ಮೈಸೂರು(ಜೂ.27): ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ತಾಳಬೆಟ್ಟಸಮೀಪದಲ್ಲಿ ಬೈಕ್‌ನಲ್ಲಿ ಕುಳಿತ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ. ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟದ ಪ್ರಾಧಿಕಾರದ ನೌಕರ ಮಹಾದೇವಸ್ವಾಮಿ(28) ಮೃತ ದುರ್ದೈವಿ.

ಈತ ಕಾವೇರಿ ಪಂಪ್‌ಹೌಸ್‌ನಲ್ಲಿ ಆಪರೇಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದು ನಂಜನಗೂಡು ತಾಲೂಕಿನ ತೆಳ್ಳನೂರಿನ ಹೆಂಡತಿ ಮನೆಗೆ ಹೊರಟಿದ್ದ ಎನ್ನಲಾಗಿದೆ. ಪೊಲೀಸರ ಪ್ರಕಾರ ಹಳೇ ದ್ವೇಷದಿಂದ ದುಷ್ಕರ್ಮಿಗಳು ಅಡ್ಡಗಟ್ಟಿತಲೆಗೆ ಹೊಡೆದು ಕೊಂದಿದ್ದಾರೆ.

ಗ್ರಾಮೀಣ ರಸ್ತೆಗಳ ಕಾಮಗಾರಿ ಶೀಘ್ರ ಆರಂಭ; ಸಂಸದ ರಾಘವೇಂದ್ರ

ಹೊಡೆದ ರಭಸಕ್ಕೆ ರಕ್ತಸ್ರಾವವಾಗಿ ಬೈಕ್‌ನಲ್ಲಿ ಕುಳಿತ ಸ್ಥಿತಿಯಲ್ಲೇ ಪ್ರಾಣ ಬಿಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಮೃತನ ತಮ್ಮ ಮಹೇಶ್‌ ಮಲೆಮಹದೇಶ್ವರ ಬೆಟ್ಟದ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸುದ್ದಿ ತಿಳಿದ ಶಾಸಕ ಆರ್‌.ನರೇಂದ್ರ ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಶವಾಗಾರಕ್ಕೆ ಭೇಟಿ ನೀಡಿ ಡಿವೈಎಸ್ಪಿ ನವೀನ್‌ಕುಮಾರ್‌, ವೃತ್ತನಿರೀಕ್ಷಕ ಮಹೇಶ್‌ ಹಾಗೂ ಕುಟುಂಬದವರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದರು. ಬಳಿಕ ಮೃತನ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.