ಕೋಲಾರ  (ಜ.06) : ಕೋಲಾರ ಬಿಜೆಪಿ ಸಂಸದ ಎಸ್. ಮುನಿಸ್ವಾಮಿ ಸೇರಿ 18 ಮಂದಿ ವಿವಿಧ ಸಂಘಟನೆಗಳ ಮುಖಂಡರ ವಿರುದ್ಧ ಪ್ರಕರಣ ದಾಖಲಾಗಿದೆ. 

ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ ಆರೋಪದ ಅಡಿಯಲ್ಲಿ ಕೋಲಾರ ನಗರ ಠಾಣೆಯಲ್ಲಿ PSI ಅಣ್ಣಯ್ಯ ದೂರು ಆಧರಿಸಿ FIR ದಾಖಲಿಸಲಾಗಿದೆ. ಸಂಸದ ಮುನಿಸ್ವಾಮಿ ಅವರ ವಿರುದ್ಧ 12ನೇ ಆರೋಪಿಯಾಗಿ FIR ದಾಖಲಿಸಲಾಗಿದೆ. 

ಜನವರಿ 4 ರಂದು ಕೋಲಾರದಲ್ಲಿ ಸಿಎಎ ಪರವಾಗಿ ಬಿಜೆಪಿ ನೇತೃತ್ವದಲ್ಲಿ ಜಾಥಾ ನಡೆದಿದ್ದು, ಈ ವೇಳೆ ಲಾಠಿ ಚಾರ್ಜ್ ನಡೆದಿತ್ತು. ಈ ಸಂದರ್ಭದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 

ಪೌರತ್ವ ಕಾಯ್ದೆ ಬೆಂಬಲಿಸಿ ಪ್ರಧಾನಿಗೆ 1 ಕೋಟಿ ಪತ್ರ: ಶೋಭಾ...

ಬಿಜೆಪಿ ಕೋಲಾರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ, ಭಾರತೀಯ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ನಾರಾಯಣಸ್ವಾಮಿ ವಿರುದ್ಧವೂ FIR ದಾಖಲಾಗಿದೆ. 

ರಾಜ್ಯಗಳಿಗೆ ಸಡ್ಡು ಹೊಡೆಯಲು ಸಿಎಎ ಅಡಿ ಆನ್‌ಲೈನ್‌ ಪೌರತ್ವ?...

ಇನ್ನು ಅಂದು ನಡೆದ ಜಾಥಾ ವೇಳೆ ಕೋಲಾರದ ಕ್ಲಾಕ್ ಟವರ್ ಪ್ರದೇಶದಲ್ಲಿಯೂ ಅಕ್ರಮವಾಗಿ ಜಮಾಯಿಸಿದ್ದ ಗುಂಪಿನ ವಿರುದ್ಧವೂ ಸರ್ಕಲ್ ಇನ್ಸ್ ಪೆಕ್ಟರ್ ಫಾರೂಕ್  ಪಾಷಾ ದೂರು ಆಧರಿಸಿ ಪ್ರಕರಣ ದಾಖಲು ಮಾಡಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರೇ ದೂರುದಾರರಾಗಿದ್ದಾರೆ.