ತುಮಕೂರು  (ನ.15): ಹೋಂಡಾ ಶೋರೂಮ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಭಾರೀ ಪ್ರಮಾಣದಲ್ಲಿ ಹಾನಿಯುಂಟಾಗಿದೆ 

ತುಮಕೂರಿನ ಬಿಹೆಚ್ ರಸ್ತೆಯಲ್ಲಿ ರುವ ಹೊಂಡಾ ಬೈಕ್ ಶೋ ರೂಮ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗಲಿದೆ. ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಶೋ ರೂಮ್ ನಲ್ಲಿದ್ದ ಬೈಕ್ ಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ.

5 ಜನರನ್ನು ಹಿಡದು ತಿಂದ ನರಹಂತಕ ಚಿರತೆ ...

ಲಕ್ಷಾಂತರ ಮೌಲ್ಯದ ಬೈಕ್ ಗಳು  ಸುಟ್ಟು ಭಸ್ಮವಾಗಿದ್ದು ಇದರಿಂದ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.  ಸ್ಥಳಕ್ಕೆ ಅಗ್ನಿ ಶಾಮಕ ದಳದ ವಾಹನಗಳು ಆಗಮಿಸಿ ಬೆಂಕಿ ‌ನಂದಿಸುವ ಕಾರ್ಯ ಮಾಡಿವೆ.

ಅಪ್ಪಾ ನಾನು ಸಾಯುತ್ತಿದ್ದೇನೆ... ಫೋನ್ ಮಾಡಿ ಬೆಂಕಿ ಹಚ್ಚಿಕೊಂಡಳು! ...

ದೊಡ್ಡ ಪ್ರಮಾಣದಲ್ಲಿ ಬೆಂಕಿ ತಗುಲಿರುವ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಇಲ್ಲಿಗೆ 200 ಮೀಟರ್‌ ದೂರದಲ್ಲಿಯೇ ಪಟಾಕಿ ಮಳಿಗೆಗಳು ಇದ್ದು ಭಾರೀ ಅನಾಹುತ ಎದುರಾಗುವ ಮುನ್ನ ಎಚ್ಚರಿಕೆ ವಹಿಸಲಾಗಿದೆ. 
 
ತುಮಕೂರಿನ ಹೊಸ ಬಡವಾಣೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.