ಮಂಡ್ಯ(ಮೇ 16): ಮುಂಬೈನಿಂದ ವಕ್ಕರಿಸಿಕೊಂಡು ಬಂದಿರುವ ಕೊರೋನಾ ಮಹಾಮಾರಿ ಮಂಡ್ಯ ಜಿಲ್ಲೆಯನ್ನು ತೀವ್ರವಾಗಿ ಬಾಧಿಸಿದೆ. ಜಿಲ್ಲೆಯ ಕೊರೋನಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 13 ಮಂದಿಗೆ ಕೊರೋನಾ ಪಾಸಿಟಿವ್‌ ಬಂದಿರುವುದು ಜಿಲ್ಲೆಯ ಜನರಿಗೆ ಆಘಾತ ಉಂಟು ಮಾಡಿದೆ. ಕೆ.ಆರ್‌.ಪೇಟೆ ಮತ್ತು ನಾಗಮಂಗಲ ತಾಲೂಕಿನ ಮುಂಬೈ ನಿವಾಸಿಗಳಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ.

13 ಮಂದಿ ಪೈಕಿ 9 ಮಂದಿ ಪುರುಷರು ಹಾಗೂ ನಾಲ್ವರು ಮಹಿಳೆಯರಿಗೆ ಸೋಂಕು ತಗುಲಿದೆ. ಈ ಪೈಕಿ 6 ಮತ್ತು 9 ವರ್ಷದ ಹೆಣ್ಣು ಮಕ್ಕಳು, 15 ವರ್ಷದ ಬಾಲಕ, 22 ವರ್ಷದ ಯುವಕ, 40 ವರ್ಷದ ಮಹಿಳೆ ಸೇರಿದಂತೆ 13 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.

ಸಮುದಾಯ ಭವನ ಕೀ ಕೇಳಿದ ಪೊಲೀಸಪ್ಪನ ಕಿವಿ ಕಚ್ಚಿದ ಶಿಕ್ಷಕ!

ಪಿ.1044 34 ವರ್ಷ, ಪಿ.1045 33 ವರ್ಷ, ಪಿ.1047 50 ವರ್ಷ, ಪಿ.1048 22 ವರ್ಷ, ಪಿ.1049 28 ವರ್ಷ, ಪಿ.1052 42 ವರ್ಷ, ಪಿ.1053 15 ವರ್ಷ, ಪಿ.1054 46 ವರ್ಷ, ಪಿ.1056 28 ವರ್ಷ ಇವರೆಲ್ಲರೂ ಪುರುಷ ಸೋಂಕಿತರು., ಪಿ.1046 46 ವರ್ಷ ಮಹಿಳೆ, ಪಿ.1050 39 ವರ್ಷ ಮಹಿಳೆ, ಪಿ.1051 9 ವರ್ಷದ ಹೆಣ್ಣು , ಪಿ.1055 6 ವರ್ಷದ ಹೆಣ್ಣು ಮಗು ಸೇರಿ ನಾಲ್ವರಿಗೆ ಸೋಂಕು ತಗಲಿದೆ. ಜಿಲ್ಲೆಯಲ್ಲಿ ಇಂದು 13 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಒಟ್ಟು 49 ಮಂದಿಗೆ ಸೋಂಕು ತಗುಲಿದೆ. ಇದರಲ್ಲಿ 19 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 30 ಸಕ್ರಿಯ ಪ್ರಕರಣಗಳು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.