ಅರಣ್ಯ ಇಲಾಖೆಗೆ ಕಾಡ್ಗಿಚ್ಚು ಆತಂಕ: ಬೆಂಕಿ ಹರಡುವಿಕೆ ತಡೆಗೆ ಹಳೆಯ ಅಸ್ತ್ರವೇ ಗತಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಣಗಿ ನಿಂತಿರುವ ಗಿರಿ ಶ್ರೇಣಿಗಳು
ಭರ್ಜರಿ ಬಿಸಿಲಿನಿಂದ ಅರಣ್ಯ ರಕ್ಷಣೆಗೆ ಬಗ್ಗೆ ಚಿಂತನೆ ಆರಂಭ
ಕಾಡ್ಗಿಚ್ಚಿನಿಂದ ಅರಣ್ಯ ರಕ್ಷಣೆಗೆ ಫೈರ್ ಲೈನ್  ಅಸ್ತ್ರ
 

Forest department worried about forest fire Use of fireline weapon to prevent fire spread sat

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜ.30): ಅರಣ್ಯವನ್ನ ಯಾರೂ ಬೆಳೆಸೋದ್ ಬೇಡ. ಅದೇ ಬೆಳೆಯುತ್ತೆ. ಆದರೆ ರಕ್ಷಣೆ ಮಾಡೋದು ಮಾತ್ರ ಅನಿವಾರ್ಯ. ಅದರಲ್ಲೂ ಈ ಬಾರಿಯ ಭಾರೀ ಮಳೆಯ ಮಧ್ಯೆಯೂ ಬಿಸಿಲಿನ ತಾಪ ವಿಶ್ವದ ಸೂಕ್ಷ್ಮ ಅರಣ್ಯಕ್ಕೂ ತಟ್ಟಿದೆ. ಹಾಗಾಗಿ, ಬೇಸಿಗೆ ಆರಂಭದ ದಿನಗಳಲ್ಲೇ  ಬಿಸಿಲ ಬೇಗೆಯಿಂದ ಅರಣ್ಯ ರಕ್ಷಣೆಗೆ ಇಲಾಖೆ ಮುಂದಾಗಿದೆ. ಬೆಂಕಿಯಿಂದ ಕಾಡನ್ನ ರಕ್ಷಿಸಲು ನೂರಾರು ಕಿಲೋಮೀಟರ್‌ ಉದ್ದದಷ್ಟು ಫೈರ್ ಲೈನ್ ಅನ್ನು ನಿರ್ಮಾಣ ಮಾಡಲಾಗಿದೆ. 

ಪ್ರಪಂಚದ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರೋ ಪಶ್ಚಿಮಘಟ್ಟಗಳ ಸೌಂದರ್ಯದ ಶಕ್ತಿಯೇ ಶೋಲಾ ಕಾಡುಗಳು. ನೀರನ್ನ ಹಿಡಿದಿಟ್ಟುಕೊಂಡು ವರ್ಷಪೂರ್ತಿ ಹರಿಸೋ ಸಾಮರ್ಥ್ಯವಿರೋ ಶೋಲಾ ಕಾಡುಗಳು ವರ್ಷದಿಂದ ವರ್ಷಕ್ಕೆ ತನ್ನ ಸಾಮರ್ಥ್ಯವನ್ನ ಕಳೆದುಕೊಂಡಿವೆ. ತಾಪದ ತೀವ್ರತೆಯಿಂದ ಶೋಲಾ ಕಾಡುಗಳು ಸೇರಿದಂತೆ ವಿವಿಧೆಡೆ ಭಾರಿ ಪ್ರಮಾಣದ ಅರಣ್ಯ ಬೆಂಕಿಗಾಹುತಿ ಆಗುತ್ತಿದೆ. ಹೀಗೆ, ಕಾಡ್ಗಿಚ್ಚಿಗೆ ಅರಣ್ಯ ನಾಶವಾಗುವುದನ್ನು ತಡೆಯಲು ಇಲಾಖೆ ಜನವರಿ ತಿಂಗಳಿಯಿಂದಲೇ ಕೆಲಸವನ್ನು ಆರಂಭಿಸಿದೆ. 

Mangaluru: ಭ್ರಷ್ಟ ಅರಣ್ಯಾಧಿಕಾರಿಗೆ 1.50 ಕೋಟಿ ದಂಡ ಸಹಿತ 5 ವರ್ಷ ಜೈಲು!

ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ವೈವಿದ್ಯಮಯ ಸಂಪತ್ತಿನಿಂದ ಕೂಡಿದೆ. ಚಿಕ್ಕಮಗಳೂರು ವೃತ್ತದಲ್ಲಿ ಸುಮಾರು1.94 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶ ಇದೆ. ಅಪರೂಪದ ಜೀವಸಂಕುಲಗಳು ಇಲ್ಲಿನ ಅರಣ್ಯಗಳಲ್ಲಿ ವಾಸವಾಗಿವೆ. 2004ರಲ್ಲಿ ಮುತ್ತೋಡಿಯಲ್ಲಿ ಉಂಟಾಗಿದ್ದ ಕಾಡ್ಗಿಚ್ಚಿನ ದುರಂತ ದೊಡ್ಡ ಪ್ರಮಾಣದಲ್ಲಿ ಕಾಡನ್ನು ನಾಶಗೊಳಿಸಿತ್ತು. ಹೀಗಾಗಿ, ಅಂದಿನಿಂದ ಎಚ್ಚೆತ್ತುಕೊಂಡಿರೋ ಅರಣ್ಯ ಇಲಾಖೆ ಬೆಂಕಿಯಿಂದ ಕಾಡನ್ನ ರಕ್ಷಿಸಲು ಬೇಸಿಗೆ ಆರಂಭಕ್ಕೂ ಮುನ್ನವೇ ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಹೀಗಾಗಿ, ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ನೂರಾರು ಕಿಲೋಮೀಟರ್ ಉದ್ದಕ್ಕೆ ಫೈರ್ ಲೈನ್ ನಿರ್ಮಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

13 ಫೈರ್ ಡಿಟೆಕ್ಷನ್ ತಂಡಗಳು ಕಾರ್ಯ: ಚಿಕ್ಕಮಗಳೂರು ಅರಣ್ಯ ವೃತ್ತದ ಮುತ್ತೋಡಿ, ಹೆಬ್ಬೆ, ಲಕ್ಕವಳ್ಳಿ, ತಣಿಗೆಬೈಲು ಸೇರಿದಂತೆ ಕಾಫಿನಾಡಿನ ನಾಲ್ಕು ವಲಯಗಳಲ್ಲೂ ಆಂಟಿಪೋಚಿಂಗ್ ಹಾಗೂ 13 ಫೈರ್ ಡಿಟೆಕ್ಷನ್ ತಂಡಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿಕ್ಕಮಗಳೂರು ಡಿಎಫ್ ಓ ಕ್ರಾಂತಿ ಸಿಬ್ಬಂದಿಗೆ ತರಬೇತಿ ಕೊಡಿಸಿ ಎಲ್ಲ ಸಿದ್ದತೆ  ಮಾಡಿಕೊಂಡಿದ್ದೇವೆ. ವಾಹನಗಳ ವ್ಯವಸ್ಥೆಗೂ ಕ್ರಮವಹಿಸಿದ್ದೇವೆ. ಈಗಾಗಲೇ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಬೆಂಕಿ ರೇಖೆ ನಿರ್ಮಾಣ ಮಾಡಲಾಗಿದ್ದು ಅರಣ್ಯ ಸಂರಕ್ಷಣೆಗೆ ಬಗ್ಗೆ ಜನರಲ್ಲಿ ಜಾಗೃತಿ ಅರಿವುಮೂಡಿಸುವ ಕಾರ್ಯವೂ ನಡೆಯುತ್ತಿದೆ ಎಂದರು. 

ಫೈರ್ ಕ್ಯಾಂಪ್ ನಿರ್ಮಿಸಿ 24 ಗಂಟೆಗಳ ಕರ್ತವ್ಯ :  ಸರ್ಕಾರ ಕೂಡ ಜಿಲ್ಲೆಯ ನಾಲ್ಕು ವಲಯಗಳಿಗೂ ತಲಾ 9 ಲಕ್ಷ ಸೇರಿದಂತೆ ಒಟ್ಟು 36 ಲಕ್ಷ ಹಣ ಬಿಡುಗಡೆ ಮಾಡಿದೆ. ಅರಣ್ಯ ರಕ್ಷಣೆಗೆ ಬೇಕಾದ ವಾಹನ ಸೌಲಭ್ಯ ಕೂಡ ಕಲ್ಪಿಸಲಾಗಿದೆ. ವಾಹನಗಳಲ್ಲಿ ಬೆಂಕಿ ಶಮನಕ್ಕೆ ಬೇಕಾದ ಅಗತ್ಯ ವಸ್ತುಗಳನ್ನ ಶೇಖರಿಸಲಾಗಿದ್ದು, ಸಿಬ್ಬಂದಿಗಳು ಅರಣ್ಯದಾದ್ಯಂತ ಗಸ್ತು ತಿರುಗುತ್ತಿದ್ದಾರೆ. ಸಿಬ್ಬಂದಿಗಳಿಗೂ ಕೂಡ ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಂತೆ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ. ಅರಣ್ಯವಾಸಿಗಳಿಗೂ ಕಾಡಿನ ರಕ್ಷಣೆ ಬಗ್ಗೆ ತರಬೇತಿ ನೀಡಿ, ಜಾಗೃತಿ ಮೂಡಿಸೋ ಕೆಲಸ ಮಾಡ್ತಿದೆ. ಬಿತ್ತಿ ಪತ್ರ, ಕರಪತ್ರ, ಬೀದಿ ನಾಟಕಗಳ ಮೂಲಕವೂ ಅರಣ್ಯ ರಕ್ಷಣೆಯ ಬಗ್ಗೆ ಕಾಡಿನಮಕ್ಕಳಿಗೆ ಮಾಹಿತಿ ನೀಡ್ತಿದ್ದಾರೆ. 

ತುಮಕೂರು: ತಿಮ್ಲಾಪುರ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು

ಕಾಡುಪ್ರಾಣಿಗಳ ರಕ್ಷಣೆಗೂ ಫೈರ್‌ಲೈನ್‌ ಸಹಕಾರಿ: ಫೈರ್ ಲೈನ್ ಯೋಜನೆ ಕಾಡುಪ್ರಾಣಿಗಳ ರಕ್ಷಣೆಗೂ ಸಹಕಾರಿಯಾಗಿದೆ. ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಫೈರ್ ಕ್ಯಾಂಪ್ ನಿರ್ಮಿಸಿ 24 ಗಂಟೆಗಳ ಕಾಲವೂ ಸಿಬ್ಬಂದಿಗಳನ್ನ ಅರಣ್ಯ ರಕ್ಷಣೆಗೆ ನೇಮಿಸಲಾಗಿದೆ. ಒಟ್ಟಾರೆ, ಪಶ್ಚಿಮಘಟ್ಟದ ಹಸಿರ ಸಿರಿಯನ್ನ ಸವಿಯಲು ಆಗಮಿಸೋ ಪ್ರವಾಸಿಗರಿಗೆ ಈ ವರ್ಷದ ಕಾಫಿನಾಡು ನಿರಾಸೆಯನ್ನಂತೂ ಮಾಡಲ್ಲ. ಯಾಕೆಂದರೆ ಜೂನ್, ಜುಲೈ, ಆಗಸ್ಟ್ ತಿಂಗಳ ಧಾರಾಕಾರ ಮಳೆ ಕಾಫಿನಾಡನ್ನ ಹಸಿರಾಗೇ ಇಟ್ಟಿದೆ. ಆದರೆ ಇತ್ತೀಚೆಗೆ ಬಿಸಿಲಿನ ಧಗೆ ಕೂಡ ಹಾಗೇ ಇದೆ. ಆದರೆ ಕೆಲ ಭಾಗದಲ್ಲಿ ಮಾತ್ರ ಗಿರಿಶಿಖರ ಒಣಗಿ ನಿಂತಿದೆ. ಹಾಗಾಗಿ, ಒಣಗಿ ನಿಂತಿರೋ ಅರಣ್ಯ ರಕ್ಷಣೆಗೆ ಇಲಾಖೆ ಸನ್ನದ್ಧವಾಗಿದೆ. ಫೈರ್ ಲೈನ್, ಯಂಟಿಪೊಚೀಗ್ ಹಾಗೂ ಫೈರ್ ಕ್ಯಾಂಪ್ ಶಿಬಿರಗಳು ಹೇಗೆ ಕೆಲಸ ಮಾಡುತ್ತವೆ ಎನ್ನುವುದನ್ನು ಕಾದು ನೋಡಬೇಕು. 

Latest Videos
Follow Us:
Download App:
  • android
  • ios