ದೊಮ್ಮಸಂದ್ರ(ಫೆ.16): ಸರ್ಕಾರದ ಅನುಮತಿ ಪಡೆಯದೇ ಹಳೆಯ ಓವರ್‌ ಟ್ಯಾಂಕ್‌ ಅನ್ನು ತೆರವುಗೊಳಿಸಿದ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸೇರಿದಂತೆ 21 ಸದಸ್ಯರನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲೂಕಿನ ಸರ್ಜಾಪುರ ಹೋಬಳಿಯ ಯಮರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಂಪುರದಲ್ಲಿ ಓವರ್‌ ಟ್ಯಾಂಕ್‌ ಅನ್ನು ತೆರವುಗೊಳಿಸಲಾಗಿತ್ತು.

ವಾಲಿದ್ದ ಕಟ್ಟಡ ಬೀಳಿಸಿ ಆಯ್ತು, ತ್ಯಾಜ್ಯ ಹಾಕೋದೆಲ್ಲಿ..?

ಆದರೆ ಇದಕ್ಕೆ ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ಯಿಂದ ಟ್ಯಾಂಕ್‌ನ ಸ್ಥಿರತೆ ಬಗ್ಗೆ ವರದಿ ಪಡೆದಿರಲಿಲ್ಲ. ರಾಜ್ಯ ಸರ್ಕಾರವು ಪಂಚಾಯತ್‌ ರಾಜ್‌ ಅಧಿನಿಯಮ 1993ರ ಪ್ರಕರಣ 43(ಎ) ಮತ್ತು 48(4) ಹಾಗೂ 48 (5)ರ ಅನ್ವಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಉಪನಿರ್ದೇಶಕ ಬಿ.ನವೀನ್‌ಕುಮಾರ್‌ ಅವರು ಸದಸ್ಯರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.