ಅರ್ಕಾವತಿ ನದಿ ದಾಟುವಾಗ ಅಮಾಯಕ ಜನರು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆಲ್ಲ ಸಂಸದನ ಚೇಲಾಗಳು ನಡೆಸುತ್ತಿರುವ ಮರಳು ದಂಧೆ ಕಾರಣ| ಮರಳು ದಂಧೆಯಿಂದಾಗಿ 15ರಿಂದ 20 ಅಡಿಯಷ್ಟು ಗುಂಡಿಗಳು ಬಿದ್ದಿವೆ. ಅಷ್ಟಕ್ಕೂ ಮರಳು ದಂಧೆ ನಡೆಸಲು ಸಂಸದರಲ್ಲದಿದ್ದರೆ ಉತ್ತೇಜನ ನೀಡಿದವರು ಯಾರೆಂದು ಪ್ರಶ್ನಿಸಿದ ಹೆಚ್ಡಿಕೆ|
ರಾಮನಗರ(ನ.06): ಸಂಸದನ ಚೇಲಾಗಳು ಮರಳು ದಂಧೆ ಮಾಡಿಕೊಂಡು ಅಮಾಯಕ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
Add Asianetnews Kannada as a Preferred Source

ತಾಲೂಕಿನ ಕೂಗನಲ್ನಲ್ಲಿ ಮಾತನಾಡಿದ ಅವರು, ಅರ್ಕಾವತಿ ನದಿ ದಾಟುವಾಗ ಅಮಾಯಕ ಜನರು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆಲ್ಲ ಸಂಸದನ ಚೇಲಾಗಳು ನಡೆಸುತ್ತಿರುವ ಮರಳು ದಂಧೆ ಕಾರಣ ಎಂದು ಕಿಡಿಕಾರಿದ್ದಾರೆ.
ಮುನಿರತ್ನ ಸಿಎಂ ಆದರೆ ಖುಷಿ ಪಡುತ್ತೇನೆ : ಡಿ.ಕೆ.ಸುರೇಶ್
ಕಾಂಗ್ರೆಸ್ ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಅವ್ಯಾಹತವಾಗಿ ಮರಳು ದಂಧೆ ನಡೆದಿದೆ. ಅರ್ಕಾವತಿ ನದಿಯಲ್ಲಿ ಮರಳು ದಂಧೆಯಿಂದಾಗಿ 15ರಿಂದ 20 ಅಡಿಯಷ್ಟು ಗುಂಡಿಗಳು ಬಿದ್ದಿವೆ. ಅಷ್ಟಕ್ಕೂ ಮರಳು ದಂಧೆ ನಡೆಸಲು ಸಂಸದರಲ್ಲದಿದ್ದರೆ ಉತ್ತೇಜನ ನೀಡಿದವರು ಯಾರೆಂದು ಪ್ರಶ್ನಿಸಿದ್ದಾರೆ.
