ಸಾಗರ(ಜು.15): ಸೀಲ್‌ಡೌನ್‌ ಪ್ರದೇಶದಲ್ಲಿರುವ ಜನರಿಗೆ ಸೂಕ್ತ ಸೌಲಭ್ಯ ಒದಗಿಸಬೇಕು ಹಾಗೂ ಪಟ್ಟಣಕ್ಕೆ ಸಮರ್ಪಕ ಕುಡಿಯುವ ನೀರು ಒದಗಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಮಂಗಳವಾರ ಕಾಂಗ್ರೆಸ್‌ ಪಕ್ಷದಿಂದ ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ನೇತೃತ್ವದಲ್ಲಿ ಉಪವಿಭಾಗಾ​ಧಿಕಾರಿ ಡಾ.ನಾಗರಾಜ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಕೊರೋನಾ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸೀಲ್‌ಡೌನ್‌ ಮಾಡಲಾಗಿದೆ. ಇಂತಹ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಜನರಿಗೆ ಅಗತ್ಯ ವಸ್ತು ಹಾಗೂ ಔಷ​ಧಿಗಳು ನಿಗ​ತ ಸಮಯಕ್ಕೆ ಸಿಗುತ್ತಿಲ್ಲ. ಇದರಿಂದಾಗಿ ಅವರು ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಸೀಲ್‌ಡೌನ್‌ ಪ್ರದೇಶಕ್ಕೆ ಒಬ್ಬೊಬ್ಬ ಇನ್ಸಿಡೆಂಟ್‌ ಕಮಾಂಡರ್‌ನನ್ನು ನೇಮಕ ಮಾಡಬೇಕು. ಕಾಲಕಾಲಕ್ಕೆ ಅವರ ಅಗತ್ಯ ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಒಂದೇ ದಿನ ಕೊರೋನಾಗೆ 56 ಬಲಿ: ನಾಲ್ವರು ಮನೆಯಲ್ಲಿಯೇ ಸಾವು

ಸಾಗರ ಪಟ್ಟಣಕ್ಕೆ ಕುಡಿಯುವ ನೀರನ್ನು ಪೂರೈಕೆ ಮಾಡುವ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದರೂ ಅದು ಪರಿಣಾಮಕಾರಿಯಾಗಿ ನಿರ್ವಹಣೆಯಾಗುತ್ತಿಲ್ಲ. ಇದರಿಂದ ಪಟ್ಟಣಕ್ಕೆ ಸರಿಯಾಗಿ ನೀರು ಸರಬರಾಜು ಆಗದೆ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರು ಮೇಲೆತ್ತುವ ಸ್ಥಳದಲ್ಲಿನ ಪಂಪ್‌ ಪದೇಪದೆ ಹಾಳಾಗುತ್ತಿರುವುದೇ ಸಮಸ್ಯೆಗೆ ಕಾರಣವಾಗಿದೆ. ತಕ್ಷಣ ನೀರು ಪೂರೈಕೆ ಘಟಕದಲ್ಲಿ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಆರ್‌.ಜಯಂತ್‌, ನಗರ ಅಧ್ಯಕ್ಷ ಐ.ಎನ್‌.ಸುರೇಶಬಾಬು, ಪ್ರಮುಖರಾದ ತಸ್ರೀಫ್‌, ವಿ.ಶಂಕರ್‌, ಮಹಾಬಲ ಕೌತಿ, ಪ್ರವೀಣ ಬಣಕಾರ್‌, ರಮೇಶ್‌, ಮಧುಮಾಲತಿ, ಪ್ರಶಾಂತ್‌, ಗಣೇಶ್‌ ವೆಂಕಟೇಶ್‌ ಮೆಳವರಿಗೆ, ಗಣಪತಿ ಮಂಡಗಳಲೆ, ರೇಷ್ಮಾ ಇನ್ನಿತರರು ಹಾಜರಿದ್ದರು.