ಕೋಲಾರ(ಜೂ.27) : ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ 43 ಮಹಿಳೆಯೊಬ್ಬರು ಮೊದಲ ಬಲಿಯಾಗಿದ್ದು ಇಡೀ ಜಿಲ್ಲೆ ಆತಂಕಕ್ಕೆ ಒಳಗಾಗಿದೆ. ದೆಹಲಿಯಿಂದ ಜೂ. 14ರಂದು ಕೆಜಿಎಫ್‌ನ ತೂಕಲ್ಲು ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮದುವೆಗೆ ಬಂದಿದ್ದ ಮಹಿಳೆಗೆ ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡಿತು. ಆಕೆಯನ್ನು ಜೂ. 19ಕ್ಕೆ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಯಿತು. ಮಹಿಳೆಯ ಕಫ ಮತ್ತು ರಕ್ತ ಪರೀಕ್ಷೆ ಮಾಡಿಸಲಾಗಿ ಕೊರೋನಾ ಸೋಂಕು ದೃಢಪಟ್ಟಿದೆ.

ಆಸ್ತಮಾ ರೋಗದಿಂದ ಬಳಲುತ್ತಿದ್ದ ಈ ರೋಗಿಗೆ ಉಸಿರಾಟದ ತೊಂದರೆ ಉಂಟಾಗಿದ್ದು ವೆಂಟಿಲೇಟರ್‌ಗೆ ಹಾಕಲಾಗಿತ್ತು. ಆದರೆ ಆಕೆ ಚೇತರಿಸಿಕೊಳ್ಳದೆ ಗುರುವಾರ ತಡರಾತ್ರಿ ಮೃತಪಟ್ಟಿದ್ದಾಳೆ.

ಬೈಕ್‌ನಲ್ಲಿ ಕುಳಿತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಮೂಲತಃ ಕೆಜಿಎಫ್‌ನ ತೂಕಲ್ಲು ಗ್ರಾಮದವರಾದ ಮಹಿಳೆ ದೆಹಲಿಯಲ್ಲಿರುವ ತಮ್ಮ ಅಕ್ಕನ ಮನೆಯಲ್ಲಿ ವಾಸವಾಗಿದ್ದಳು. ನಂತರ ಮುಸ್ಲಿಂ ಯುವಕನೊಂದಿಗೆ ಸ್ನೇಹವಾಗಿ ಆತನನ್ನು ಮದುವೆಯಾಗಿ ಕೆಜಿಎಫ್‌ನ ತಮ್ಮ ಹುಟ್ಟೂರು ತೂಕಲ್ಲು ಗ್ರಾಮದಲ್ಲಿ ತಮ್ಮ ಸಂಬಂಧಿಕರ ಮದುವೆ ಇದ್ದುದ್ದರಿಂದ ಆಕೆ ದೆಹಲಿಯಿಂದ ಆಗಮಿಸಿದ್ದಳು.

ಮಹಿಳೆಯ ಪತಿಗೂ ಕೊರೋನಾ ಪಾಸಿಟಿವ್‌ ಇದ್ದು ಆತನಿಂದ ಈಕೆಗೆ ಸೋಂಕು ಬಂದಿದೆ ಎನ್ನಲಾಗಿದೆ. ಈಗ ಅವರ ಗಂಡನಿಗೆ ಕೂಡ ಪಾಸಿಟಿವ್‌ ಬಂದಿದ್ದು, ಆತನನ್ನು ಕೂಡ ಕೋವಿಡ್‌ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ. ಮೃತರ ಇಬ್ಬರು ಮಕ್ಕಳು ಸೇರಿದಂತೆ ಕುಟುಂಬದವರನ್ನು ಸಹ ಕ್ವಾರಂಟೈನ್‌ ಮಾಡಲಾಗಿದೆ.

ಗ್ರಾಮೀಣ ರಸ್ತೆಗಳ ಕಾಮಗಾರಿ ಶೀಘ್ರ ಆರಂಭ; ಸಂಸದ ರಾಘವೇಂದ್ರ

ಈ ಮಧ್ಯೆ ಬೆಮಲ್‌ ನಗರದ ವಿಜಯನಗರದಲ್ಲಿ ನರ್ಸ್‌ ಒಬ್ಬರಿಗೆ ಸೋಂಕು ಹರಿಡಿದೆ. ಪ್ರದೇಶವನ್ನು ಕ್ವಾರಂಟೈನ್‌ ಮಾಡಲಾಗಿದೆ. ಅವರ ಕುಟುಂಬದ ಮೂವರನ್ನು ನಗರದ ಇಡಿ ಆಸ್ಪತ್ರೆಗೆ ಸೇರಿಸಲಾಗಿದೆ.

ಕೊರೋನಾ ಸೋಂಕಿನಿಂದ ಮೃತ ಪಟ್ಟಮಹಿಳೆಯ ಅಂತ್ಯಕ್ರಿಯೆಯನ್ನು ಆರೋಗ್ಯ ಇಲಾಖೆಯವರು ಕೋಲಾರದ ರಹಮತ್‌ ನಗರದ ಬಳಿ ಇರುವ ಹಿಂದೂ ರುಧ್ರಭೂಮಿಯಲ್ಲಿ ಶುಕ್ರವಾರ ಮಧ್ಯಾಹ್ನ 3.30ರ ವೇಳೆಗೆ ನಡೆಸಲಾಗಿದ್ದು ಅಂತ್ಯಕ್ರಿಯ ವೇಳೆ ಅವರ ಸಂಬಂಧಿಕರಿಗೆ ಭಾಗವಹಿಸಲು ಅವಕಾಶ ನೀಡಿರಲಿಲ್ಲ. ತೂಕಲ್ಲು ಗ್ರಾಮದಲ್ಲಿ ಔಷಧಿ ಸಿಂಪಡಣೆ ಮಾಡಲಾಗಿದೆ. ಗ್ರಾಮವನ್ನು ಸಂಪೂರ್ಣ ಕಂಟೈನ್‌ಮೆಂಟ್‌ ಜೋನ್‌ ಘೋಷಣೆ ಮಾಡಿದ್ದು ಕಟ್ಟೆಚ್ಚರ ವಹಿಸಲಾಗಿದೆ.