Mangaluru: ಭ್ರಷ್ಟ ಅರಣ್ಯಾಧಿಕಾರಿಗೆ 1.50 ಕೋಟಿ ದಂಡ ಸಹಿತ 5 ವರ್ಷ ಜೈಲು!
ಆದಾಯ ಮೀರಿ ಕೋಟಿ ಕೋಟಿ ಆಸ್ತಿ ಗಳಿಕೆ ಮಾಡಿದ್ದ ಭ್ರಷ್ಟ ಅರಣ್ಯಾಧಿಕಾರಿಯೊಬ್ಬನಿಗೆ ಕೋಟಿ ರೂ. ದಂಡ ಸಹಿತ ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ (ವಿಶೇಷ) ನ್ಯಾಯಾಲಯ ತೀರ್ಪು ನೀಡಿದೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ಜ.28): ಆದಾಯ ಮೀರಿ ಕೋಟಿ ಕೋಟಿ ಆಸ್ತಿ ಗಳಿಕೆ ಮಾಡಿದ್ದ ಭ್ರಷ್ಟ ಅರಣ್ಯಾಧಿಕಾರಿಯೊಬ್ಬನಿಗೆ ಕೋಟಿ ರೂ. ದಂಡ ಸಹಿತ ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ (ವಿಶೇಷ) ನ್ಯಾಯಾಲಯ ತೀರ್ಪು ನೀಡಿದೆ. ಬೆಳ್ತಂಗಡಿಯ ವಲಯ ಅರಣ್ಯಾಧಿಕಾರಿಯಾಗಿದ್ದ ಎಸ್.ರಾಘವ ಪಾಟಾಳಿ ಪ್ರಕರಣದ ಆರೋಪಿ. ಈತನಿಗೆ 5 ವರ್ಷಗಳ ಸಾದಾ ಸಜೆ ಹಾಗೂ 1 ಕೋಟಿ ಐವತ್ತು ಲಕ್ಷ ರೂಪಾಯಿ ದಂಡ ವಿಧಿಸಿದೆ.
ಅಲ್ಲದೇ ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ 01 ವರ್ಷಗಳ ಕಾಲ ಸಾದಾ ಸಜೆ ಶಿಕ್ಷೆ ನೀಡಲಾಗಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿಯನ್ನು ಹೊಂದಿದ ಹಿನ್ನೆಲೆ 2011ರಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. 13(1)(ಇ) ಜೊತೆಗೆ 13(2) ಭ್ರಷ್ಟಾಚಾರ ತಡೆ ಕಾಯ್ದೆ 1988, ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು 295 ಪುಟಗಳ ಸುಧೀರ್ಘ ಅಂತಿಮ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು ದಂಡದ ಜೊತೆಗೆ ಶಿಕ್ಷೆ ವಿಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಶಾಂತಿಭಂಗ ಕೇಸ್: ಮೂವರ ಗಡಿಪಾರಿಗೆ ಎಸಿ ಆದೇಶ
ಪ್ರಕರಣದ ವಿಚಾರಣೆಯನ್ನು 3ನೇ ಹೆಚ್ಚುವರಿ ಜಿಲ್ಲಾ ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ. ಜಕಾತಿ ಇವರು ನಡೆಸಿ ತೀರ್ಪು ಪ್ರಕಟಿಸಿದರು. ಈ ಪ್ರಕರಣದಲ್ಲಿ ಎಂ.ನಾಯಕ್, ಪೊಲೀಸ್ ನಿರೀಕ್ಷಕರು ದೂರುದಾರರಾಗಿದ್ದು, ಪ್ರಕರಣದ ತನಿಖೆಯನ್ನು ವಿಠಲ್ ದಾಸ್ ಪೈ, ಪೊಲೀಸ್ ಉಪಾಧೀಕ್ಷಕರು, ಮಂಗಳೂರು ಲೋಕಾಯುಕ್ತ ವಿಭಾಗ ಇವರು ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದಲ್ಲಿ ರವೀಂದ್ರ ಮುನ್ನಿಪಾಡಿ ಇವರು ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.