ರಾಮ​ನ​ಗ​ರ (ನ.05): ರಾಜ​ರಾ​ಜೇ​ಶ್ವರಿ ನಗರ ಕ್ಷೇತ್ರ ಉಪ​ಚು​ನಾ​ವ​ಣೆ​ಯಲ್ಲಿ ಜನರ ತೀರ್ಪು ನಮ್ಮ ಪರ​ವಾ​ಗಿ​ರ​ಲಿದೆ ಎಂದು ಭಾವಿ​ಸಿ​ದ್ದೇವೆ.

 ಹಾಗೊಂದು ವೇಳೆ ಬಿಜೆಪಿ ಅಭ್ಯರ್ಥಿ ಮುನಿ​ರತ್ನ ಗೆದ್ದು ಪವರ್‌, ಹೋಂ ಮಿನಿ​ಸ್ಟರ್‌ ಅಥವಾ ಸಿಎಂ ಆಗಲಿ ನನ​ಗೇನು. 

ನನ್ನ ಕ್ಷೇತ್ರ​ದ​ವರು ಸಿಎಂ ಆದ​ರೆಂದು ಸಂತೋಷ ಪಡು​ತ್ತೇನೆ ಎಂದು ಸಂಸದ ಡಿ.ಕೆ.​ಸು​ರೇಶ್‌ ವ್ಯಂಗ್ಯ​ವಾ​ಡಿ​ದ್ದಾರೆ.

 

‘ನಾನೊಬ್ಬ ಆಶಾ​ವಾದಿ, ಜನರ ತೀರ್ಪು ನಮ್ಮ ಪರ​ವಾಗಿ ಬರ​ಲಿದೆ ಎನ್ನುವ ವಿಶ್ವಾ​ಸ​ವಿದೆ. ಗೆದ್ದ ಮೇಲೆ ಮುನಿ​ರ​ತ್ನಗೆ ಮಂತ್ರಿ​ಗಿರಿ ಸಿಗು​ತ್ತದೆ. ನನ್ನ ಕ್ಷೇತ್ರ​ದ​ವರು ಮಂತ್ರಿ​ಯ​ಲ್ಲದೆ ಸಿಎಂ ಆದರೂ ಸಂತೋಷ’ ಎಂದಿ​ದ್ದಾರೆ.

ಈಗಾಗಲೇ ಉಪ ಚುನಾವಣೆ ಮುಕ್ತಾಯವಾಗಿದ್ದು, ಫಲಿತಾಂಶ ಇದೇ ನವೆಂಬರ್ 10 ರಂದು ಬರಲಿದ್ದು, ಕುತೂಹಲ ಸೃಷ್ಟಿಸಿದೆ.