ಗ್ರಾಮೀಣ ರಸ್ತೆಗಳ ಕಾಮಗಾರಿ ಶೀಘ್ರ ಆರಂಭ; ಸಂಸದ ರಾಘವೇಂದ್ರ

ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಡಿ ಒಟ್ಟು 216 ಕಿ.ಮಿ. ರಸ್ತೆ ಹಂಚಿಕೆ (ಕ್ಷೇತ್ರದ ಪ್ರತಿ ತಾಲೂಕಿಗೆ 25 ರಿಂದ 30 ಕಿ.ಮೀ. ನಂತೆ) ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 190, ಬೈಂದೂರಿನಲ್ಲಿ 26 ಕಿ.ಮೀ. ಹಂಚಿಕೆಯಾಗಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Rural road development work project starts soon Says Shivamogga MP BY Raghavendra

ಶಿವಮೊಗ್ಗ(ಜೂ.27): ಕೇಂದ್ರ ಸರ್ಕಾರ ಗ್ರಾಮೀಣ ಸಂಪರ್ಕ ರಸ್ತೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಶೀಘ್ರದಲ್ಲಿಯೇ ರಸ್ತೆ ನಿರ್ಮಾಣ ಕಾರ್ಯ ಪ್ರಾರಂಭಗೊಳ್ಳಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸರ್ಕಾರ 2019-20ನೇ ಸಾಲಿನಲ್ಲಿ ಗ್ರಾಮೀಣ ಮಾರುಕಟ್ಟೆ, ಆಸ್ಪತ್ರೆ, ಉನ್ನತ ಶಿಕ್ಷಣ ಸಂಸ್ಥೆ, ಜನವಸತಿ ಪ್ರದೇಶಗಳನ್ನು ಸಂಪರ್ಕಿಸುವ ಕುರಿತು ಸಮರ್ಥ ರಸ್ತೆ ಜಾಲಗಳನ್ನು ಗುರುತಿಸಿ, ನೇರ ರಸ್ತೆಗಳು ಮತ್ತು ಪ್ರಮುಖ ಗ್ರಾಮೀಣ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಲು ಉದ್ದೇಶಿಸಿದೆ ಎಂದು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಿಂದ ಜಿಲ್ಲಾ ರಸ್ತೆ, ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಬಲವರ್ಧನೆ, ಅಭಿವೃದ್ಧಿ ಪಡಿಸುವ ಸಲುವಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ-3ನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಅದರಂತೆ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ 5612.59 ಕಿ.ಮೀ. ಹಂಚಿಕೆ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಡಿ ಒಟ್ಟು 216 ಕಿ.ಮಿ. ರಸ್ತೆ ಹಂಚಿಕೆ (ಕ್ಷೇತ್ರದ ಪ್ರತಿ ತಾಲೂಕಿಗೆ 25 ರಿಂದ 30 ಕಿ.ಮೀ. ನಂತೆ) ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 190, ಬೈಂದೂರಿನಲ್ಲಿ 26 ಕಿ.ಮೀ. ಹಂಚಿಕೆಯಾಗಿದೆ. ಪ್ರಸ್ತುತ ಬ್ಯಾಚ್‌-1ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 141 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಅಂದಾಜು 114.83 ಕೋಟಿ ರು. ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 26 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ರಾಷ್ಟ್ರೀಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆಯಿಂದ ಅನುಮೋದನೆಯಾಗಿದ್ದು, ಟೆಂಡರ್‌ ಕರೆಯಲಾಗಿದೆ. ಬ್ಯಾಚ್‌-2ರಲ್ಲಿ ಬಾಕಿ ಉಳಿದಿರುವ 49 ಕಿ.ಮೀ ಉದ್ದದ ರಸ್ತೆಗಳ ಅಂದಾಜು ಪಟ್ಟಿ(ಡಿಪಿಆರ್‌) ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಅನುಮೋದನೆ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಮಲೆನಾಡ ಜಿಲ್ಲೆಯಲ್ಲಿ ಕ್ಷೀಣಿಸಿದ ಮುಂಗಾರು

ಈವರೆಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ರಸ್ತೆಗಳ ವಿವರ ನೀಡಿರುವ ಸಂಸದರು, 2009-10ರಲ್ಲಿ ಶಿವಮೊಗ್ಗ ವಿಭಾಗದಲ್ಲಿ ಅಂದಾಜು 32.53 ಕೋಟಿ ರು. ವೆಚ್ಚದಲ್ಲಿ 13 ಕಾಮಗಾರಿಯನ್ನು ಕೈಗೆತ್ತಿಕೊಂಡು 94.8 ಕಿ.ಮೀ. ರಸ್ತೆ ಅಭಿವೃದ್ದಿ ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

2009-11ರಲ್ಲಿ ಶಿಕಾರಿಪುರ ವಿಭಾಗದಲ್ಲಿ 16 ಕಾಮಗಾರಿ ಕೈಗೆತ್ತಿಕೊಂಡು ಅಂದಾಜು 37 ಕೋಟಿ ರು. ವೆಚ್ಚದಲ್ಲಿ 86 ಕಿ.ಮೀ., 2012-13ರಲ್ಲಿ ಶಿವಮೊಗ್ಗ ವಿಭಾಗದಲ್ಲಿ 4 ಕಾಮಗಾರಿ ಕೈಗೆತ್ತಿಕೊಂಡು 4 ಕೋಟಿ ರು. ವೆಚ್ಚದಲ್ಲಿ 11.47 ಕಿ.ಮೀ., 2013-14ರಲ್ಲಿ ಶಿವಮೊಗ್ಗ ವಿಭಾಗದಲ್ಲಿ 10 ಕಾಮಗಾರಿ ಕೈಗೆತ್ತಿಕೊಂಡು 35 ಕೋಟಿ ರು. ವೆಚ್ಚದಲ್ಲಿ 56.03 ಕಿ.ಮೀ., 2013-14ರಲ್ಲಿ ಶಿಕಾರಿಪುರ ವಿಭಾಗದಲ್ಲಿ 5 ಕಾಮಗಾರಿ, ಅಂದಾಜು 20 ಕೋಟಿ ರು. ವೆಚ್ಚದಲ್ಲಿ 44ಕಿ.ಮೀ., ಹಾಗೂ 2009-13ರವರೆಗೆ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2 ಕಾಮಗಾರಿ, 7.45 ಕೋಟಿ ರು. ವೆಚ್ಚದಲ್ಲಿ 10.50 ಕಿ.ಮೀ. ನಷ್ಟು ರಸ್ತೆ ಅಭಿವೃದ್ಧಿಪಡಿಸಿರುವುದಾಗಿ ಅವರು ವಿವರಣೆ ನೀಡಿದ್ದಾರೆ.

Latest Videos
Follow Us:
Download App:
  • android
  • ios