Asianet Suvarna News Asianet Suvarna News

Chikkamagaluru: ರಾಷ್ಟ್ರಪಿತ ಗಾಂಧೀಜಿ ನೆನೆಪಿಗಾಗಿ ಕಟ್ಟಿರೋ ಗುಡಿ, ನಿತ್ಯವೂ ಮಹಾತ್ಮನಿಗೆ ಪೂಜೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ನೆನಪಿಗಾಗಿ ದೇವಾಲಯ ಕಟ್ಟಲಾಗಿದೆ.  ಗಾಂಧಿ ಜಯಂತಿ ಸೇರಿದಂತೆ ರಾಷ್ಟ್ರೀಯ ಹಬ್ಬದಂದು ಈ ಐತಿಹಾಸಿಕ ಗುಡಿಯ ಪುಟ್ಟ ಗಾಂಧಿಜೀಯನ್ನು ದೇವರಂತೆ ಪೂಜಿಸುತ್ತಾರೆ. 

Mahatma Gandhi's temple in Chikkamagaluru gow
Author
First Published Oct 1, 2022, 7:22 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಅ.1): ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ನೆನಪಿಗಾಗಿ ದೇವಾಲಯ ಕಟ್ಟಲಾಗಿದೆ. ಕತ್ತಲೆಯ ದಾಸ್ಯದಿಂದ ಭಾರತೀಯರಿಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನಿಗಾಗಿ ಗುಡಿಯೊಂದನ್ನೇ ನಿರ್ಮಿಸಿ, ಗಾಂಧಿ ಜಯಂತಿ ಸೇರಿದಂತೆ ರಾಷ್ಟ್ರೀಯ ಹಬ್ಬದಂದು ಈ ಐತಿಹಾಸಿಕ ಗುಡಿಯ ಪುಟ್ಟ ಗಾಂಧಿಜೀಯನ್ನು ದೇವರಂತೆ ಪೂಜಿಸುತ್ತಾರೆ. ದೇಶದಲ್ಲೇ ಗಾಂಧೀಜಿ ದೇವಾಲಯಗಳಿರೋದೆ ತುಂಬಾ ವಿರಳ. ಅಂತಾದ್ರಲ್ಲಿ ಆ ಗುಡಿ ಇರುವುದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ನಿಡಗಟ್ಟ ಗ್ರಾಮದಲ್ಲಿ.ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿ ಚಿಕ್ಕಮಗಳೂರು ಹಾಗೂ ನಿಡಗಟ್ಟ ಗ್ರಾಮಕ್ಕೆ ಭೇಟಿ ನೀಡಿದ್ರು. ಗಾಂಧೀಜಿ ಈ ಗ್ರಾಮದಲ್ಲಿ ಕೂತು ಭಾಷಣ ಮಾಡಿದ ಜಾಗದಲ್ಲಿ ಗಾಂಧಿ ಗುಡಿ ನಿರ್ಮಾಣ ಮಾಡಲಾಗಿದೆ.  ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೊಟ್ಟಿದ್ದ ಹೋರಾಟದ ಕರೆಗೆ ನಿಡಗಟ್ಟ ಗ್ರಾಮದ 20ಕ್ಕೂ ಹೆಚ್ಚು ಯುವಕರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ರು. ಹೋರಾಟದ ಹಾದಿಯಲ್ಲಿ ಜೈಲುವಾಸವನ್ನು ಕಂಡಿದ್ರು. ಗಾಂಧಿಯ ಅವಿರತ ಪ್ರಯತ್ನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಈ ಗ್ರಾಮದ ಪ್ರತಿ ಮನೆಯಲ್ಲೂ ಹಬ್ಬ. ಆದ್ರೆ, 1948 ಜನವರಿ 30 ರಂದು ಗೂಡ್ಸೆಯ ಗುಂಡಿಗೆ ಗಾಂಧಿ ಬಲಿಯಾದಾಗ ಈ ಗ್ರಾಮದ ಹೋರಾಟಗಾರರು ಕಂಗಾಲಾಗಿದ್ರು. ಗಾಂಧಿ ನಿಧನರಾದ 21ನೇ ದಿನಕ್ಕೆ ಆ ದಿವ್ಯಚೇತನದ ಸ್ಮರಣಾರ್ಥವೇ ಈ ಗುಡಿ ನಿರ್ಮಾಣವಾಯಿತು. 

Chitradurga; ತುರುವನೂರು ಗ್ರಾಮದಲ್ಲಿದೆ ಮಹಾತ್ಮ ಗಾಂಧೀಜಿ ದೇವಾಲಯ

ಮೂರ್ತಿಗೆ ನಿತ್ಯ ಪೂಜೆ: ದೇಶದ ಎಲ್ಲಾ ರಾಷ್ಟ್ರಿಯ ಹಬ್ಬಗಳಂದು ಈ  ಗಾಂಧೀಜಿಯ ಮೂರ್ತಿಯನ್ನು ಗ್ರಾಮಸ್ಥರು, ಶಾಲಾ ಮಕ್ಕಳು ದೇವರಂತೆ ಪೂಜಿಸ್ತಾರೆ. ತ್ಯಾಗ ಬಲಿದಾನದ ಸಂಕೇತವಾಗಿರುವ ಈ ಐತಿಹಾಸಿಕ ಗಾಂಧಿ ಗುಡಿ ಸಣ್ಣದಾದ ಕಟ್ಟಡದಿಂದ ಕೂಡಿದೆ. ಮೌಲ್ಯಗಳು ಕಳೆದು ಹೋಗುತ್ತಿರುವ ಈ ಕಾಲದಲ್ಲಿ ಹೊಸ ತಲೆಮಾರಿನ ಯುವಕರಿಗೆ ಗಾಂಧಿಯ ವಿಚಾರ ಧಾರೆಗಳನ್ನು ಗಾಂಧಿ ಗುಡಿ ಮೂಲಕ ತಿಳಿಸುತ್ತಿರೋದು ಹೆಮ್ಮೆಯ ವಿಷಯವಾಗಿದೆ.

ಇಲ್ಲಿದೆ ಗಾಂಧೀಜಿ ದೇವಾಲಯ, ಮಹಾತ್ಮನ ಮಾತಿಗೆ ಕೋಣ ಬಲಿ ಬಂದ್

ಮಹಾತ್ಮಾ ಗಾಂಧೀಜಿಯ ನೆನಪಿನಲ್ಲಿ ದೇಶದಲ್ಲಿ  ನಿರ್ಮಿಸಲಾಗಿರುವ ದೇವಾಲಯಗಳು ಬೆರಳೆಣಿಕೆಯಷ್ಟು. ಕರ್ನಾಟಕದಲ್ಲಿ ಮಂಗಳೂರು, ಮಂಡ್ಯ, ಕೊಪ್ಪಳ,  ಬಿಟ್ರೆ ಚಿಕ್ಕಮಗಳೂರಿನಲ್ಲಿ ಮಾತ್ರ ಗಾಂಧಿಗುಡಿ ಇರೋದು,  ಹಾಗಾಗಿ ಇದು ಜಿಲ್ಲೆಯ ಜನರ ಪಾಲಿಗೆ ಹೆಮ್ಮೆಯ ವಿಚಾರ.

ಮಹಾತ್ಮ ಗಾಂಧಿ ದೇವಸ್ಥಾನ ಅನಾಥ!

ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಅಂಕೋಲಾ ಸ್ವಾತಂತ್ರ್ಯ ಹೋರಾಟಗಾರರ ಬೀಡು. ಕರಬಂದಿ ಚಳವಳಿಯ ಪ್ರಮುಖ ದಾಸಗೋಡ ರಾಮ ನಾಯಕ ಗಾಂಧೀಜಿ ಅವರಿಂದ ಪ್ರಭಾವಿತರಾಗಿದ್ದರು. ಗಾಂಧೀಜಿ ಅವರು ಬಂದಾಗ ಮಾತನ್ನೂ ಆಡಿದ್ದರು. ತಮ್ಮದೆ ಜಾಗದಲ್ಲಿ 1959 ರಲ್ಲಿ ಗಾಂಧೀಜಿ ದೇವಾಲಯ ನಿರ್ಮಿಸಿದರು. ಮೂರ್ತಿಯನ್ನೂ ತಂದು ಸ್ಥಾಪಿಸಿದರು. ಇಲ್ಲಿ ಪ್ರತಿ ವರ್ಷ ಆ.15  ಹಾಗೂ ಜ.26 ರಂದು ಧ್ವಜಾರೋಹಣ ನೆರವೇರುತ್ತದೆ. ಗಾಂಧಿ ಜಯಂತಿಯಂದು ಗಾಂಧಿ ಪ್ರತಿಮೆಗೆ ಹಾರಹಾಕಿ ಸಿಹಿ ಹಂಚಲಾಗುತ್ತದೆ.

Follow Us:
Download App:
  • android
  • ios