Asianet Suvarna News Asianet Suvarna News

ಕೊನೆಗೂ ಬಲೆಗೆ ಬಿದ್ದ ಮೊಸಳೆ: ನಿಟ್ಟುಸಿರು ಬಿಟ್ಟ ಮೈಸೂರಿನ ಜನತೆ..!

ಕಣ್ಣಾ ಮುಚ್ಚಾಲೆ ಆಡುತ್ತಿದ್ದ ಮೊಸಳೆ ಕೊನೆಗೂ ಸೆರೆ ಸಿಕ್ಕಿದೆ. ‌ಯಶಸ್ವಿಯಾದ ಮೃಗಾಲಯ, ಅರಣ್ಯ ಇಲಾಖೆಯ ಕಾರ್ಯಾಚರಣೆ 

Fire Department and Forest Officers Catch Crocodile in Mysuru grg
Author
First Published Nov 17, 2022, 11:01 PM IST

ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು 

ಮೈಸೂರು(ನ.17): ಮೈಸೂರಿಲ್ಲಿ ಮೊಸಳೆ ಬಂತು ಮೊಸಳೆ ಕಹಾನಿಗೆ ಅಂತ್ಯ ಸಿಕ್ಕಿದೆ. ಬಂದು ಹೋಗಿ‌, ಬಂದು ಹೋಗಿ ಕಣ್ಣಾ ಮುಚ್ಚಾಲೆ ಆಡುತ್ತಿದ್ದ ಮೊಸಳೆ ಕೊನೆಗೂ ಸೆರೆ ಸಿಕ್ಕಿದೆ. ಮೃಗಾಲಯ, ಅರಣ್ಯ ಇಲಾಖೆಯ ಕಾರ್ಯಾಚರಣೆ ‌ಯಶಸ್ವಿಯಾಗಿದೆ. 

ಜೆಸಿಬಿಗಳ ಅಬ್ಬರ, ಜನರ ಕುತುಹಲ. ಈ ಮಧ್ಯ ಮೈಸೂರಿನ ಹೃದಯ ಭಾಗದಲ್ಲಿ ಕಣ್ಣಾ ಮುಚ್ಚಾಲೆಯಾಡುತ್ತಿದ್ದ ಮೊಸಳೆ ಇವತ್ತು ಸೆರೆ ಸಿಕ್ಕಿದೆ. ಮೈಸೂರಿನ‌ ಹೃದಯ ಭಾಗದಲ್ಲಿರುವ ರಾಮಾನುಜ ರಸ್ತೆಯ 9ನೇ ಕ್ರಾಸ್ ಬಳಿಯಿದ್ದ ಮೋರಿಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಇಲ್ಲಿ ದಿಢೀರ್ ಅಂಥ ಮೊಸಳೆಯೊಂದು ಪ್ರತ್ಯಕ್ಷವಾಗಿತ್ತು. ಮೊಸಳೆಯನ್ನ ಕಂಡು ಸ್ಥಳೀಯರು ಗಾಬರಿಯಾಗಿದ್ರು. ತಕ್ಷಣ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಅರಣ್ಯ ಇಲಾಖೆಯವರು ಆಗಮಿಸುವಷ್ಟರಲ್ಲಿ ಮೊಸಳೆ ಕಣ್ಮರೆಯಾಗಿತ್ತು. ಇದರಿಂದ ಸ್ಥಳದಲ್ಲಿ ಅತಂಕದ ವಾತಾವರಣ ನಿರ್ಮಾಣವಾಗಿತ್ತು. 

ಗುಂಬಜ್ ಗುದ್ದಾಟ: ಸೋಮವಾರದಿಂದ ಚಾಮುಂಡಿ ಫೋಟೋ ಅಭಿಯಾನ

ಇದಾದ ಬಳಿಕ ಅರಣ್ಯ ಇಲಾಖೆಯವರು ಎಷ್ಟೇ ಹುಡಿಕಿದ್ರು ಮೊಸಳೆ ಮಾತ್ರ ಸಿಕ್ಕಿರಲಿಲ್ಲ. ಒಂದು ವಾರದ ಹಿಂದೆ ಮತ್ತೆ ಕಾಣಿಸಿಕೊಂಡ ಮೊಸಳೆ ಕರುವನ್ನ ಕಚ್ಚಿ ಸಾಯಿಸಿತ್ತು. ಕರುವಿನ ಮೃತ ದೇಹ ಮೋರಿಯಲ್ಲಿ ತೇಲುತ್ತಿತ್ತು. ಆಗಲೂ ಅರಣ್ಯ ಇಲಾಖೆ ಮೃಗಾಲಯದ ಸಿಬ್ಬಂದಿ ಸಾಕಷ್ಟು ಹುಡುಕಾಟ ನಡೆಸಿದ್ರು. ಆದ್ರೆ ಮೊಸಳೆ ಮಾತ್ರ ಸಿಕ್ಕಿರಲಿಲ್ಲ. ಇವತ್ತು ಮತ್ತೆ ಮೊಸಳೆ ಕಾಣಿಸಿಕೊಂಡಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಮೃಗಾಲಯ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಜೆಸಿಬಿಗಳ ಸಹಾಯದಿಂದ ಮೋರಿಯ ಜಾಗವನ್ನ ತೆರೆವುಗೊಳಿಸಿ ಹಗ್ಗದ ಸಹಾಯದೊಂದಿಗೆ ಮೊಸಳೆಯನ್ನ ಸೆರೆಹಿಡಿದ್ರು. ದುರಂತ ಅದ್ರೆ ಆ ಮೊಸಳೆಗೆ ಒಂದು ಕಾಲು ಇರಲಿಲ್ಲ. ಸದ್ಯ ಮೊಸಳೆಯನ್ನ ಮೈಸೂರು ಮೃಗಾಲಯಕ್ಕೆ ತೆಗೆದುಕೊಂಡು ಹೋಗಲಾಗಿದೆ. ಅದಕ್ಕೆ ಆರೈಕೆ ನೀಡಿ ಸಂರಕ್ಷಣೆ ಮಾಡುವುದಾಗಿ ಹೇಳಿದ್ದಾರೆ.

ಒಟ್ಟಾರೆ ಹಲವು ದಿನಗಳಿಂದ ಕನಸಿನಲ್ಲಿ ಕಾಡುತ್ತಿದ್ದ ಬೃಹದಾಕಾರದ ಮೊಸಳೆ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
 

Follow Us:
Download App:
  • android
  • ios