ಅರಣ್ಯ ಇಲಾಖೆ ಉಪಟಳ: ವಿಶೇಷ ಸಭೆಗೆ ರಾಜೇಗೌಡ ಆಗ್ರಹ

  • ಅರಣ್ಯ ಇಲಾಖೆ ಉಪಟಳ: ವಿಶೇಷ ಸಭೆಗೆ ರಾಜೇಗೌಡ ಆಗ್ರಹ
  • 15 ದಿನಗಳೊಳಗೆ ಸಭೆ ನಡೆಸುವ ಭರವಸೆ ಗಡುವು ಮುಗಿದರೂ ನಿರ್ಲಕ್ಷ್ಯ
  • ನಿರ್ಲಕ್ಷ್ಯ ವಹಿಸಿದರೆ ಹೋರಾಟದ ಎಚ್ಚರಿಕೆ
Forest department subterfuge issue Rajegowda demands a special meetingrav

ಚಿಕ್ಕಮಗಳೂರು (ಅ.8) : ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಉಪಟಳ ಹೆಚ್ಚಾಗಿದೆ. ಇದಕ್ಕೆ ಕೊನೆ ಹಾಡಲು ವಿಶೇಷ ಸಭೆ ಕರೆಯದೆ ಹೋದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಅವರು ಎಚ್ಚರಿಕೆ ನೀಡಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಮಸ್ಯೆಯನ್ನು ಕಳೆದ ಕೆಡಿಪಿ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಆಗ ಸಚಿವರು 15 ದಿನಗಳೊಳಗೆ ವಿಶೇಷ ಸಭೆಯನ್ನು ಕರೆಯುವುದಾಗಿ ಭರವಸೆ ನೀಡಿದ್ದರು. ಸಭೆ ಕರೆದು ಸಮಸ್ಯೆ ಬಗೆಹರಿಸದೆ ಹೋದರೆ ಪ್ರತಿಭಟನೆ ಅನಿವಾರ್ಯ ಎಂದರು.

 

Chikkamagaluru: ರಾಷ್ಟ್ರಪಿತ ಗಾಂಧೀಜಿ ನೆನೆಪಿಗಾಗಿ ಕಟ್ಟಿರೋ ಗುಡಿ, ನಿತ್ಯವೂ ಮಹಾತ್ಮನಿಗೆ ಪೂಜೆ

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯ ಸಂದರ್ಭದಲ್ಲಿ ಅಲ್ಲಿನ ನಿವಾಸಿಗರಿಗೆ ಬೇರೆಡೆ ಸ್ಥಳಾಂತರಕ್ಕೆ ಬೇಕಾದ ಎಲ್ಲಾ ಸವಲತ್ತು ನೀಡುವುದಾಗಿ ಅರಣ್ಯ ಇಲಾಖೆ ಘೋಷಣೆ ಮಾಡಿತ್ತು. ಆದರೆ, ಅದರಂತೆ ನಡೆದುಕೊಂಡಿಲ್ಲ, ಅಲ್ಲಿನ ನಿವಾಸಿಗರಿಗೆ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಇಲಾಖೆಯವರು ಕಿರುಕುಳ ನೀಡುತ್ತಿದ್ದಾರೆ. ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಲು ಸಂಕ ನಿರ್ಮಾಣಕ್ಕೆ ಹಿಂದಿನ ಸಮ್ಮಿಶ್ರ ಸರ್ಕಾರ .13 ಕೋಟಿ ಮಂಜೂರು ಮಾಡಿತ್ತು. ಆನಂತರದಲ್ಲಿ ಬಂದ ಬಿಜೆಪಿ ಸರ್ಕಾರ ಕಾಲುಸಂಕ ನಿರ್ಮಾಣಕ್ಕೆ ಹಣವನ್ನು ಕಡಿತಗೊಳಿಸಿ, .5 ಕೋಟಿಗೆ ಸೀಮಿತಗೊಳಿಸಿತು. ಮುಂದಿನ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಲಾಗುವುದು ಎಂದರು.

ಅರಣ್ಯ ಇಲಾಖೆಯವರು ಯಾವುದೇ ನಿಯಮ ಜಾರಿಗೆ ತರುವಾಗ ಸ್ಥಳೀಯ ಮಾಹಿತಿಯನ್ನು ಪಡೆಯಬೇಕು. ಕಚೇರಿಯಲ್ಲಿ ಕುಳಿತು ಪ್ಲಾನ್‌ ಮಾಡುವುದಲ್ಲ, ಶೃಂಗೇರಿ ಕ್ಷೇತ್ರದ ಹಲವೆಡೆ ಸೇತುವೆಗಳ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಿ, ಕಾಮಗಾರಿಯೂ ಕೂಡ ಆರಂಭಿಸಲಾಗಿತ್ತು. ಆದರೆ, ಅರಣ್ಯ ಇಲಾಖೆಯವರು ಅರ್ಧಕ್ಕೆ ತಡೆಹಿಡಿದರು. ಈ ಇಲಾಖೆಯ ಕಿರುಕುಳದಿಂದ ಹಲವು ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗಿದೆ ಎಂದರು.

ಜಿಲ್ಲೆಯ ಹಲವು ಪ್ರದೇಶಗಳಿಗೆ ಅನ್ವಯ ಆಗುವಂತೆ ಅರಣ್ಯ ಇಲಾಖೆ 4(1) ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಜನವಸತಿ ಪ್ರದೇಶಗಳು ಸೇರ್ಪಡೆಗೊಂಡಿವೆ. ಇದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. 4(1) ಅಧಿಸೂಚಿತ ಪ್ರದೇಶಗಳಿಗೆ ಅನ್ವಯ ಆಗುವಂತೆ ಅಧಿಸೂಚನೆ- 17 ಹೊರಡಿಸಿದರೆ ರಾಜ್ಯ ಸರ್ಕಾರದ ಹಿಡಿತ ಕೈ ತಪ್ಪಲಿದೆ. ಆಗ ಸಮಸ್ಯೆ ಬಗೆಹರಿಸಿಕೊಳ್ಳಲು ಕೇಂದ್ರ ಸರ್ಕಾರದ ಬಳಿ ಹೋಗಬೇಕಾಗುತ್ತದೆ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ವಿಶೇಷ ಸಭೆಯನ್ನು ಕರೆದು ಸಮಸ್ಯೆಯನ್ನು ಬಗೆಹರಿಸಬೇಕು. ಇದರ ಜತೆಗೆ ನಮ್ಮ ಜಿಲ್ಲಿಯಲ್ಲಿ 4(1) ಅಧಿಸೂಚನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ನಯಾ ಪೈಸೆ ಬಂದಿಲ್ಲ:

ಶೃಂಗೇರಿ ಕ್ಷೇತ್ರದಲ್ಲಿ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿತ್ತು. ಈ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಆ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್‌.ಜೀವರಾಜ್‌ ಕೂಡ ಅವರೊಂದಿಗೆ ಇದ್ದರು. ಮಳೆ ಹಾನಿಗೆ ಸಂಬಂಧಿಸಿದಂತೆ ಕ್ಷೇತ್ರಕ್ಕೆ ಒಂದು ನಯಾ ಪೈಸಾ ಬಂದಿಲ್ಲ ಎಂದು ರಾಜೇಗೌಡ ಹೇಳಿದರು.

ಮೆಣಸೆ ಶಾಲೆಗೆ ಸ್ವಾಭಿಮಾನಿ ಸಾರ್ವಜನಿಕ ಶಾಲೆ ಪ್ರಶಸ್ತಿ ಗರಿ

ಶಾಸಕರ ಆರೋಪವೇನು?

  • ಜಾತಿ, ಮತ, ಧರ್ಮದ ಹೆಸರಿನಲ್ಲಿ ಬಿಜೆಪಿ ಒಡೆದು ಆಳುತ್ತಿದೆ. ಸುಳ್ಳೆ ಆ ಪಕ್ಷದ ಸಾಧನೆ
  •  ಯುವಕರಿಗೆ ಉದ್ಯೋಗ ಕೊಡುವ ಭರವಸೆ ನೀಡಿದ್ದರು, ಆದರೆ, ಉದ್ಯೋಗ ಸೃಷ್ಟಿಮಾಡಿಲ್ಲ, ಇದಕ್ಕಾಗಿ ಯಾವುದೇ ಯೋಜನೆ ರೂಪಿಸಿಲ್ಲ
  • ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆಯಾಗಿದೆ. ಬಡವರಿಗೆ ಭೂಮಿ ಕೊಡಲು ಕಾನೂನು ಘೋಷಣೆಯಾಗಿಲ್ಲ
  •  ಬಡವರಿಗೆ ಒಂದು ಲೀಟರ್‌ ಸೀಮೆಎಣ್ಣೆ ಕೊಟ್ಟಿಲ್ಲ, ಸೀಮೆಎಣ್ಣೆ ಸರಬರಾಜು ಮಾಡಿದರಿಗೆ ಹಣ ಕೊಟ್ಟಿಲ್ಲ
Latest Videos
Follow Us:
Download App:
  • android
  • ios