ಬೆಂಗಳೂರಿನಲ್ಲಿ ಮೊದಲ ಸಂಜೆ ಅಂಚೆ ಕಚೇರಿ ಸ್ಥಾಪನೆ, ಉದ್ಯೋಗಿಗಳು ಫುಲ್ ಖುಷ್
ಬೆಂಗಳೂರು ನಗರವು ಜ.16 ರಂದು ತನ್ನ ಮೊದಲ ಸಂಜೆಯ ಅಂಚೆ ಕಚೇರಿಯನ್ನು ಪಡೆದುಕೊಂಡಿದೆ. ಅಂಚೆ ಇಲಾಖೆಯು ‘ಸಂಜೆ ಅಂಚೆ’ ಸೇವೆಯನ್ನು ಪರಿಚಯಿಸಲಾಗಿದೆ. ಇದು ಉದ್ಯೋಗದಲ್ಲಿ ಇರುವವವರಿಗೆ ಬಹಳ ಉಪಯೋಗವಾಗಿದೆ.
ಬೆಂಗಳೂರು (ಜ.19): ಬೆಂಗಳೂರು ನಗರವು ಜ.16 ರಂದು ತನ್ನ ಮೊದಲ ಸಂಜೆಯ ಅಂಚೆ ಕಚೇರಿಯನ್ನು ಪಡೆದುಕೊಂಡಿದೆ. ಅಂಚೆ ಇಲಾಖೆಯು ‘ಸಂಜೆ ಅಂಚೆ’ ಸೇವೆಯನ್ನು ಪರಿಚಯಿಸಲಾಗಿದೆ. ಇದು ಉದ್ಯೋಗದಲ್ಲಿ ಇರುವವವರಿಗೆ ಬಹಳ ಉಪಯೋಗವಾಗಿದೆ. ಸಾಮಾನ್ಯ ಅಂಚೆ ಕಚೇರಿಯ ಹಗಲು ಸೇವೆ ನೀಡುತ್ತದೆ. ಆದರೆ ಇದರಿಂದ ಉದ್ಯೋಗಿಗಳಿಗೆ ತೊಂದರೆಯಾಗಿತ್ತು. ಧಾರವಾಡದಲ್ಲಿ ಕರ್ನಾಟಕದ ಮೊದಲ ಸಂಜೆ ಅಂಚೆ ಕಛೇರಿಯ ಯಶಸ್ಸಿನ ನಂತರ ಬೆಂಗಳೂರಿನಲ್ಲಿ ಕೂಡ ಭಾರತೀಯ ಅಂಚೆ ಕಚೇರಿಯನ್ನು ಉದ್ಘಾಟಿಸಲಾಯಿತು.
ಬೆಂಗಳೂರಿನ ಸಂಜೆ ಅಂಚೆ ಕಚೇರಿಯು ಮ್ಯೂಸಿಯಂ ರಸ್ತೆಯಲ್ಲಿದೆ ಮತ್ತು ವಾರದಲ್ಲಿ ಆರು ದಿನಗಳು ಮಧ್ಯಾಹ್ನ 1 ರಿಂದ ರಾತ್ರಿ 9 ರವರೆಗೆ ತೆರೆದಿರುತ್ತದೆ. ಪೋಸ್ಟ್ ಆಫೀಸ್ ಸ್ಪೀಡ್ ಪೋಸ್ಟ್, ಪಾರ್ಸೆಲ್ ಬುಕಿಂಗ್, ಪಾರ್ಸೆಲ್ ಪ್ಯಾಕಿಂಗ್, ಆಧಾರ್ ಸೇವೆಗಳು, ಚಿತ್ರ ಪೋಸ್ಟ್‌ಕಾರ್ಡ್‌ಗಳು ಮತ್ತು ಸ್ಟ್ಯಾಂಪ್ ಸೇವೆಗಳು ಸೇರಿದಂತೆ ಹಲವಾರು ಸೇವೆಗಳನ್ನು ನೀಡಲಾಗುತ್ತದೆ.
ಕುಡುಕ ಪೋಸ್ಟ್ ಮ್ಯಾನ್ ವರ್ತನೆಗೆ ಬೇಸತ್ತ ಗ್ರಾಮಸ್ಥರು, ಸಂದೇಶ ರವಾನೆಗೆ ಮದ್ಯ ವ್ಯಸನ ಅಡ್ಡಿ
ಸಾಮಾನ್ಯ ಅಂಚೆ ಕಛೇರಿಯಲ್ಲಿ ಕೌಂಟರ್‌ಗಳು ಮಧ್ಯಾಹ್ನ 3:30 ಕ್ಕೆ ಮುಚ್ಚಲ್ಪಡುತ್ತವೆ, ಆದ್ದರಿಂದ ವಾರದ ದಿನಗಳಲ್ಲಿ ಕೆಲಸದ ಸಮಯದಲ್ಲಿ ಅಂಚೆ ಕಚೇರಿಗಳಿಗೆ ಭೇಟಿ ನೀಡಲು ಸಾಧ್ಯವಾಗದ ವೃತ್ತಿಪರರಿಗೆ ಇಂದು ಸಂಜೆ ಅಂಚೆ ಕಚೇರಿಯನ್ನು ಬಹಳ ಉಪಯುಕ್ತವಾಗಲಿದೆ.
ಅಂಚೆ ಪಾಲಕ ಕರ್ತವ್ಯಕ್ಕೆ ಗೈರು; 45 ದಿನದಿಂದ ಜನತೆಗೆ ಸಿಗದ ಸೇವೆ!
ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ರಾತ್ರಿ ಕಾರ್ಯ ನಿರ್ವಹಿಸುವ ಹೆಚ್ಚಿನ ಸಂಜೆ ಅಂಚೆ ಕಚೇರಿಗಳು ಬರಬಹುದು ಎಂದು ಅಂಚೆ ಅಧಿಕಾರಿಯೊಬ್ಬರು ಪ್ರಕಟಣೆಗೆ ತಿಳಿಸಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಸಂಜೆ ಅಂಚೆ ಕಛೇರಿಯನ್ನು ಪಡೆದ ಕರ್ನಾಟಕದ ಮೊದಲ ಪ್ರದೇಶ ಧಾರವಾಡ ಮತ್ತು ಅದರ ಯಶಸ್ಸನ್ನು ಗಮನಿಸಿದ ಅಧಿಕಾರಿಗಳು ಬೆಂಗಳೂರಿನಲ್ಲಿ ಇನ್ನೊಂದನ್ನು ಪ್ರಸ್ತಾಪಿಸಲಾಗಿದೆ.