ಬೆಂಗಳೂರು(ಫೆ.16): ಬಿಬಿಎಂಪಿ ಕೇಂದ್ರ ಕಚೇರಿ ಬಳಿ ಇರುವ ಯುನಿಟಿ ಬಿಲ್ಡಿಂಗ್‌ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ವಿಷಯ ತಿಳಿದು ಕೂಡಲೇ ಎರಡು ವಾಹನದಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಎಸ್‌.ಜೆ.ಪಾರ್ಕ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಸರ್ಕಾರ ಅನಮತಿ ಇಲ್ಲದೆ ಟ್ಯಾಂಕ್ ತೆರವು, 21 ಜನ ಅಮಾನತು

ಯುನಿಟಿ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿ ಸಿಮೆಂಟ್‌ ಕಂಪನಿಯೊಂದಕ್ಕೆ ಸೇರಿದ ಕಚೇರಿ ಇದೆ. ಶನಿವಾರ ಆದ ಕಾರಣ ಕಚೇರಿ ಸಿಬ್ಬಂದಿ ಅರ್ಧ ದಿನ ಕೆಲಸ ನಿರ್ವಹಿಸಿ ಬಳಿಕ ಬಾಗಿಲು ಹಾಕಿಕೊಂಡು ಹೋಗಿದ್ದರು.

ವಾಲಿದ್ದ ಕಟ್ಟಡ ಬೀಳಿಸಿ ಆಯ್ತು, ತ್ಯಾಜ್ಯ ಹಾಕೋದೆಲ್ಲಿ..?

ಸಂಜೆ 3.30ರ ಸುಮಾರಿಗೆ ಸಿಬ್ಬಂದಿಯೊಬ್ಬರು ಮೊಬೈಲ್‌ ಬಿಟ್ಟು ಹೋಗಿದ್ದ ಕಾರಣ ಮತ್ತೆ ಕಚೇರಿಗೆ ವಾಪಸ್‌ ಬಂದಿದ್ದರು. ಈ ವೇಳೆ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಗೆ ವಿಷಯ ತಿಳಿಸಿದ್ದರು. ಹೇಗೆ ಬೆಂಕಿ ಬಿದ್ದಿದೆ ಎಂಬುದು ತನಿಖೆ ವೇಳೆ ತಿಳಿದು ಬರಬೇಕಿದೆ ಎಂದು ತಿಳಿಸಿದರು.