ತುಮಕೂರು: ತಿಮ್ಲಾಪುರ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು

ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಹಾಗೂ ಕೊರಟಗೆರೆ ತಾಲೂಕಿಗೆ ಹೊಂದಿಕೊಂಡಿರುವ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬೆಂಕಿ ಇಟ್ಟ ದುಷ್ಕರ್ಮಿಗಳು. 

Miscreants Set Fire to Thimlapur Protected Forest in Tumakuru grg

ತುಮಕೂರು(ಜ.26):  ಅರಣ್ಯಕ್ಕೆ ದುಷ್ಕರ್ಮಿಗಳು ಬೆಂಕಿ ಇಟ್ಟಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಹಾಗೂ ಕೊರಟಗೆರೆ ತಾಲೂಕಿಗೆ ಹೊಂದಿಕೊಂಡಿರುವ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಿನ್ನೆ(ಬುಧವಾರ) ನಡೆದಿದೆ. 

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ತಿಮ್ಲಾಪುರ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ. ಅರಣ್ಯ ಪ್ರದೇಶ ಧಗ ಧಗನೇ ಹೊತ್ತಿ ಉರಿಯುತ್ತಿದೆ. ತಿಮ್ಲಾಪುರ ಸಂರಕ್ಷಿತ ಅರಣ್ಯ ನೂರಾರು ಕರಡಿಗಳಿಗೆ ಆಶ್ರಯ ತಾಣವಾಗಿದೆ. 

‘ಗರ್ಭದಿಂದ ಗೋರಿವರೆಗೆ ಸಮಸ್ಯೆ ಎದುರಿಸುವ ಸ್ತ್ರೀ’

ಬೆಂಕಿಗೆ ಹೆದರಿ ಕರಡಿಗಳು ಗ್ರಾಮಗಳಿಗೆ ನುಗ್ಗುವ ಭಯದಲ್ಲಿದ್ದಾರೆ ಜನತೆ. ಇಷ್ಟಾದರೂ ಬೆಂಕಿ ನಂದಿಸಲು ಅರಣ್ಯ ಇಲಾಖೆ ಮುಂದಾಗಿಲ್ಲ ಅಂತ ಆರೋಪಿಸಲಾಗಿದೆ.ಅರಣ್ಯ ಇಲಾಖೆ ಅಧಿಕಾರಿಗಳ ನೀರ್ಲಕ್ಷ್ಯವೇ ಬೆಂಕಿ ಬೀಳಲು ಕಾರಣ ಅಂತ ಸ್ಥಳೀಯರು ಗಂಭೀರವಾಗಿ ಆರೋಪಿಸಿದ್ದಾರೆ. ಬಡವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Latest Videos
Follow Us:
Download App:
  • android
  • ios