ಆ.11ರಿಂದ ಶಿವಮೊಗ್ಗದಲ್ಲಿ ವಿಮಾನ ಹಾರಾಟ ಶುರು

ಶಿವಮೊಗ್ಗ- ಬೆಂಗಳೂರು ನಡುವೆ 78 ಆಸನ ಸಾಮರ್ಥ್ಯ ವಿಮಾನ ಸಂಚಾರಕ್ಕೆ ಸಿದ್ಧತೆ, ಸಂಸ​ದರ ಎಚ್ಚರಿಕೆ ಬೆನ್ನಲ್ಲೇ ಇಂಡಿಗೋ ಸಂಸ್ಥೆ ಚುರುಕು

Flight Service Starts in Shivamogga from August 11th grg

ಶಿವಮೊಗ್ಗ(ಜೂ.12):  ಶಿವಮೊಗ್ಗ ವಿಮಾನ ನಿಲ್ದಾಣದಿಂದ ಶೀಘ್ರವೇ ವಿಮಾನ ಹಾರಾಟ ಶುರು ಮಾಡುಬೇಕು ಎಂದು ಇಂಡಿಗೋ ವಿಮಾನ ಸಂಸ್ಥೆಗೆ ಸಂಸದ ಬಿ.ವೈ.ರಾಘವೇಂದ್ರ ಎಚ್ಚರಿಕೆ ನೀಡಿದ ಬೆನ್ನಲ್ಲೆ ಆಗಸ್ಟ್‌ 11ರಿಂದ ಸೋಗಾನೆ ವಿಮಾನ ನಿಲ್ದಾಣದಿಂದ ವಿಮಾನ ಹಾರಲಿದೆ ಎಂದು ಇಂಡಿಗೋ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೊಂಡು ನಾಲ್ಕೈದು ತಿಂಗಳು ಕಳೆದರೂ ಈವರೆಗೆ ಒಂದೇ ಒಂದು ವಿಮಾನ ಹಾರಾಟ ಸಹ ಮಾಡಿಲ್ಲ. ಈ ಮಧ್ಯೆ ಸರ್ಕಾರ ಬದಲಾವಣೆಯಿಂದ ವಿಮಾನ ಹಾರಾಟ ಇನ್ನಷ್ಟುವಿಳಂಬವಾಗಲಿದೆ ಎಂದು ಹೇಳಲಾಗಿತ್ತು. ಈಗ ಅಂತೂ ಇಂತೂ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ಮುಹೂರ್ತ ಕೂಡಿ ಬಂದಿದ್ದು, ಆಗಸ್ಟ್‌ 11ರಿಂದಲೇ ಶಿವಮೊಗ್ಗ- ಬೆಂಗಳೂರು ನಡುವೆ ವಿಮಾನ ಸಂಚಾರ ಅಧಿಕೃತವಾಗಿ ಆರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ.

SHIVAMOGGA: ಶಿಕ್ಷಣ ಸಂಸ್ಥೆ ಮುಖ್ಯ​ಸ್ಥನಿಂದ ಲೈಂಗಿಕ ಕಿರುಕುಳ, ಆಸ್ಪತ್ರೆಗೆ ಸಾಗಿಸುವಾಗ ದಲಿತ ವಿದ್ಯಾ​ರ್ಥಿನಿ ಸಾವು

ಈಗಾಗಲೇ ವಿಮಾನ ಸಂಚಾರಕ್ಕೆ ಇಂಡಿಗೋ ವಿಮಾನಯಾನ ಸಂಸ್ಥೆ, ಸಕಲ ಪೂರ್ವಭಾವಿ ತಯಾರಿ ನಡೆಸಲಾರಂಭಿಸಿದೆ. ಶಿವಮೊಗ್ಗ- ಬೆಂಗಳೂರು ನಡುವೆ 78 ಆಸನ ಸಾಮರ್ಥ್ಯದ ವಿಮಾನ ಸಂಚಾರಕ್ಕೆ ಸಂಸ್ಥೆ ಮುಂದಾಗಿದೆ. ಪ್ರತಿದಿನ ಬೆಳಗ್ಗೆ 9 ಗಂಟೆ​ಗೆ ಬೆಂಗಳೂರಿನ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿರುವ ವಿಮಾನವು, ಬೆಳಗ್ಗೆ 10.30ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ. ಅದೇ ರೀತಿ ಮಧ್ಯಾಹ್ನ 12 ಗಂಟೆ​ಗೆ ಶಿವಮೊಗ್ಗದಿಂದ ಹೊರಟು 1.30ಕ್ಕೆ ಬೆಂಗಳೂರು ತಲುಪಲಿದೆ ಎಂದು ಇಂಡಿಗೋ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ಸೋಗಾನೆಯಲ್ಲಿ ಕಳೆದ ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ್ದರು. ಆಗಿನಿಂದಲೂ ಮಲೆನಾಡಿದ ಜನತೆ ವಿಮಾನ ಹಾರಾಟ ಮಾಡುವುದನ್ನು ಕಾಯುತ್ತಿದ್ದಾರೆ. ಐದು ತಿಂಗಳ ಬಳಿಕ ಮಲೆನಾಡಿನ ಜನರ ಕನಸು ನನಸಾಗುವ ಕಾಲ ಕೂಡಿ ಬಂದಿದೆ. ಪ್ರಯಾಣಿಕರ ದಟ್ಟಣೆ ಗಮನಿಸಿದ ನಂತರ ಶಿವಮೊಗ್ಗದಿಂದ ದೇಶದ ಇತರೆಡೆಗೆ ವಿಮಾನ ಸಂಚಾರ ಆರಂಭಕ್ಕೆ ಇಂಡಿಗೋ ಸಂಸ್ಥೆ ಮುಂದಾಗಲಿದೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡು ನಾಲ್ಕು ತಿಂಗಳಾದ ನಂತರ ಲೋಹದ ಹಕ್ಕಿಗಳ ಹಾರಾಟಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗದಿಂದ ಯಾವೆಲ್ಲ ಊರುಗಳಿಗೆ ವಿಮಾನಯಾನ ಆರಂಭವಾಗಲಿದೆ ಎಂಬುವುದನ್ನು ಇನ್ನಷ್ಟೆಕಾದು ನೋಡಬೇಕಾಗಿದೆ.

Latest Videos
Follow Us:
Download App:
  • android
  • ios