ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಡಿ ಅಕ್ರಮವಾಗಿ ಹಣ ಪಡೆಯುತ್ತಿರುವವರಿಗೆ ಕಡಿವಾಣ ಹಾಕಲು ಮುಂದಾಗಿದೆ. ಇದಕ್ಕಾಗಿ ಮರುಪರಿಶೀಲನೆ ಕಾರ್ಯ ನಡೆಯುತ್ತಿದ್ದು, ಫಲಾನುಭವಿಗಳು ಕಡ್ಡಾಯವಾಗಿ ಕೆಲವು ದಾಖಲೆಗಳನ್ನು ಒದಗಿಸಬೇಕಾಗಿದೆ. ಸರಿಯಾದ ದಾಖಲೆಗಳಿಲ್ಲದಿದ್ದರೆ ಯೋಜನೆಯಿಂದ ಹೊರಗುಳಿಯುವ ಸಾಧ್ಯತೆಯಿದೆ.

ಬೆಂಗಳೂರು: ಒಂದಷ್ಟು ನಿಯಮಗಳನ್ನು ಇಟ್ಟು ಮೂರು ವರ್ಷಗಳ ಹಿಂದೆ ಸಿದ್ದರಾಮಯ್ಯನವರ ಸರ್ಕಾರ ಆರಂಭಿಸಿದ್ದ ಗೃಹಲಕ್ಷ್ಮಿ (Gruhalakshmi Scheme) ಯೋಜನೆ ಫಲಾನುಭವಿಗಳ ಪೈಕಿ, ಇದೀಗ ಒಂದಿಷ್ಟು ಮಂದಿಗೆ ಬಿಗ್​ ಶಾಕ್​ ಕಾದಿದೆ. ಅಕ್ರಮವಾಗಿ ಇಷ್ಟು ವರ್ಷ ಹಣವನ್ನು ಪಡೆದುಕೊಂಡಿದ್ದವರು, ಒಂದೇ ಮನೆಯಲ್ಲಿ ಇಬ್ಬರು- ಮೂವರು ಸೇರಿ ಹಲವಾರು ಮಂದಿ ಸಹಸ್ರಾರು ರೂಪಾಯಿಗಳನ್ನು ಪಡೆದು ಖುಷಿಪಟ್ಟಿದ್ದವರಿಗೆಲ್ಲಾ ಇದೀಗ ಡಿ.ಕೆ.ಶಿವಕುಮಾರ್​ ನೇತೃತ್ವದ ಸರ್ಕಾರ ಕಡಿವಾಣ ಹಾಕಿದೆ. ಗ್ಯಾರೆಂಟಿ ಯೋಜನೆಗಳಲ್ಲಿ ಕೋಟ್ಯಂತರ ರೂಪಾಯಿಗಳ ಅಕ್ರಮ ನಡೆಯುತ್ತಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ, ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.

ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆ

ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆ ಕಾರ್ಯ ನಡೆಯುತ್ತಿದೆ. ಈ ಕುರಿತು ಅಂಗನವಾಡಿ ಶಿಕ್ಷಕಿ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಮನೆಗೆ ಗೃಹಲಕ್ಷ್ಮಿ ಮರುಪರಿಶೀಲನೆಗೆ ಬಂದಾಗ ಕಡ್ಡಾಯವಾಗಿ ಏನೇನು ಮಾಹಿತಿ ನೀಡಬೇಕು ಎನ್ನುವ ಬಗ್ಗೆ ಶಿಕ್ಷಕಿ ವಿವರಿಸಿದ್ದು, ಇವುಗಳಲ್ಲಿ ಒಂದು ಇಲ್ಲದಿದ್ದರೂ ಗೃಹಲಕ್ಷ್ಮಿ ಯೋಜನೆಯಿಂದ ನೀವು ಔಟ್​ ಆಗುವ ಸಾಧ್ಯತೆ ಇದೆ.renukakanadathi ಎನ್ನುವ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ಇದನ್ನು ಶೇರ್ ಮಾಡಲಾಗಿದೆ.

ಗೃಹಲಕ್ಷ್ಮಿ ಮರುಪರಿಶೀಲನೆಗೆ ಬಂದಾಗ ಬೇಕಾಗುವ ದಾಖಲಾತಿಗಳು ಹೀಗಿವೆ:

* ನೀವು ಗೃಹಲಕ್ಷ್ಮಿ ಯೋಜನೆಗೆ ನೀಡುವ ಮೊಬೈಲ್​ ನಂಬರ್​ ಅರ್ಥಾತ್​ ಸಿಮ್​ ಕಾರ್ಡ್​ ಫಲಾನುಭವಿ ಹೆಸರಲ್ಲೇ ಇರಬೇಕು. ಬೇರೆಯವರ ಹೆಸರಿನಲ್ಲಿ ಆ ಸಿಮ್​ ಕಾರ್ಡ್​ ಇದ್ದರೆ, ನೀವು ಅನರ್ಹರಾಗುವಿರಿ

* ಒಂದು ವೇಳೆ ನೀವು ನಿಜವಾಗಿಯೂ ಫಲಾನುಭವಿಯಾಗಿದ್ದು, ಸಿಮ್​ ಕಾರ್ಡ್​ ನಿಮ್ಮ ಹೆಸರಿನಲ್ಲಿ ಇಲ್ಲದೇ ಹೋದರೆ,, ಕೂಡಲೇ ನಿಮ್ಮ ಹೆಸರಿನಲ್ಲಿ ಸಿಮ್​ ಕಾರ್ಡ್​ ಖರೀದಿ ಮಾಡಿ, ಅದನ್ನು ನಿಮ್ಮ ಆಧಾರ್​ ಕಾರ್ಡ್​​ ಮತ್ತು ಬ್ಯಾಂಕ್​ ಖಾತೆಗೆ ಕೂಡಲೇ ಲಿಂಕ್​ ಮಾಡಿಕೊಳ್ಳಬೇಕು. ಜೊತೆಗೆ E-KYC ಮಾಡಿಸಲೇಬೇಕು.

* ಎಪಿಎಲ್​-ಬಿಪಿಎಲ್​ ಕಾರ್ಡ್​ ಕಡ್ಡಾಯ,

* ಮತದಾರರು ಗುರುತಿನ ಚೀಟಿ ಕಡ್ಡಾಯ

* ನಿಮ್ಮ ಆಧಾರ ಕಾರ್ಡ್​ಗೆ ಲಿಂಕ್​ ಆಗಿರುವ ಮೊಬೈಲ್​ ನಂಬರೇ ಕೊಡಬೇಕು. ಬೇರೆಯ ನಂಬರ್​ ಇದ್ದರೆ ಯೋಜನೆ ಸಿಗುವುದಿಲ್ಲ.

* ಫಲಾನುಭವಿ ಹೆಸರಿನಲ್ಲಿ ಸಿಂಗಲ್​ ಬ್ಯಾಂಕ್​ ಅಕೌಂಟ್​ ಇರಬೇಕು. ಇದರ ಅರ್ಥ ಪತಿಯೋ ಇನ್ನಾರದ್ದೋ ಹೆಸರಿನಲ್ಲಿ ಜಾಯಿಂಟ್​ ಅಕೌಂಟ್​ ಇರಬಾರದು.

* ಪೋಸ್ಟ್​ ಆಫೀಸ್​ನಲ್ಲಿ ಅಕೌಂಟ್​​ ಇದ್ದರೂ ಪರವಾಗಿಲ್ಲ. ಆದರೆ ಇದು ಲೋನ್​ ಅಕೌಂಟ್​ ಆಗಿರಬಾರದು

* ಬ್ಯಾಂಕ್​ ಯಾವುದೇ ಆಗಿರಬಹುದು. ಆದರೆ ಕರ್ನಾಟಕದಲ್ಲಿ ಅದರ ಶಾಖೆ ಇರಲೇಬೇಕು

*ಪತಿಯ ಆಧಾರ್​ ಕಾರ್ಡ್​ ಮಾಹಿತಿ ನೀಡುವುದು ಕಡ್ಡಾಯ

* ಪತಿಯ ಉದ್ಯೋಗದ ಮಾಹಿತಿ ನೀಡಲೇಬೇಕು.

* ಎಸ್​ಸಿ ಎಸ್​ಟಿ ಆಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ಕಡ್ಡಾಯ