ಮಂಡ್ಯ(ಜ.10): ಪಿಎಸ್‌ಐಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಾಜಿ ಶಾಸಕರ ಇಬ್ಬರು ಸಹೋದರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಹೊಸ ವರ್ಷದ ಸಂದರ್ಭ ಮಾಜಿ ಶಾಸಕರ ಸಹೋದರರು ಪಿಎಸ್‌ಐ ಅವರನ್ನು ನಿಂದಿಸಿದ್ದರು.

PSIಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ ಆರೋಪದಲ್ಲಿ ಕಾಂಗ್ರೆಸ್ ಮಾಜಿ ಶಾಸಕರ ಸಹೋದರಿಬ್ಬರ ವಿರುದ್ಧ FIR ದಾಖಲಿಸಲಾಗಿದೆ. ಮಂಡ್ಯ ಜಿಲ್ಲೆ ಕೆ. ಆರ್. ಪಟ್ಟಣದಲ್ಲಿ ಘಟನೆ ನಡೆದಿದ್ದು, ಕೆ.ಬಿ ರವಿ, ಮಾಜಿ ತಾ.ಪಂ ಅಧ್ಯಕ್ಷ ಕೆ.ಬಿ ಈಶ್ವರ್‌ಪ್ರಸಾದ್ ವಿರುದ್ಧ FIR ದಾಖಲಾಗಿದೆ.

ಅಕ್ರಮ ಖಾತೆ ಸಕ್ರಮ ಮಾಡಿಕೊಡದ್ದಕ್ಕೆ ಪುರಸಭೆ ಸಿಬ್ಬಂದಿ ಹತ್ಯೆಗೆ ಯತ್ನ...!

ರವಿ ಹಾಗೂ ಈಶ್ವರ್‌ಪ್ರಸಾದ್ ಕಾಂಗ್ರೆಸ್ ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್ ಸಹೋದರರು. ಹೊಸವರ್ಷಾಚರಣೆ ವೇಳೆ ಕೆ. ಆರ್‌. ಪೇಟೆ ಟೌನ್ PSI ಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಒಡ್ಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು. ಸಹೋದರರು PSI ಬ್ಯಾಟರಾಯಗೌಡಗೆ ನಿಂದಿಸಿ, ಬೆದರಿಸಿದ್ದರು. 

PSI ಈ ಬಗ್ಗೆ ಕೆ. ಆರ್. ಪೇಟೆ ಟೌನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸೆಶನ್ಸ್ ಕೋರ್ಟ್ ಗುರುವಾರ ಆರೋಪಿಗಳ ಜಾಮೀನು ಅರ್ಜಿ ನಿರಾಕರಿಸಿದೆ. ಈ ಹಿನ್ನಲೆ ಆರೋಪಿ ಈಶ್ವರ್ ಪ್ರಸಾದ್‌ನನ್ನು ಪೋಲಿಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಕೆ.ಬಿ ರವಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಸಿನಿಮಾ ನಿರ್ದೇಶಕನ ಜತೆ ಪರಾರಿಯಾದ ನಟಿ: ಅಜ್ಜಿ ಆತ್ಮಹತ್ಯೆ

ಹೊಸವರ್ಷದ ಸಂಭ್ರಮಾಚರಣೆ ವೇಳೆ ಮಧ್ಯರಾತ್ರಿ 2.15ರ ಸಮಯದಲ್ಲಿ ಪಾರ್ಟಿ ಮುಗಿಸಿ ಮನೆಗೆ ತೆರಳುವಂತೆ PSI ಸೂಚಿಸಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಮಾಜಿ ಶಾಸಕರ ಸಹೋದರರು PSI ಗೆ ಅವ್ಯಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದ್ದರು.