ಬೆಂಗಳೂರಿನ ಟೆಕ್ಕಿ ಬಿಹಾರದ ಮುಖ್ಯಮಂತ್ರಿಗೆ ವಿಶೇಷ ಮನವಿ ಮಾಡಿದ್ದಾರೆ. ಈ ಮನವಿ ಇದೀಗ ಭಾರಿ ಚರ್ಚೆಯಾಗುತ್ತಿದೆ. ಹಲವರು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಬೆಂಗಳೂರು ವಿಚಾರ ಕೂಡ ಚರ್ಚೆಯಾಗುತ್ತಿದೆ.
ಬೆಂಗಳೂರು (ಸೆ.25) ಬೆಂಗಳೂರು ದೇಶದ ಐಟಿ ಹಬ್ ಆಗಿ ಗಮನಸೆಳೆದಿದೆ. ದೇಶದಲ್ಲಿ ಅತೀ ಹೆಚ್ಚು ವೇತನ ನೀಡುವ ನಗರಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಇಲ್ಲಿ ಉದ್ಯೋಗವಕಾಶಗಳು ಹೆಚ್ಚು. ಹೀಗಾಗಿ ಹಲವು ರಾಜ್ಯಗಳ ಜನರು ಬೆಂಗಳೂರಿಗೆ ಬಂದು ಕೆಲಸ ಮಾಡುತ್ತಾರೆ, ಜೀವನ ಕಟ್ಟಿಕೊಳ್ಳುತ್ತಾರೆ. ಇದೀಗ ಬೆಂಗಳೂರಿನ ಟೆಕ್ಕಿ, ಬಿಹಾರದ ಮುಖ್ಯಮಂತ್ರಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಈ ಮನವಿ ಇದೀಗ ಚರ್ಚೆಯಾಗುತ್ತಿದೆ. ತನ್ನ ಆದಾಯದ ಶೇಕಡಾ 30ರಷ್ಟುನ್ನು ಬೆಂಗಳೂರಿಗೆ ಖರ್ಚು ಮಾಡುತ್ತಿದ್ದೇನೆ ಎಂದು ಟೆಕ್ಕಿ ಹೇಳಿದ್ದಾರೆ.
ಬೆಂಗಳೂರು ಟೆಕ್ಕಿಯ ಮನವಿಯೇನು?
ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಉತ್ತಮ ವೇತನ ಪಡೆಯುತ್ತಿದ್ದಾನೆ. ಮೂಲತಃ ಬಿಹಾರದ ಈ ಟೆಕ್ಕಿ ಬೆಂಗಳೂರಿಗೆ ಬಂದು ಕೆಲಸ ಗಿಟ್ಟಿಸಿಕೊಂಡಿದ್ದಾನೆ. ಕೆಲಸದ ಕಾರಣದಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾನೆ. ತನಗೆ ಬರವು ವೇತನದಲ್ಲಿ ತೆರಿಗೆ, ಬಳಿಕ ತನ್ನ ಖರ್ಚು ವೆಚ್ಚ ಸೇರಿಸಿದರೆ ಶೇಕಡಾ 30ರಷ್ಟು ಖರ್ಚು ಬೆಂಗಳೂರಿಗೆ ಹೋಗುತ್ತಿದೆ. ತನ್ನ ಆದಾಯದ ಶೇಕಡಾ 30ರಷ್ಟು ಹಣವನ್ನು ಬೆಂಗಳೂರಿಗೆ ಖರ್ಚು ಮಾಡುತ್ತಿದ್ದೇನೆ. ನನ್ನ ಬಿಹಾರದಲ್ಲಿ ನನಗೆ ಕೆಲಸವಿದ್ದರೆ ನನ್ನ ಖರ್ಚು ಬಿಹಾರಕ್ಕೆ ಹೋಗುತ್ತಿತ್ತು, ಬಿಹಾರ ಮತ್ತಷ್ಟು ಅಭಿದ್ಧಿಯಾಗುತ್ತಿತ್ತು ಎಂದು ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಬಳಿ ಮನವಿ ಮಾಡಿಕೊಂಡಿದ್ದಾರೆ.
ಬಿಹಾರದಲ್ಲಿ ಉದ್ಯೋಗವಕಾಶಗಳು ಸಿಗಬೇಕು, ಐಟಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕು. ಬಿಹಾರದಲ್ಲಿನ ಹಲವು ಕೊರತೆಗಳಿಂದ ಯುವ ಸಮೂಹ ಬಿಹಾರದಿಂದ ವಲಸೆ ಹೋಗಬೇಕಾಗಿದೆ. ಈ ಪೈಕಿ ಐಟಿ ಕ್ಷೇತ್ರಕ್ಕಾದರೆ ಬೆಂಗಳೂರೇ ಮೊದಲ ಆಯ್ಕೆ. ಬಿಹಾರದ ಹಲವರು ಬೆಂಗಳೂರಿನಲ್ಲಿ ನೆಲೆ ನಿಂತಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಎಲ್ಲಾ ಆದಾಯ ಖರ್ಚು ಮಾಡುತ್ತಿದ್ದಾರೆ. ತನ್ನ ರಾಜ್ಯಕ್ಕೆ ಏನೂ ನೀಡುತ್ತಿಲ್ಲ ಎಂದು ಟೆಕ್ಕಿ ತಮ್ಮ ಮನವಿಯಲ್ಲಿ ಹೇಳಿದ್ದಾರೆ.
ಅನಿವಾರ್ಯ ಕಾರಣದಿಂದ ಬೆಂಗಳೂರು
ಹಲವು ರಾಜ್ಯಗಳ ಜನರು ಉದ್ಯೋಗಕ್ಕಾಗಿ, ಉತ್ತಮ ವೇತನಕ್ಕಾಗಿ ಬೆಂಗಳೂರಿಗೆ ಆಗಮಿಸುತ್ತಾರೆ. ತಮ್ಮ ತವರು, ಪೋಷಕರು,ಕುಟುಂಬ, ಆಪ್ತರಿಂದ ದೂರವಾದರೂ ಉತ್ತಮ ಜೀವನಕ್ಕಾಗಿ ಅನಿವಾರ್ಯವಾಗಿದೆ. ಬೆಂಗಳೂರಿನ ಖರ್ಚು ವೆಚ್ಚ ದುಬಾರಿ, ಇಲ್ಲಿನ ಟ್ರಾಫಿಕ್ ಸೇರಿದಂತೆ ಹಲವು ಅಡೆ ತಡೆಗಳ ನಡುವೆ ಬೆಂಗಳೂರಿನಲ್ಲೇ ಉಳಿದುಕೊಳ್ಳುವಂತಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಹಲವರಿಗೆ ಆಶ್ರಯ ನೀಡಿದ ತಾಣ. ಉದ್ಯೋಗ, ಬದುಕು, ವೃತ್ತಿ ಕಟ್ಟಿಕೊಳ್ಳಲು ಸದಾ ನೆರವಾಗುವ ಊರು. ಆದರೆ ಬೆಂಗಳೂರಿಗೆ ಪ್ರತಿ ದಿನ ಉದ್ಯೋಗ ಅರಸಿ ಬರುವವರ ಸಂಖ್ಯೆ ಹೆಚ್ಚು. ಜನಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಇಲ್ಲಿನ ಮೂಲಭೂತ ಸೌಕರ್ಯಗಳು ಸಾಲದಾಗುತ್ತಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.


