ಧಾರವಾಡ(ನ.15): ಜಿಲ್ಲೆಯಲ್ಲಿ ರಾಜಕೀಯ ಒತ್ತಡ ಹೇರುವ ಕ್ರಮಗಳು ನಡೆದಿವೆ. ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರ ಬಂಧನ ನೋವಿನ ವಿಚಾರವಾಗಿದ್ದು ಹಾಗೂ ಖಂಡನೀಯ ವಿಚಾರವಾಗಿದೆ. ಬಿಜೆಪಿ ಪಕ್ಷವು ಸಿಬಿಐ ಅಧಿಕಾರಿಗಳನ್ನ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಹೆಚ್.ಕೆ.ಪಾಟೀಲ್‌ ಅವರು ಹೇಳಿದ್ದಾರೆ.

"

ಇಂದು ನಗರದ ಧಾರವಾಡದ ಶಿವಗಿರಿ ಬಡಾವಣೆಯಲ್ಲಿರುವ ವಿನಯ್‌ ಕುಲಕರ್ಣಿ ಅವರ ಮನೆ ಭೇಟಿ ನೀಡಿದ ಹೆಚ್.ಕೆ.ಪಾಟೀಲ್‌ ವಿನಯ್‌ ಕುಟುಂಬಸ್ಥರಿಗೆ ಧೈರ್ಯ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಕಾನೂನಿನ ಎದುರಿಗೆ ಎಲ್ಲರೂ ಸಮಾನರು ಆದರೆ ಅನ್ಯಾಯವಾಗಿ ಯಾರನ್ನ ತೊಂದರೆಗೊಳಿಸುವ ಪರಿಪಾಠದ ಇದೆ. ಭಯ ಹುಟ್ಟಿಸುವ ರಾಜಕಾರಣವನ್ನ ಯಾರೂ ಮಾಡಬಾರದು ಎಂದು ಹೇಳಿದ್ದಾರೆ. 

ವಿನಯ್ ಕುಲಕರ್ಣಿಗಿಲ್ಲ ದೀಪಾವಳಿ ಹಬ್ಬದ ಸಂಭ್ರಮ: ಜೈಲೂಟವೇ ಗತಿ..!

ಧಾರವಾಡ ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೀಶ್‌ ಗೌಡ ಹತ್ಯೆ ಪ್ರಕರಣದಲ್ಲಿ ಮಾಹಿ ಸಚಿವ ವಿನಯ್‌ ಕುಲಕರ್ಣಿ ಅವರ ಬಂಧನವಾಗಿದೆ. ಸದ್ಯ ವಿನಯ್ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ.