ಮೈಸೂರು(ಮೇ 16): ಕೊರೋನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಬಡವರು, ಕಾರ್ಮಿಕರಿಗೆ ವೈಯಕ್ತಿಕವಾಗಿ ನೆರವು ನೀಡಲಾಗುತ್ತಿದೆ. ಮೇ 17 ರಿಂದ ಚಾಮರಾಜ ಕ್ಷೇತ್ರದ ಪ್ರತಿ ಕುಟುಂಬಕ್ಕೂ ಆಹಾರದ ಕಿಟ್‌ ವಿತರಿಸುವ ಕಾರ್ಯ ಆರಂಭಿಸಲಾಗುವುದು ಎಂದು ಮಾಜಿ ಶಾಸಕ ವಾಸು ತಿಳಿಸಿದರು.

ಮೇ 17ರ ಬೆಳಗ್ಗೆ 11.30ಕ್ಕೆ ಪಡುವಾರಹಳ್ಳಿ ಮಹದೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಸುತ್ತೂರುಶ್ರೀ, ಆದಿಚುಂಚನಗಿರಿ ಶ್ರೀಗಳ ಸಮ್ಮುಖದಲ್ಲಿ ಆಹಾರ ಕಿಟ್‌ ವಿತರಣೆಗೆ ಚಾಲನೆ ನೀಡಲಾಗುವುದು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪಕ್ಷಾತೀತ ಕಾರ್ಯಕ್ರಮ:

ಈ ಕಾರ್ಯಕ್ರಮವು ಪಕ್ಷಾತೀತವಾಗಿ ನಡೆಯಲಿದ್ದು, ಕ್ಷೇತ್ರದಲ್ಲಿ ಯಾವುದೇ ಪಕ್ಷ, ಸಂಘಟನೆ, ಜಾತಿ- ಧರ್ಮ ನೋಡದೆ ಎಲ್ಲರನ್ನ ಒಂದೇ ರೀತಿ ಸ್ಥಳೀಯ ಮುಖಂಡರ ಮೂಲಕ ಹಂಚಿಕೆಯಾಗಲಿದೆ. ಈಗಾಗಲೇ ಸ್ಥಳೀಯ ಮುಖಂಡರ ಮೂಲಕ ಪಟ್ಟಿಮಾಡುವ ಕೆಲಸ ನಡೆದಿದೆ. ಮೇ 17ರ ನಂತರ ಆಯಾಯ ಭಾಗದ ಮುಖಂಡರ ನೆರವಿನಿಂದ ಮನೆ ಮನೆಗೆ ತಲುಪಿಸಲಾಗುವುದು ಎಂದರು.

ಕೊರೋನಾದಿಂದ ಕಂಗೆಟ್ಟ ಜನತೆ: ನನ್ನ ಬರ್ತ್‌ಡೇಗೆ ಮನೆ ಬಳಿ ಬರಬೇಡಿ ಎಂದ ದೇವೇಗೌಡ

ಲಾಕ್‌ಡೌನ್‌ ಶುರುವಾದ ಮೇಲೆ ತಮ್ಮ ಕುಟುಂಬದಿಂದ ವೈಯಕ್ತಿಕವಾಗಿ ಮಾಸ್ಕ್‌, ಸ್ಯಾನಿಟೈಸರ್‌ ಕೊಡಲಾಗಿದೆ. ಒಂದು ತಿಂಗಳಿಂದ ಸಮಸ್ಯೆ ಹೇಳಿಕೊಂಡು ಬಂದವರಿಗೆ ಬೇಕಾದ ಆಹಾರ ಪದಾರ್ಥ ಕೊಡಲಾಗಿದೆ. ಚಾಮರಾಜ ಕ್ಷೇತ್ರ ಮಾತ್ರವಲ್ಲದೇ ಇತರ ಕ್ಷೇತ್ರದ ಬಡವರು, ಹಳ್ಳಿಗಳ ಜನರಿಗೂ ಕೊಡಲಾಗಿದೆ. ಯಾರೇ ಬಡವರು ಕೇಳಿಕೊಂಡು ಬಂದರೂ ಇಲ್ಲ ಅನ್ನದೆ ತಲುಪಿಸಲಾಗಿದೆ. ಮೇ 17 ರಿಂದ ಕಿಟ್‌ ಕೊಡಲು ಶುರು ಮಾಡಿದರೂ ಅದನ್ನ ನಿಗದಿಪಡಿಸಿಕೊಂಡು ಅಂತ್ಯ ಮಾಡಲ್ಲ. ಎಷ್ಟುಮಂದಿಗೆ ಬೇಕಾದರೂ ಕೊಡುತ್ತೇವೆ. ಯಾವ ಲಿಮಿಟ್‌ ಇಲ್ಲ. ಸ್ಥಳೀಯ ಮುಖಂಡರು ಪಟ್ಟಿಮಾಡಿ ತಂದುಕೊಟ್ಟರೆ ಅದನ್ನ ತಲುಪಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಗುಣಗಾನ ಮಾಡಿದ ದೇವೇಗೌಡ!

ಕೇಂದ್ರ ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್‌ ಸೂಕ್ತವಾಗಿದ್ದರೂ ನೈಜ ಫಲಾನುಭವಿಗಳಿಗೆ ತಲುಪುವಂತೆ ಮಾಡಬೇಕಿದೆ. ಕುಂಬಾರ, ಅಕ್ಕಸಾಲಿಗ, ನಯನ, ಸವಿತ ಸಮಾಜ ಸೇರಿ ಅಸಂಘಟಿತ ಕಾರ್ಮಿಕರು ನೋಂದಣಿ ಮಾಡಿಸಿಕೊಂಡಿಲ್ಲ. ಇವರು ನೋಂದಣಿ ಮಾಡಿಸದಿದ್ದರಿಂದ ಪರಿಹಾರ ಸಿಗಲ್ಲ ಎಂದರು.

ರಾಜ್ಯ ಸರ್ಕಾರದಲ್ಲಿ ಕಾರ್ಮಿಕರ ಸೆಸ್‌ 9 ಸಾವಿರ ಕೋಟಿ ಇದೆ. ಕೇಂದ್ರದಲ್ಲಿ ಕೊಳೆಯುತ್ತಿದೆ. ಈ ಅನುದಾನವನ್ನ ಕಾರ್ಮಿಕರ ಹಿತಕ್ಕೆ ಬಳಸಬೇಕು. ಸೇವಾಸಿಂಧು ಆ್ಯಪ್‌ನಲ್ಲಿ ದಾಖಲೆಗಳನ್ನು ಒದಗಿಸುವಾಗ ಶೇ.90 ರಷ್ಟುಸಾಧ್ಯವಾಗಲ್ಲ. ಏಕೆಂದರೆ ಒಬ್ಬ ಆಟೋ ಚಾಲಕ ಒಂದೇ ಆಟೋ ಓಡಿಸಲ್ಲ. ಐದಾರು ವರ್ಷ ಬೇರೆ ಬೇರೆ ಆಟೋ ಓಡಿಸಿರುತ್ತಾರೆ. ಆಟೋ ಲೈಸನ್ಸ್‌ ಇದ್ದರೂ ಬೇರೆ ದಾಖಲೆ ಇಲ್ಲದಿದ್ದರೆ ಪ್ರಯೋಜನ ಇಲ್ಲ ಎಂದು ಮಾಜಿ ಶಾಸಕ ವಾಸು ಹೇಳಿದರು.

ಮಂಡ್ಯದಲ್ಲಿ ಒಂದೇ ದಿನ 13 ಮಂದಿಗೆ ಕೊರೋನಾ ಸೋಂಕು

ಆಹಾರ ಕಿಟ್‌ಗಳ ಮೇಲೆ ಯಾವ ನಾಯಕರ ಲೇಬಲ್‌ ಇಲ್ಲ. ನಾನು ಶಾಸಕನಾಗಿದ್ದಾಗಲೂ ಹುಟ್ಟುಹಬ್ಬದ ವೇಳೆ ಬ್ಯಾನರ್‌, ಪೋಸ್ಟರ್‌ ಹಾಕಲು ಬಿಟ್ಟಿಲ್ಲ. ಈ ಕಿಟ್‌ಗೂ ಯಾವ ಲೇಬಲ್‌ ಇರಲ್ಲ. ಈ ಕಾರ್ಯಕ್ರಮಕ್ಕೆ ಯಾರೇ, ಯಾವ ಪಕ್ಷದವರು ಬಂದರೂ ಸ್ವಾಗತವಿದೆ ಎಂದು ಮಾಜಿ ಶಾಸಕ ವಾಸು ತಿಳಿಸಿದ್ದಾರೆ.