ಬೆಂಗಳೂರು(ಫೆ.16): ಹೆಬ್ಬಾಳದ ಕೆಂಪಾಪುರದಲ್ಲಿ ವಾಲಿದ್ದ ಐದು ಅಂತಸ್ತಿನ ಕಟ್ಟಡವನ್ನು ನೆಲಸಮ ಕಾರ್ಯ ಪೂರ್ಣಗೊಂಡರೂ ತ್ಯಾಜ್ಯ ವಿಲೇವಾರಿಗೆ ಸ್ಥಳಾವಕಾಶ ದೊರೆಯದೇ ಬಿಬಿಎಂಪಿ ಅಧಿಕಾರಿಗಳು ಪರದಾಡುವಂತಾಗಿದೆ.

ಬ್ಯಾಟರಾಯನಪುರ ವಾರ್ಡಿನ ಕೆಂಪಾಪುರದ ಜಿ.ರಾಮಯ್ಯಲೇಔಟ್‌ನಲ್ಲಿ ಐದು ಅಂತಸ್ತಿತ ಕಟ್ಟಡ ಫೆ.5ರಂದು ವಾಲಿತ್ತು. ಅಪಾಯದ ಸ್ಥಿತಿಯಲ್ಲಿದ್ದ ಕಟ್ಟಡವನ್ನು ಎನ್‌ಡಿಆರ್‌ಎಫ್‌ ಹಾಗೂ ಬಿಬಿಎಂಪಿ ಸಿಬ್ಬಂದಿ ನೆಲಸಮಗೊಳಿಸಿದ್ದರು.

ವಾಲಿದ್ದ ಕಟ್ಟಡ ಸಂಪೂರ್ಣ ನೆಲಸಮ!.

ಕಳೆದ ಬುಧವಾರಕ್ಕೆ ಕಟ್ಟಡ ನೆಲಸಮ ಕಾರ್ಯ ಪೂರ್ಣಗೊಂಡರೂ ಕಟ್ಟಡ ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳಾವಕಾಶ ದೊರೆಯದೇ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಕಟ್ಟಡದ ತೆರವು ಹಾಗೂ ಕಟ್ಟಡದ ತ್ಯಾಜ್ಯದ ವಿಲೇವಾರಿಗೆ 4ಜಿ ವಿನಾಯಿತಿಯ ಪಡೆಯಲಾಗಿದೆ. ಕಟ್ಟಡ ತ್ಯಾಜ್ಯ ವಿಲೇವಾರಿಗೆ ಬಾಗಲೂರಿನಲ್ಲಿರುವ ಪಾಲಿಕೆಯ ಶ್ರೀನಿವಾಸಪುರದಲ್ಲಿರುವ ಕ್ವಾರಿಯಲ್ಲಿ ಸುರಿಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತ ಅಶೋಕ್‌ ತಿಳಿಸಿದರು.