11 ವಾರ್ಡ್‌ಗಳಿಗೆ ನೀರು ಪೂರೈಸುತ್ತಿದ್ದ ನದಿಗೆ ವಿಷ, ಮೀನುಗಳ ಮಾರಣ ಹೋಮ
ಬೆಳ್ತಂಗಡಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ 11 ವಾರ್ಡ್‌ಗಳಿಗೆ ನೀರು ಪೂರೈಸುತ್ತಿದ್ದ ಸೋಮಾವತಿ ನದಿ ನೀರಿಗೆ ದುಷ್ಕರ್ಮಿಗಳು ವಿಷ ಬೆರಸಿರುವ ಅನುಮಾನ ವ್ಯಕ್ತವಾಗಿದ್ದು, ಮೀನುಗಳ ಮಾರಣಹೋಮವಾಗಿವೆ.
ಮಂಗಳೂರು(ಏ.22): ಬೆಳ್ತಂಗಡಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ 11 ವಾರ್ಡ್‌ಗಳಿಗೆ ನೀರು ಪೂರೈಸುತ್ತಿದ್ದ ಸೋಮಾವತಿ ನದಿ ನೀರಿಗೆ ದುಷ್ಕರ್ಮಿಗಳು ವಿಷ ಬೆರಸಿರುವ ಅನುಮಾನ ವ್ಯಕ್ತವಾಗಿದ್ದು, ಮೀನುಗಳ ಮಾರಣಹೋಮವಾಗಿವೆ.
ನಗರಕ್ಕೆ ನೀರು ಸರಬರಾಜಾಗುವುದನ್ನು ಸ್ಥಗಿತಗೊಳಿಸಲಾಗಿದೆ. ಬೆಳ್ತಂಗಡಿ ನಗರ ಪಂಚಾಯಿತಿ ಕುಡಿಯುವ ನೀರಿನ ಪಂಪುಹೌಸ್ ಬಳಿಯ ಸೋಮಾವತಿ ನದಿಯ ಗುಂಡಿಯಲ್ಲಿ ಸೋಮವಾರ ರಾತ್ರಿ ಕಿಡಿಗೇಡಿಗಳು ಸ್ಫೋಟಕ ಬೆರೆಸಿ ಮೀನು ಹಿಡಿಯಲು ಯತ್ನಿಸಿ ನೀರನ್ನು ಕುಲುಷಿತಗೊಳಿಸಿದ ಪರಿಣಾವಾಗಿ ಮೀನುಗಳು ಸಾವನ್ನಪ್ಪಿವೆ.
ಕೊರೋನಾ ವಾರಿಯರ್ಸ್ ಕುಟುಂಬಸ್ಥರ ಜೊತೆ ಕಮಿಷನರ್ ವಿಡಿಯೊ ಕಾನ್ಫರೆನ್ಸ್
ರಾತ್ರಿ ಐದಾರು ಮಂದಿಯ ತಂಡ ಕೃತ್ಯ ಎಸಗಿರುವ ಅನುಮಾನವಿದ್ದು, ಸ್ಥಳೀಯರು ನೀಡಿದ ಖಚಿತ ಮಾಹಿತಿಯನ್ವಯ ಬೆಳ್ತಂಗಡಿ ಠಾಣೆ ಎಸ್.ಐ. ನಂದಕುಮಾರ್ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿದಾಗ ಕಿಡಿಗೇಡಿಗಳು ಕತ್ತಲಲ್ಲಿ ಪರಾರಿಯಾಗಿದ್ದಾರೆ.