Asianet Suvarna News Asianet Suvarna News

Shivamogga: ಶಿಕ್ಷಣ ಸಂಸ್ಥೆ ಮುಖ್ಯ​ಸ್ಥನಿಂದ ಲೈಂಗಿಕ ಕಿರುಕುಳ, ಆಸ್ಪತ್ರೆಗೆ ಸಾಗಿಸುವಾಗ ದಲಿತ ವಿದ್ಯಾ​ರ್ಥಿನಿ ಸಾವು

ಸಾಗರದ ಖಾಸಗಿ ಶಿಕ್ಷ​ಣ ಸಂಸ್ಥೆಯ ಸಂಸ್ಥಾಪಕ ಎಚ್‌.ಪಿ. ಮಂಜಪ್ಪ ಎಂಬ​ವ​ರ​ನ್ನು ಜಾತಿನಿಂದನೆ, ಪೋಕ್ಸೋ ಸೇರಿ ವಿವಿಧ ಪ್ರಕರಣಗಳಡಿ ಬಂಧಿ​ಸ​ಲಾ​ಗಿದೆ.

Police detain head of residential school in Sagara as dalit student dies kannada news  gow
Author
First Published Jun 11, 2023, 11:14 PM IST

ಶಿವಮೊಗ್ಗ (ಜೂ.11): ಸಾಗರದ ಖಾಸಗಿ ಶಿಕ್ಷ​ಣ ಸಂಸ್ಥೆ ವನಶ್ರೀ ವಸತಿ ಶಾಲೆಯ  ಸಂಸ್ಥಾಪಕ ಎಚ್‌.ಪಿ. ಮಂಜಪ್ಪ ಎಂಬ​ವ​ರ​ನ್ನು ಜಾತಿನಿಂದನೆ, ಪೋಕ್ಸೋ ಸೇರಿ ವಿವಿಧ ಪ್ರಕರಣಗಳಡಿ ಬಂಧಿ​ಸ​ಲಾ​ಗಿದ್ದು, ಅವರ ವಿರು​ದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕ​ರಣ ದಾಖ​ಲಿ​ಸ​ಲಾ​ಗಿ​ದೆ. ಜೂ.8ರಂದು ಸಂಸ್ಥೆ​y ವಸತಿ ಶಾಲೆಯಲ್ಲಿ 8ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಸೊರಬ ತಾಲೂಕಿನ 13 ವರ್ಷದ ದಲಿತ ವಿದ್ಯಾರ್ಥಿನಿಯೊಬ್ಬ​ಳು ಅನುಮಾ​ನಾಸ್ಪದವಾಗಿ ಮೃತಪಟ್ಟಿದ್ದಳು. ಶನಿವಾರ ವಿದ್ಯಾರ್ಥಿನಿ ಸಾವಿನ ತನಿಖೆ ನಡೆಸುವಂತೆ ಪೋಷಕರು ಹಾಗೂ ವಿವಿಧ ಸಂಘಟನೆಗಳ ಕಾರ್ಯ​ಕ​ರ್ತ​ರು ಶಾಲೆ ಎದುರು ಪ್ರತಿಭಟನೆ ನಡೆಸಿದ್ದರು.

ಗುಲ್ಬರ್ಗ ವಿವಿ​: ವಿದ್ಯಾ​ರ್ಥಿ​ನಿಗೆ ಉಪ​ನ್ಯಾ​ಸಕ ಲೈಂಗಿಕ ಕಿರು​ಕು​ಳ

ಪ್ರತಿಭಟನೆ ಸಂದರ್ಭದಲ್ಲಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕೆಲವು ವಿದ್ಯಾರ್ಥಿನಿಯರು ಮಂಜಪ್ಪ ಲೈಂಗಿಕ ಕಿರುಕುಳ ನೀಡುವುದು, ಬೆದರಿಕೆ ಹಾಕುವುದು ಮಾಡು​ತ್ತಿ​ದ್ದ​ರು. ಅಶ್ಲೀಲ ಪದ ಬಳಸಿ ಬೈಯುತ್ತಿದ್ದರು ಎಂದು ಆರೋಪಿಸಿದ್ದರು. ಅಲ್ಲದೇ, ಮೃತ ವಿದ್ಯಾರ್ಥಿನಿ ಕುಟುಂಬ ನೀಡಿದ ದೂರಿನ ಹಿನ್ನೆಲೆ ಮಂಜಪ್ಪ ಅವರ ಮೇಲೆ ಐಪಿಸಿ ಸೆಕ್ಷನ್‌ 504, 506, 354ಎ, ಕಲಂ 8, 12 ಅಡಿ ಪೋಕ್ಸೋ, 3/1 (ಡಬ್ಲ್ಯೂ) 3(2), ವಿ ರೀತ್ಯಾ ಎಸ್‌ಸಿ ಎಸ್‌ಟಿ ಅಡಿ ಗ್ರಾಮಾಂತರ ಠಾಣೆ ಪೊಲೀ​ಸ​ರು ಪ್ರಕರಣ ದಾಖಲಿಸಿದ್ದಾರೆ. ಭಾನುವಾರ ಆರೋಪಿ ಮಂಜಪ್ಪನನ್ನು ಉಪವಿಭಾಗೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಮಂಜಪ್ಪ ಬಲವಂತವಾಗಿ ನೀರು ಕುಡಿಸಿದ್ದ ಹೀಗಾಗಿ ವಿದ್ಯಾರ್ಥಿನಿ ಗುರುವಾರ ತೀವ್ರ ಅಸ್ವಸ್ಥಗೊಂಡಿದ್ದಾಳೆ ಎಂದು ಶಾಲೆಯ ಇತರೆ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಆಕೆಯನ್ನು ಶಾಲಾ ವ್ಯಾನ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆಸ್ಪತ್ರೆಯಲ್ಲಿ ಅವಳು ಸಾವನ್ನಪ್ಪಿದಳು. ಸಾಮಾಜಿಕ ಕಾರ್ಯಕರ್ತರು ಬಾಲಕಿಯ ಹಠಾತ್ ಸಾವಿಗೆ ಕಾರಣವನ್ನು ತಿಳಿಸುವಂತೆ ಒತ್ತಾಯಿಸಿದ್ದಾರೆ. ಬಾಲಕಿಯ ಸಾವಿನ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ವಿದ್ಯಾರ್ಥಿನಿ ಪೋಷಕರು ಹಾಗೂ ಶಿವಪುರ ನಿವಾಸಿಗಳೊಂದಿಗೆ ಕಾರ್ಯಕರ್ತರು ವಸತಿ ಶಾಲೆಯ ಕಟ್ಟಡದ ಎದುರು ಶನಿವಾರ ಪ್ರತಿಭಟನೆ ನಡೆಸಿದರು. ಶಾಲಾ ಕಟ್ಟಡಕ್ಕೆ ಬಲವಂತವಾಗಿ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದು, ಸೂಕ್ತ ತನಿಖೆಯ ಭರವಸೆ ನೀಡಿದರು.

BENGALURU: ಮದುವೆ ಸಮಾರಂಭದಲ್ಲಿ ಉದ್ಯಮಿ ಮಕ್ಕಳಿಬ್ಬರ ಜಗಳ, ಬಿಯರ್‌ ಬಾಟಲ್‌ನಿಂದ ಹಲ್ಲೆ

ಗುವಿವಿ ಅತಿಥಿ ಉಪನ್ಯಾಸಕರಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನಿಷ್ಪಕ್ಷಪಾತ ತನಿಖೆಗೆ ಆಗ್ರಹ
ಕ​ಲ​ಬು​ರ​ಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಅತಿಥಿ ಉಪನ್ಯಾಸಕರೊಬ್ಬರು ವಿದ್ಯಾರ್ಥಿನಿಗೆ ಕರೆ ಮಾಡಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಗುವಿವಿ ದಲ್ಲಿ ನೂರಾರು ವಿದ್ಯಾರ್ಥಿನಿಯರು ಹೆಚ್ಚಿನ ಜ್ಞಾನಾರ್ಜನೆಗಾಗಿ, ಹಲವಾರು ಕಡೆಗಳಿಂದ ವಿಶ್ವವಿದ್ಯಾಲಯಕ್ಕೆ ಓದಲು ಬರುತ್ತಾರೆ. ಅದರಲ್ಲೂ ವಿದ್ಯಾರ್ಥಿನಿಯರು ಸಮಾಜದ ಎಲ್ಲಾ ಅಡೆತಡೆಗಳನ್ನು ದಾಟಿ ಹಲವಾರು ಕನಸುಗಳನ್ನು ಕಟ್ಟಿಕೊಂಡು ಬರುತ್ತಾರೆ. ಇಂತಹ ವಿದ್ಯಾರ್ಥಿನಿಯರಿಗೆ ಜ್ಞಾನ ನೀಡಿ ದಾರಿದೀಪವಾಗಬೇಕಾದ ಉಪನ್ಯಾಸಕರು ಇಂತಹ ಕೃತ್ಯಗಳಲ್ಲಿ ತೋಡಗಿರುವುದನ್ನು ಎಐಡಿಎಸ್‌ ಓ ಜಿಲ್ಲಾ ಸಮಿತಿಯು ಅತ್ಯುಗ್ರವಾಗಿ ಖಂಡಿಸುತ್ತದೆ.

ಜ್ಞಾನ ಕೊಡುವ ಶಿಕ್ಷಕರೇ ಇಂತಹ ಘಟನೆಗಳಲ್ಲಿ ತೊಡಗುತ್ತಿರುವುದು ವಿದ್ಯಾರ್ಥಿನಿಯರಲ್ಲಿ ಆತಂಕ  ಮನೆ ಮಾಡಿದೆ. ಈ ಘಟನೆಯ ಬಗ್ಗೆ ಕೂಡಲೇ ನಿಷ್ಪಕ್ಷಪಾತವಾದ ತನಿಖೆ ನಡೆಸಿ ಅಪರಾದಿಗಳಿಗೆ ಶಿಕ್ಷೆ ನೀಡಬೇಕು ಮತ್ತು ಎಲ್ಲಾ ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆಯನ್ನು ಖಾತ್ರಿಪಡಿಸಬೇಕಾಗಿ ಎಐಡಿಎಸ್‌ ಓ ಜಿಲ್ಲಾ ಸಮಿತಿಯು ಈ ಮೂಲಕ ಆಗ್ರಹಿಸುತ್ತದೆ ಎಂದು ತುಳಜರಾಮ ಎನ್‌.ಕೆ. ಜಿಲ್ಲಾ ಕಾರ್ಯದರ್ಶಿ ಎಐಡಿಎಸ್‌ ಓ ಕಲಬುರಗಿ ತಿಳಿಸಿದ್ದಾರೆ.

Follow Us:
Download App:
  • android
  • ios