ಚನ್ನಪಟ್ಟಣ[ಜ.09]: ಚಿತ್ರನಿರ್ದೇಶಕನ ಜತೆ ಪ್ರೇಮಾಂಕುರವಾಗಿ ಸಹನಟಿ ಮನೆಯಿಂದ ಪರಾರಿಯಾದ ಹಿನ್ನೆಲೆಯಲ್ಲಿ ನಟಿಯ ಅಜ್ಜಿ ಮತ್ತು ತಾಯಿ ವಿಷೇ ಸೇವಿಸಿದ್ದು, ಅಜ್ಜಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆ, ತಾಯಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಇಲ್ಲಿನ ಬಸವೇಶ್ವರ ನಗರದಲ್ಲಿ ನಡೆದಿದೆ.

ವಿಷ ಸೇವಿಸಿ ತೀವ್ರ ಅಸ್ವಸ್ಥ ಗೊಂಡಿದ್ದ ಅಜ್ಜಿ ಚನ್ನಮ್ಮ ಮಂಡ್ಯ ವೈದ್ಯಕೀಯ ವಿದ್ಯಾಲಯದಲ್ಲಿ ಕೊನೆಯುಸಿರೆಳೆದರೆ, ನಟಿಯ ತಾಯಿ ಸವಿತ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಈ ಸಂಬಂಧ ನಟಿಯ ತಂದೆ ಮಹದೇವಸ್ವಾಮಿ ಎಂಬುದುವರ ರಾಯಚೂರಿನ ಜಿಲ್ಲೆ ಮಾನ್ವಿ ತಾಲೂಕಿನ ಹಳ್ಳಿ ಹೊಸೂರು ಗ್ರಾಮದ ಅಂಜನಪ್ಪ, ಅವರ ತಂದೆ ಸಿದ್ದಪ್ಪ, ಮಾವ ನಿಜಯಾನಂದ ಮತ್ತು ಅಂಜನಪ್ಪ ತಾಯಿ ವಿರುದ್ಧ ನಗರದ ಪೂರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿವಾಹಿತೆ ಗುಪ್ತಾಂಗಕ್ಕೆ ‘ಲವರ್‌’ ಆ್ಯಸಿಡ್‌ ದಾಳಿ!

ಘಟನೆಯ ವಿವರ:

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ವಿಜಯಲಕ್ಷ್ಮಿ ತಂದೆ ಮಹದೇವಸ್ವಾಮಿ, ತಾಯಿ ಸವಿತಾ ಜತೆಗೆ ನಗರದ ಬಸವೇಶ್ವರ ನಗದಲ್ಲಿ ವಾಸವಾಗಿದ್ದರು. ಶಿವರಾಜ್‌ಕುಮಾರ್‌ ಅಭಿನಯದ ಆಯುಷ್ಮಾನ್‌ಭವ, ಮಯೂರ್‌ಪಾಟೇಲ್‌ ನಿರ್ದೇಶನದ ರಾಜೀವ ಸೇರಿದಂತೆ 16 ಚಿತ್ರಗಳಲ್ಲಿ ಸಹನಟಿಯಾಗಿ ವಿಜಯಲಕ್ಷ್ಮಿ ನಟಿಸಿದ್ದಳು.

ಇತ್ತೀಚಿಗೆ ತುಂಗಭದ್ರ ಚಿತ್ರದ ಚಿತ್ರೀಕರಣಕ್ಕೆಂದು ರಾಯಚೂರಿಗೆ ಹೋಗಿದ್ದಾಗ ಚಿತ್ರದ ನಿರ್ದೇಶಕ ಅಂಜನಪ್ಪ ಜತೆಗೆ ಹೆಚ್ಚು ಸಲಿಗೆಯಿಂದ ವರ್ತಿಸುತ್ತಿದ್ದು ಮನೆಯವರ ಗಮನಕ್ಕೆ ಬಂದಿತ್ತು. ಈ ಬಗ್ಗೆ ಮನೆಯವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಡಿ. 15ರಂದು ನಿರ್ದೇಶಕ ಅಂಜನಮ್ಮ ಜತೆಗೆ ಹೋಗಿದ್ದ ವಿಜಯಲಕ್ಷಿ ್ಮ 15 ದಿನಗಳ ಬಳಿಕ ಮನೆಗೆ ಹಿಂದಿರುಗಿದ್ದು, ಇನ್ನು ಮುಂದೆ ಅವನೊಂದಿಗೆ ಹೋಗುವುದಿಲ್ಲ ಎಂದು ಅಜ್ಜಿ ಮತ್ತು ತಾಯಿಯ ಬಳಿ ಪ್ರಮಾಣ ಮಾಡಿದ್ದಳು.

ಮತ್ತೆ ಮನೆ ಬಿಟ್ಟ ನಟಿ:

ಜ. 3ರಂದು ನಗರದ ಬಸವೇಶ್ವರ ನಗರದಲ್ಲಿರುವ ಮನೆಯಿಂದ ವಿಜಯಲಕ್ಷಿ ್ಮ ನಾಪತ್ತೆಯಾಗಿದ್ದು, ಅಂಜನಪ್ಪ ಜತೆಗೆ ಹೋಗಿರಬಹುದೆಂದು ಶಂಕಿಸಿ ಮನೆಯವರು ಕರೆ ಮಾಡಿದಾಗ ಅಂಜನಪ್ಪ ಮಾವ ನಿಜಯಾನಂದ ನಿಮ್ಮ ಮಗಳು ಇಲ್ಲಿ ಇದ್ದಾಳೆ ಎಂದು ಹೇಳಿದ್ದಾರೆ. ತಕ್ಷಣ ಮಹದೇವಸ್ವಾಮಿ ಅಂಜನಪ್ಪ ಸ್ವಗ್ರಾಮದ ರಾಯಚೂರು ಜಿಲ್ಲೆಯ ಹಳ್ಳಿಹೊಸೂರಿಗೆ ಹೋಗಿ ವಿಚಾರಸಿದಾಗ ನಿಮ್ಮ ಮಗಳನ್ನು ಕಳುಹಿಸ ಬೇಕಾದರೆ 50 ಸಾವಿರ ರು. ಹಣ ಕೊಡಿ ಎಂದು ಹೇಳಿದ್ದಾರೆ.

ನಿರ್ಮಾಪಕರ ಒತ್ತಡ:

ಇತ್ತ ನಟಿ ವಿಜಯಲಕ್ಷಿ ್ಮ ಪ್ರೇಮ ಮಹಲ್‌, ಜವಾರಿ ಲವ್‌, ಪ್ರೊಡಕ್ಷನ್‌ ನಂ.1 ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸಲು ಚಿತ್ರ ನಿರ್ಮಾಪಕರ ಜತೆಗೆ ಒಪ್ಪಂದ ಮಾಡಿಕೊಂಡು ಅಡ್ವಾನ್ಸ್‌ ಹಣ ಪಡೆದಿದ್ದರು. ಸಹನಟಿ ನಾಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಅವರ ಮನೆಗೆ ಧಾವಿಸಿದ ಚಿತ್ರ ನಿರ್ಮಾಪಕರು ನಿಮ್ಮ ಮಗಳನ್ನು ಕರೆಸಿಕೊಡಿ ಇಲ್ಲ ನಾವು ನೀಡಿರುವ ಅಡ್ವಾನ್ಸ್‌ ಹಣವನ್ನು ಹಿಂದಕ್ಕೆ ನೀಡಿ ಎಂದು ಒತ್ತಡ ಹಾಕಲಾರಂಭಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಯಿಂದ ಮನನೊಂದ ನಟಿ ವಿಜಯಲಕ್ಷ್ಮಿ ತಾಯಿ ಸವಿತಾ, ಅಜ್ಜಿ ಚನ್ನಮ್ಮ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆಗೆ ಮುನ್ನಾ ನಮ್ಮ ಸಾವಿಗೆ ನಿರ್ದೇಶಕ ಅಂಜನಪ್ಪ ಕಾರಣ ಎಂದು ಮೊಬೈಲ್‌ನಲ್ಲಿ ವಿಡಿಯೋ ಮಾಡಲಾಗಿದೆ.

ಅಂಜಿನಪ್ಪ ಕರೆಸಲು ಯತ್ನ:

ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೂರ್ವ ಠಾಣೆ ಪೊಲೀಸರು ನಿರ್ದೇಶಕ ಅಂಜನಪ್ಪ ಮತ್ತು ನಟಿ ವಿಜಯಲಕ್ಷಿ ್ಮಯನ್ನು ರಾಣೆಗೆ ಕರೆಸಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ನಟಿ ವಿಜಯಲಕ್ಷ್ಮಿ ಮತ್ತು ನಿರ್ದೇಶಕ ಅಂಜನಪ್ಪ ರಾಯಚೂರು ಎಸ್ಪಿ ಕಚೇರಿಗೆ ತೆರಳಿ ನಮಗೆ ರಕ್ಷಣೆ ನೀಡಿ ಎಂದು ದೂರು ಸಲ್ಲಿಸಿರುವುದಾಗಿಯೂ ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ.

ಭಕ್ತನಿಂದ ಹೊರಬಿತ್ತು ಫೋಟೋ: ವಿನಯ್ ಗುರೂಜಿಗೆ ಸಂಕಷ್ಟ..!