ ಕುಲಕರ್ಣಿ, ಮಲ್ಲಿಕಾರ್ಜುನ ಗಂಗೂರ, ಪಂಚಯ್ಯ ಹಿರೇಮಠ, ಬಸನಗೌಡ ಪಾಟೀಲ, ಶಿವನಗೌಡ ಪಾಟೀಲ ತಾಜಪೂರ, ಸಂಗಮೇಶ ನಾಯ್ಕರ, ಗೌಡಪ್ಪಗೌಡ ಪಾಟೀಲ, ರಮೇಶ ಜೈನಾಪುರ, ರವಿ ಬಿರಾದಾರ ಸೇರಿದಂತೆ ಮುಂತಾದವರು ಇದ್ದರು.
ನಂತರ ಮಂಗಳೂರ ಗ್ರಾಮದಲ್ಲಿ ಶೇಗುಣಶಿ-ಮದಗುಣಕಿ-ಕೊಡಬಾಗಿ-ತಾಜಪೂರ-ಮಂಗಳೂರವರೆಗೆ 4.8 ಕಿಮೀ .6.50ಕೋಟಿ ವೆಚ್ಚದಲ್ಲಿ ಹಾಗೂ ಸಂ.4ಗಂ. ಜೈನಾಪೂರ ಆರ್.ಸಿ ಗ್ರಾಮದಲ್ಲಿ ಜೈನಾಪುರ-ಕಾಖಂಡಕಿ ವರೆಗೆ .4.50 ಕೋಟಿ ವೆಚ್ಚದಲ್ಲಿ 3.5 ಕಿಮೀ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.