ಮಂಗಳೂರು(ಏ.22): ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕೋವಿಡ್‌ ವಾರಿಯರ್‌ ಆಫ್‌ ದ ಡೇ ಗೌರವ ಪಡೆದ ಪೊಲೀಸ್‌ ಸಿಬ್ಬಂದಿ ಕುಟುಂಬಗಳ ಜತೆ ಪೊಲೀಸ್‌ ಆಯುಕ್ತ ಡಾ. ಪಿ.ಎಸ್‌. ಹರ್ಷ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದಾರೆ.

ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕೋವಿಡ್‌-19 ಜಾಗೃತಿ ಹಿನ್ನೆಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ ಸಿಬ್ಬಂದಿಯನ್ನು ಕೋವಿಡ್‌ ವಾರಿಯರ್‌ ಎಂದು ಗುರುತಿಸಿ ಗೌರವಿಸಲಾಗುತ್ತಿದೆ.

'ನನ್ನನ್ನು ಕ್ಷಮಿಸಿ': ಲಾಕ್‌ಡೌನ್‌ ಉಲ್ಲಂಘಿಸಿದವರ ಕೈಯಲ್ಲೇನಿದೆ ನೋಡಿ..!

ಈ ಸಿಬ್ಬಂದಿಯ ಕುಟುಂಬ ಜತೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಆಯುಕ್ತರು, ವಾರಿಯರ್‌ಗಳ ಕರ್ತವ್ಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ಕುಟುಂಬಕ್ಕೆ ಧೈರ್ಯ ಹೇಳಿದರು.

ಕೋವಿಡ್‌ ವಾರಿಯರ್‌ ಗೌರವ ಪಡೆದ ಸಂತೋಷ್‌, ನಯನಾ, ಗೋವಿಂದಾ, ಬಸವರಾಜ್‌ ಪಾಟೀಲ್, ಶಿವಪ್ಪ, ರಂಜನ್‌ ಕುಮಾರ್‌, ಸೋಮನಗೌಡ ಚೌಧರಿ, ಪುನೀತ್‌ ಮತ್ತಿತರರು ಇದ್ದರು.

 

"